ವೈದ್ಯರ ದಿನದ ವಿಶೇಷ ಟಿಪ್ಸ್: ಕೊರೋನಾ ಸೋಂಕು ತಡೆಯಲು ನೀವು ಮಾಡಬೇಕಾದ್ದು ಇಷ್ಟೆ

Upayuktha
0


ಕೊರೋನಾ ಸೋಂಕು ತಡೆಯಿರಿ; ನೀವು ಮಾಡ ಬೇಕಾದುದಿಷ್ಟೆ

1. ಅಂತರ ಕಾಪಾಡಿರಿ. ಹಾಗೂ ಜನ ಜಂಗುಳಿಯಲ್ಲಿ ತಿರುಗಾಡಬೇಡಿ

2. ಮುಖ ಮೂಗು ಮುಚ್ಚುವಂತೆ ಮೂರು ಪದರಗಳ ಮುಖ ಕವಚ ಧರಿಸಲು ಮರೆಯ ಬೇಡಿ

3. ಆಗಾಗ ಸಾಬೂನಿನಲ್ಲಿ ಕೈ ತೊಳೆಯಿರಿ ಅಥವಾ ಸೇನಿಟೈಜರ್ಸ್ ಬಳಸಿ


4. ಹೊರಗೆ ಹೋಗಿ ಬಂದರೆ ಮೊದಲು ಸ್ನಾನ ಮಾಡಿ

5. ದಿನಾ ತೊಳೆದ ಬಟ್ಟೆಯನ್ನೇ ಧರಿಸಿ.

6. ಆಹಾರ ಪದಾರ್ಥ ತರಕಾರಿಗಳನ್ನು ಉಪ್ಪು ನೀರಿನಲ್ಲಿ ತೊಳೆದು ಬಳಸಿ


7. ಸಮತೂಕದ ಆಹಾರ ಸೇವಿಸಿ

8. ದಿನಾ ಬಿಸಿಲ ಸ್ನಾನ ಮಾಡಿ, ಪ್ರಾಣಾಯಾಮ ಮಾಡಿ

9. ತಪ್ಪದೇ ಎರಡು ಡೋಸ್ ಕೋವಿಡ್ ಲಸಿಕೆ ಹಾಕಿಸಿ ಕೊಳ್ಳಿ.ಇದು ಯಾವುದೇ ಅಪಾಯ ತರುವುದಿಲ್ಲ. ಭಯ ಪಡದಿರಿ


ವೈದ್ಯ ದಿನಾಚರಣೆ - ಕಿವಿ ಮಾತು

ಪಡೆಯಿರಿ  ಲಸಿಕೆಯ ಸೋಂಕನು ತಡೆಯಲು

ಇಡುತಿರಿ ಅಂತರ ಜನರೊಡೆ ಸೇರಲು

ಧರಿಸಿರಿ  ಕವಚವ ಮೂಗು ಬಾಯಿಯನು ಮುಚ್ವಲು

ಕರವನು ತೊಳೆಯಿರಿ ಸ್ವಚ್ಛತೆ ಇರಿಸಲು

*******


-ಡಾ ಸುರೇಶ ನೆಗಳಗುಳಿ

ಶಸ್ತ್ರ ಚಿಕಿತ್ಸಕ, ಮಿಶ್ರ ಪದ್ಧತಿ ವೈದ್ಯ, ಪ್ರಾಧ್ಯಾಪಕ ಮತ್ತು ಬರಹಗಾರ

ಮಂಗಳೂರು 575009


(ಉಪಯುಕ್ತ ನ್ಯೂಸ್)


Visit: Upayuktha Directory- You get here You want


‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top