ಲಾಕ್ ಸಡಿಲಿಸಿ, ಕಲ್ಯಾಣ ಮಂಟಪಗಳ ಕಾರ್ಯಾಚರಣೆಗೆ ಅವಕಾಶ ನೀಡಿ: ಮುಖ್ಯಮಂತ್ರಿಗೆ ಮನವಿ

Upayuktha
0



ಬೆಂಗಳೂರು: ಪ್ರಸ್ತುತ ಕೊರೋನಾ ಹಾಗೂ ಲಾಕ್ಡೌನ್ ನಿಯಮಾವಳಿಗಳಿಂದ ಕಳೆದ ಒಂದೂವರೆ ವರ್ಷಗಳಿಂದ ಕಲ್ಯಾಣಮಂಟಪಗಳು ಹಾಗೂ ಅದಕ್ಕೆ ಹೊಂದಿಕೊಂಡ ಅನೇಕ ವೃತ್ತಿಪರರು ತೊಂದರೆ ಅನುಭವಿಸುತ್ತಿದ್ದು, ಡೆಕೋರೇಟರ್ಸ್, ಅಡುಗೆಯವರು, ಫೋಟೋಗ್ರಾಫರ್ಸ್, ವಿಡಿಯೋಗ್ರಾಫರ್ಸ್, ಪುರೋಹಿತರು, ಸ್ವಚ್ಛತಾ ಕೆಲಸದವರು ದೈನಂದಿನ ನಿರ್ವಹಣೆಗೆ ಕಷ್ಟಪಡುವಂತಾಗಿದೆ.


ಈ ಕುರಿತಾಗಿ ಬೆಂಗಳೂರು ಮಹಾನಗರದ  ಕಲ್ಯಾಣಮಂಟಪಗಳ ಒಕ್ಕೂಟವು ಹವ್ಯಕ ಮಹಾಸಭೆಯ ಮುಂದಾಳತ್ವದಲ್ಲಿ ಮಾನ್ಯ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದ್ದು, ಕಲ್ಯಾಣ ಮಂಟಪಗಳ ಕಾರ್ಯಾಚರಣೆಗೆ ಅವಕಾಶ ನೀಡುವಂತೆ ಕೋರಿದೆ.


ಎಲ್ಲ ಕಲ್ಯಾಣ ಮಂಟಪಗಳ ಪರವಾಗಿ ಮಲ್ಲೇಶ್ವರಂನ ಶೃಂಗೇರಿ ಶಂಕರಮಠದ ವ್ಯವಸ್ಥಾಪಕರಾದ ಜಿ. ವಸಂತರಾವ್ ಮತ್ತು ಶ್ರೀ ಅಖಿಲ ಹವ್ಯಕ ಮಹಾಸಭಾದ ಕಾರ್ಯದರ್ಶಿ ಪ್ರಶಾಂತ್ ಕುಮಾರ್ ಭಟ್ ಅವರು ಮುಖ್ಯಮಂತ್ರಿಗಳಿಗೆ ಈ ಮನವಿ ಸಲ್ಲಿಸಿದ್ದಾರೆ.

(ಉಪಯುಕ್ತ ನ್ಯೂಸ್)


Visit: Upayuktha Directory- You get here You want


‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top