ಕೃಷಿ: ಅಂದಪ್ಪನ ಬಾಳಿಗೆ ಸಿಹಿಯಾದ ಹುಣಸೆ ಹುಳಿ

Upayuktha
0



ಉತ್ತರ ಕರ್ನಾಟಕವೆಂದರೆ ಜೀವ ವೈವಿಧ್ಯತೆಯ ತಾಣ. ಎತ್ತ ನೋಡಿದರತ್ತ ಹಲವಾರು ಗಿಡ ಮರಗಳು ಹಾಗೂ ಗುಡ್ಡಗಳಲ್ಲಿ ಹಲವು ಗಿಡ ಮೂಲಿಕೆಗಳ ಜೀವ ತಾಣ. ಗ್ರಾಮೀಣ ಭಾಗದಲ್ಲಿ ಇಂತಹ ಹಲವು ಕಚ್ಚಾ ಪದಾರ್ಥಗಳು ಲಭ್ಯವಿದ್ದರೂ ಅದನ್ನು ವಾಣಿಜ್ಯ ದೃಷ್ಠಿಯಿಂದ ನೋಡಿದವರು ಕಡಿಮೆ. ಕಲ್ಯಾಣ ಕರ್ನಾಟಕ ಭಾಗದಲ್ಲಿ ಎತ್ತ ನೋಡಿದರತ್ತ ಕಾಣಸಿಗುವುದು ಹುಣಸೆ. ಇದನ್ನು ಹಣ್ಣಾದ ಮೇಲೆ ಅಡುಗೆಗೆ ಬಳಸುವವರು ಹೆಚ್ಚು. ಕೆಲವು ಮನೆಗಳಲ್ಲಿ ಕಾಯಿ ಬಳಸಿ ತೊಕ್ಕು, ಚಟ್ನಿ ಮಾಡಿ ಬಳಸುತ್ತಾರೆ. ಇದನ್ನು ಆದಾಯದ ಮೂಲವಾಗಿ ಮೌಲ್ಯವರ್ಧನೆ ಮಾಡಿ ಸೂಕ್ತ ಬಾಟ್ಲಿಂಗ್ /ಪ್ಯಾಕಿಂಗ್ ಮಾಡಿ ವಾಣಿಜ್ಯ ದೃಷ್ಟಿಯಿಂದ ತಯಾರು ಮಾಡಿ ಮಾರಾಟ ಮಾಡುವವರು ಕಡಿಮೆ. ಇಂತಹ ವಿರಳವಾದದ್ದನ್ನು ಸರಳವಾಗಿ ಮಾಡಿ ತೋರಿಸಿದವರು ಕೊಪ್ಪಳ ತಾಲೂಕಿನ ಗೊಂಡಬಾಳ ಗ್ರಾಮದ ಅಂದಾನ ಗೌಡರು.

ಅಂದಾನ ಗೌಡ್ರು ತಮ್ಮ ಪೂರ್ವಿಕರಿಂದ ಪಡೆದ ಜ್ಞಾನದ ಜೊತೆಗೆ ಅವಶ್ಯಕ ಅನುಮತಿಗಳನ್ನು ಸಂಬಂಧಿತ ಇಲಾಖೆಗಳಿಂದ ಪಡೆದು ತಮ್ಮ ಪಾರಂಪರಿಕ ಜ್ಞಾನದಿಂದ ಹುಣಸೇಕಾಯಿ ಚಟ್ನಿ ಮಾಡಲು ತಮ್ಮ ಸಹಧರ್ಮಿಣಿ ಸುಮಿತ್ರಮ್ಮ ಅವರೊಂದಿಗೆ ಕೈ ಹಾಕಿದರು. ಅದರ ಸವಿರುಚಿಗೆ ಮನಸೋತ ಗ್ರಾಹಕರು ಹೆಚ್ಚಿನ ಬೇಡಿಕೆ ಸಲ್ಲಿಸ ತೊಡಗಿದರು. ಮೊದಲಿಗೆ ಕೇವಲ ಬಾಟಲ್ ನಲ್ಲಿ ತುಂಬಿಕೊಡುತ್ತಿದ್ದ ಚಟ್ನಿ ಕ್ರಮೇಣ ಕಿರು ಉದ್ಯಮವಾಗಿ ಬೆಳೆಯಿತು.

ಇಂದು ಆಕರ್ಷಕ ಪ್ಯಾಕಿಂಗ್ ಆಲ್ಲಿ ತಯಾರಾಗುತ್ತಿರುವ ಚಟ್ನಿ 250g, 500g, 1000g ಹಾಗೂ 5ಕೆಜಿ ಪ್ಯಾಕಿಂಗ್ ನಲ್ಲಿ ದೊರೆಯುತ್ತದೆ. ವಾರ್ಷಿಕ ಸುಮಾರು 10 ಕ್ವಿಂಟಾಲ್ ಚಟ್ನಿ ಮಾರಾಟ ಆಗುತ್ತಿದೆ. ಕಾಯಿ ಹುಣಸೆ ಚಟ್ನಿ ಹಾಗೂ ಹಣ್ಣು ಹುಣಸೆ ಚಟ್ನಿ ಮಾರಾಟಕ್ಕೆ ಲಬ್ಯವಾಗುತ್ತಿದೆ. ಕುಟುಂಬದ ಐವರಿಗಲ್ಲದೆ ಸುಮಾರು 15 ಕಾರ್ಮಿಕರಿಗೆ ಆಸರೆಯಾಗಿದೆ. ಯಥೇಚ್ಛವಾಗಿ ನಿಮ್ಮಲ್ಲಿ ಲಭ್ಯವಿರುವ ಹುಣಸೆ ಕಾಯಿಯನ್ನು ಮೌಲ್ಯವರ್ಧನೆ ಮಾಡಿ ಉದ್ಯಮ ಸ್ಥಾಪಿಸಲು ಅಥವಾ ಚಟ್ನಿ ತರಿಸಿಕೊಳ್ಳಲು ಸದಾ ಹಸನ್ಮುಖಿಯಾದ ಅಂದಾನಗೌಡರನ್ನು ಸಂಪರ್ಕಿಸಿ (8970407349, 7795307393). 

 -ಡಾ. ಪಿ. ಆರ್ ಬದರಿ ಪ್ರಸಾದ್ (9900145705)

ಸಹಾಯಕ ಪ್ರಾದ್ಯಾಪಕರು (ಕೀಟಶಾಸ್ತ್ರ)

ಕೃಷಿ ಮಹಾವಿದ್ಯಾಲಯ, ಗಂಗಾವತಿ

Visit: Upayuktha Directory- You get here You want

(ಉಪಯುಕ್ತ ನ್ಯೂಸ್)

‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ


Post a Comment

0 Comments
Post a Comment (0)
To Top