ಸುದಾನ ಶಾಲೆಯಲ್ಲಿ ಕನ್ನಡದ ಸಂಭ್ರಮ

Shreya Hegde
0



ಪುತ್ತೂರು: ಪುತ್ತೂರಿನ ಸುದಾನ ಶಾಲೆಯಲ್ಲಿ ಕನ್ನಡ ರಾಜ್ಯೋತ್ಸವವನ್ನು ನವೆಂಬರ್ 1ರಂದು ಅರ್ಥಪೂರ್ಣವಾಗಿ ಆಚರಿಸಲಾಯಿತು.ಸಭಾಧ್ಯಕ್ಷತೆಯನ್ನು ವಹಿಸಿದ್ದ ಸುದಾನ ಶಾಲೆಯ ಮುಖ್ಯಶಿಕ್ಷಕಿ ಶ್ರೀಮತಿ ಶೋಭಾ ನಾಗರಾಜ್, ಸಂಯೋಜಕರು ಮತ್ತು ಶಿಕ್ಷಕರು ಕನ್ನಡಾಂಬೆಯ ಚಿತ್ರಪಟದ ಎದುರು ದೀಪ ಬೆಳಗಿ, ಪುಷ್ಪನಮನವನ್ನು ಸಲ್ಲಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿದರು.


ಕನ್ನಡ ಶಿಕ್ಷಕಿ ಶ್ರೀಮತಿ ಕವಿತಾ ಅಡೂರು ಅವರು ಮಾತನಾಡಿ "ಕನ್ನಡ ನಾಡು ನುಡಿಯ ಬಗ್ಗೆ ಕಡೆಗಣನೆ ಸಲ್ಲದು. ಕನ್ನಡಿಗರು ಎನ್ನುವುದು ನಮ್ಮ ಅಸ್ತಿತ್ವ. ಅದನ್ನು ಕಳೆದುಕೊಂಡರೆ ನೆಲೆ ಇಲ್ಲದ ದುಸ್ಥಿತಿ ನಮ್ಮದಾಗುತ್ತದೆ. ಹಾಗಾಗಿ ನಾಡುನುಡಿಯ ಬಗೆಗೆ ಹೊಣೆಯರಿತು ನಡೆದುಕೊಳ್ಳೋಣ" ಎಂದು ನುಡಿದರು. ಶಾಲಾ ಮುಖ್ಯ ಶಿಕ್ಷಕಿ ಶ್ರೀಮತಿ ಶೋಭಾ ನಾಗರಾಜ್ ರವರು "ಕನ್ನಡ ಭಾಷೆ ಸ್ಪುಟವಾದ, ಶುದ್ಧವಾದ ಓದು, ಬರೆಯುವಿಕೆಗಳ ಬಗ್ಗೆ ಗೌರವಭಾವವನ್ನು ಹೊಂದುವುದು, ತಾಯ್ನುಡಿಯಾದ ಕನ್ನಡವನ್ನು ಉಸಿರಿನಂತೆ ಕಾಪಾಡಬೇಕು, ಅನ್ಯಭಾಷೆಗಳಿಂದ ಪಡೆದ ಅರಿವಿನಿಂದ ಕನ್ನಡ ನಾಡು-ನುಡಿಗೆ ಸೇವೆಯನ್ನು ಮಾಡಬೇಕು" ಎಂದು ನುಡಿದರು.


ಮುಖ್ಯ ಸಹ ಶಿಕ್ಷಕಿ ಲವೀನ ರೋಸ್ಲೀನ್ ಹನ್ಸ್, ಸಂಯೋಜಕರಾದ ಶ್ರೀಮತಿ ಪ್ರತಿಮಾ, ಗಾಯತ್ರಿ, ಅಮೃತವಾಣಿ ಮತ್ತು ಲಹರಿ ಸಾಹಿತ್ಯ ಸಂಘದ ನಿರ್ದೇಶಕಿ ಪವಿತ್ರಾ , ಉಪ ನಿರ್ದೇಶಕಿ ಸುವರ್ಣ ,ಲಹರಿ ಸಾಹಿತ್ಯ ಸಂಘದ ವಿದ್ಯಾರ್ಥಿ ಪ್ರತಿನಿಧಿ ಧೃತಿ ಎಚ್ ಶೆಟ್ಟಿ ಉಪಸ್ಥಿತರಿದ್ದರು. ಸಂಸ್ಕೃತ ಶಿಕ್ಷಕಿ ಶ್ರೀಮತಿ ಚೇತನಾ ಕಾರ್ಯಕ್ರಮವನ್ನು ನಿರ್ವಹಿಸಿದರು. ವಿದ್ಯಾರ್ಥಿಗಳಿಗೆ ಕನ್ನಡ ಪರ ಸ್ಪರ್ಧೆಗಳನ್ನು ನಡೆಸಿ ವಿಜೇತರಿಗೆ ಕನ್ನಡ ಪುಸ್ತಕ ಬಹುಮಾನವನ್ನು ವಿತರಿಸಲಾಯಿತು. ಶಾಲಾ ಲಹರಿ ಸಾಹಿತ್ಯ ಸಂಘವು ಈ ಕಾರ್ಯಕ್ರಮದ ನೇತೃತ್ವವನ್ನು ವಹಿಸಿತ್ತು.



Post a Comment

0 Comments
Post a Comment (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top