ಪರಿಯಾಲ್ತಡ್ಕದಲ್ಲಿ ನೂತನ ಮಳಿಗೆ ನೇಸರ ಆಗ್ರೋಟೆಕ್ ಶುಭಾರಂಭ

Upayuktha
0


ಪರಿಯಾಲ್ತಡ್ಕ: ಪುಣಚ ಗ್ರಾಮದ ಪರಿಯಾಲ್ತಡ್ಕದಲ್ಲಿ ಆಧುನಿಕ ಕೃಷಿ ಯಂತ್ರೋಪಕರಣಗಳ ಮಾರಾಟ ಮತ್ತು ಸೇವೆಯನ್ನೊಳಗೊಂಡ ಮಳಿಗೆ ನೇಸರ ಆಗ್ರೋಟೆಕ್ ಸೋಮವಾರ ಶುಭಾರಂಭಗೊಂಡಿತು.


ದೀಪಾವಳಿಯಂದು ಆರಂಭವಾಗುತ್ತಿರುವ ಈ ಮಳಿಗೆಯಲ್ಲಿ ಕಳೆ ತೆಗೆಯುವ, ಅಡಿಕೆ ಗಿಡಗಳಿಗೆ ಔಷಧಿ ಸಿಂಪಡಿಸುವ, ಮರ ಕಡಿಯುವ, ಹೀಗೆ ವಿವಿಧ ಬಗೆಯ ಯಂತ್ರೋಪಕರಣಗಳು ಹಾಗೂ ಅವುಗಳಿಗೆ‌ ಸಂಬಂಧಿಸಿದ ಸಲಕರಣೆಗಳು ಲಭ್ಯವಿದ್ದು ಗ್ರಾಮೀಣ ಪ್ರದೇಶದ ಕೃಷಿಕರಿಗೆ ಸಹಾಯಕವಾಗಲಿದೆ. 


ಅಲ್ಲದೆ ನುರಿತ ತಂತ್ರಜ್ಞರಿಂದ ಎಲ್ಲಾ ತರಹದ ಕೃಷಿ ಯಂತ್ರೋಪಕರಣಗಳ ಸೇವೆ ಲಭ್ಯವಿದ್ದು ಕ್ಲಪ್ತ ಸಮಯದಲ್ಲಿ ಸರಿಯಾದ ಸೇವೆ ಒದಗಿಸಲಾಗುವುದು,   ಪರಿಯಾಲ್ತಡ್ಕದ ಪೆಟ್ರೋಲ್ ಪಂಪ್ ನ ಮುಂದೆ ಇರುವ ಮಳಿಗೆಯಲ್ಲಿ ನೇಸರ ಆಗ್ರೋಟೆಕ್ ಕಾರ್ಯ ನಿರ್ವಹಿಸಲಿದ್ದು, ಕೃಷಿಕ ಮಿತ್ರರು ಸದುಪಯೋಗ  ಪಡೆದುಕೊಳ್ಳಬಹುದು ಎಂದು ಇದರ ಸಂಸ್ಥಾಪಕರು ಜನಾರ್ದನ ಕುಲಾಲ್ ತಿಳಿಸಿದರು.


ಈ ಕಾರ್ಯಕ್ರಮದಲ್ಲಿ ಟೆಕ್ನೀಷಿಯನ್ ಶ್ರೀಹರ್ಷ, ಸಿವಿಲ್ ಇಂಜಿನಿಯರ್ ಕಮಲ್ ಕುಲಾಲ್, ವರ್ಣ ಇಲೆಕ್ಟ್ರಾನಿಕ್ಸ್ ನ ರಂಜಿತ್, ನಿತಿನ್ ಕೌಡಿಚ್ಚಾರು, ನವೀನ್ ಅಜ್ಜಿನಡ್ಕ, ಮಹಮ್ಮದ್ ಅಲಿ, ಮುಂತಾದವರು ಉಪಸ್ಥಿತರಿದ್ದರು.


Post a Comment

0 Comments
Post a Comment (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top