ಕನ್ನಡ ಭಾಷೆ ಅತ್ಯಂತ ಪುರಾತನ ಭಾಷೆ: ರಾಘವೇಂದ್ರ ಕೆ. ಬಿ.

Shreya Hegde
0



ಹುನಗುಂದ: ಕನ್ನಡ ಭಾಷೆಯು ಅತ್ಯಂತ ಪುರಾತನ ಭಾಷೆಯಾಗಿದ್ದು, ನಮ್ಮ ಭಾಷೆಗೆ ತನ್ನದೇ ಆದ ಪರಂಪರೆ ಹಾಗೂ ಇತಿಹಾಸವನ್ನು ಹೊಂದಿದೆ ಎಂದು ಸಿದ್ದಗಂಗಾ ಪಬ್ಲಿಕ್ ಸ್ಕೂಲಿನ ಪ್ರಾಂಶುಪಾಲ ರಾಘವೇಂದ್ರ ಕೆ.ಬಿ. ಹೇಳಿದರು.


ತಾಲೂಕಿನ ಕೂಡಲಸಂಗಮ ಪುನರ್ವಸತಿ ಕೇಂದ್ರದಲ್ಲಿರುವ ಶ್ರೀ ಸಿದ್ಧಗಂಗಾ ಪಬ್ಲಿಕ್ ಸ್ಕೂಲ್‌ನಲ್ಲಿ ಕರ್ನಾಟಕ ರಾಜ್ಯೋತ್ಸವವನ್ನು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ, ಭುವನೇಶ್ವರಿಯ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಮಾತನಾಡಿದ ಅವರು, ಕನ್ನಡ ಭಾಷೆಯ ಸಾಹಿತ್ಯಕ್ಕೆ ಅತಿ ಹೆಚ್ಚು ಜ್ಞಾನಪೀಠ ಪ್ರಶಸ್ತಿ ಬಂದಿದ್ದು ನಮಗೆಲ್ಲರಿಗೂ ಹೆಮ್ಮೆಯ ಸಂಗತಿ. ವಿದ್ಯಾರ್ಥಿಗಳು ಅತಿ ಹೆಚ್ಚು ಕನ್ನಡ ಪುಸ್ತಕಗಳನ್ನು ಓದಬೇಕು. ಮಾತೃಭಾಷೆಯ ಮೇಲೆ ಹಿಡಿತವಿದ್ದರೆ ಬೇರೆ ಭಾಷೆಯನ್ನು ನಿರರ್ಗಳವಾಗಿ ಮಾತನಾಡಬಹುದು. ಅನ್ಯ ಭಾಷೆಗಳನ್ನು ಗೌರವಿಸಿ, ಅದರೆ ನಮ್ಮ ಭಾಷೆಯನ್ನು ಪ್ರೀತಿಸಿ, ಇಂಗ್ಲೀಷ ಬದುಕಿನ ಭಾಷೆಯಾದರೆ ಕನ್ನಡ ಭಾವನೆಯ ಭಾಷೆ, ನಮ್ಮ ತಾಯಿ ಭಾಷೆ ಯಾವತ್ತಿಗೂ ಮರೆಯಬಾರದು ಎಂದರು.


ವಿದ್ಯಾರ್ಥಿಗಳಿಂದ ಕನ್ನಡ ನಾಡು, ನುಡಿ, ಪರಂಪರೆಯ ಬಗ್ಗೆ ತಿಳಿಸುವ ಹಾಡುಗಳನ್ನು ಹಾಡಿಸಲಾಯಿತು. ಶಾಲೆಯ ಹಿರಿಯ ಶಿಕ್ಷಕಿಯರಾದ ಶ್ವೇತಾ ಹಿರೆಮಠ, ಅಕ್ಕಮಾಹಾದೇವಿ ಪೂಜಾರ, ಹನಮಂತಪ್ಪ ಭಜಂತ್ರಿ ಅಂಕಿತಾ ಸುನ್ನಾಲ ಹಾಗೂ ಮಹಾಲಕ್ಷ್ಮೀ ಪೂಜಾರ ಉಪಸ್ಥಿತರಿದ್ದರು.

Post a Comment

0 Comments
Post a Comment (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top