ಸುರತ್ಕಲ್: ಯುವ ಜನತೆಯನ್ನು ಭವಿಷ್ಯದ ನಾಯಕರನ್ನಾಗಿ ರೂಪಿಸುವ ಉದ್ದೇಶದಿಂದ ಇಂಟರಾಕ್ಟ್ ಕ್ಲಬ್‌ಗಳು ಕಾರ್ಯ ನಿರ್ವಹಿಸುತ್ತಿವೆ. ಅಂತಾರಾಷ್ಟ್ರೀಯ ರೋಟರಿ ಸಂಸ್ಥೆಯ ವತಿಯಿಂದ 12ರಿಂದ 18 ವರ್ಷದ ಒಳಗಿನ ಯುವಜನರನ್ನು ಒಳಗೊಂಡಿರುವ ಇಂಟರಾಕ್ಟ್ ಕ್ಲಬ್‌ಗಳು ಸ್ವಹಿತ ಮೀರಿದ ಸೇವೆಯನ್ನು ನೀಡುತ್ತಿದೆ ಎಂದು ರೋಟರಿ ಜಿಲ್ಲೆ 3181 ರ ವಲಯ 2 ರ ಅಸಿಸ್ಟೆಂಟ್ ಗವರ್ನರ್ ಸಂದೀಪ್ ರಾವ್ ಇಡ್ಯಾ ನುಡಿದರು.
ಕಾಟಿಪಳ್ಳ ಏಳನೇ ವಿಭಾಗದ ಸರಕಾರಿ ಪದವಿ ಪೂರ್ವ ಕಾಲೇಜಿನ ಪ್ರೌಢ ಶಾಲಾ ವಿಭಾಗದಲ್ಲಿ ಸುರತ್ಕಲ್ ರೋಟರಿ ಕ್ಲಬ್ ವತಿಯಿಂದ ನೂತನವಾಗಿ ರೂಪಿಸಿರುವ ಇಂಟರಾಕ್ಟ್ ಕ್ಲಬ್‌ನ ಉದ್ಘಾಟನೆ ಮತ್ತು ನೂತನ ಪದಾಧಿಕಾರಿಗಳ ಪದಗ್ರಹಣ ನೆರವೇರಿಸಿ ಮಾತನಾಡಿದರು.
ಶಾಲಾ ಉಪ ಪ್ರಾಂಶುಪಾಲೆ ಲತಾ ಶೆಟ್ಟಿ ಮಾತನಾಡಿ, ವಿವಿಧ ವ್ಯಕ್ತಿತ್ವ ವಿಕಸನ ಮತ್ತು ಸಾಮಾಜಿಕ ಸೇವಾ ಕಾರ್ಯಗಳ ಮೂಲಕ ವಿದ್ಯಾರ್ಥಿಗಳು ನಾಯಕತ್ವ ಗುಣಗಳನ್ನು ಬೆಳೆಸಿಕೊಳ್ಳಬೇಕೆಂದರು.
ರೋಟರಿ ಕ್ಲಬ್ ಅಧ್ಯಕ್ಷ ಶ್ರೀಧರ್ ಟಿ.ಎನ್. ಅಧ್ಯಕ್ಷತೆ ವಹಿಸಿದ್ದರು. ಇಂಟರಾಕ್ಟ್ ಕ್ಲಬ್‌ನ ನೂತನ ಅಧ್ಯಕ್ಷೆ ದಿಶಾ ಸೇನಾಲಿಯ ಪ್ರಸಕ್ತ ವರ್ಷ ವಿವಿಧ ಕಾರ್ಯ ಚಟುವಟಿಕೆಗಳನ್ನು ನಡೆಸಲಾಗುವುದೆಂದರು.
ಇಂಟರಾಕ್ಟ್ ನ ಶಿಕ್ಷಕ ಸಂಯೋಜಕ ನಿತಿನ್ ಆರ್ ಪುತ್ರನ್ ಸ್ವಾಗತಿಸಿದರು. ಇಂಟರಾಕ್ಟ್ ಕ್ಲಬ್‌ನ ಕಾರ್ಯದರ್ಶಿ ಗಣೇಶ್ ವಂದಿಸಿದರು. ರಬಿಯ ಕಾರ್ಯಕ್ರಮ ನಿರೂಪಿಸಿದರು. ಸುರತ್ಕಲ್ ರೋಟರಿ ಕ್ಲಬ್‌ನ ಕಾರ್ಯದರ್ಶಿ ಶ್ರೀನಿವಾಸ ರಾವ್ ಪಾದೆಬೆಟ್ಟು, ಇಂಟರಾಕ್ಟ್ ಸಂಯೋಜಕ ರಾಮಮೋಹನ್ ವೈ, ನಿಕಟ ಪೂರ್ವ ಅಧ್ಯಕ್ಷ ರಾಮಚಂದ್ರ ಬಿ. ಕುಂದರ್, ನಿಯೋಜಿತ ಅಧ್ಯಕ್ಷ ಕೃಷ್ಣಮೂರ್ತಿ, ಸದಸ್ಯೆ ಯೋಗಿತಾ ಕೃಷ್ಣಾಪುರ ಮತ್ತು ಇಂಟರಾಕ್ಟ್ ಪದಾಧಿಕಾರಿಗಳು ಉಪಸ್ಥಿತರಿದ್ದರು.


