ಉಚಿತ ವೀಲ್‌ಚೇರ್ ಮತ್ತು ಊರುಗೋಲು ವಿತರಣೆ

Shreya Hegde
0



ಮಂಗಳೂರು: ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ದ.ಕ.ಜಿಲ್ಲಾ ಘಟಕದ ವತಿಯಿಂದ ವಿಶ್ವ ವಿಕಲಚೇತನರ ದಿನಾಚರಣೆಯ ಅಂಗವಾಗಿ, ಡಿ. 3ರಂದು ಆರ್ಥಿಕವಾಗಿ ಹಿಂದುಳಿದ ವಿಕಲ‌ ಚೇತನರಿಗೆ ವೀಲ್‌ಚೇರ್ ಹಾಗೂ ಊರುಗೋಲುಗಳನ್ನು ಉಚಿತವಾಗಿ ವಿತರಿಸಲಾಗುವುದು.  ‌


ಅರ್ಹ ಫಲಾನುಭವಿಗಳು ಅಥವಾ ಅವರ ಕುಟುಂಬದವರು ತಮ್ಮ ವಿವರಗಳನ್ನು ನ.25ರೊಳಗೆ ರೆಡ್ ಕ್ರಾಸ್ ಸೊಸೈಟಿ ದ.ಕ. ಜಿಲ್ಲಾ ಘಟಕ, ಹಳೇ ಜಿಲ್ಲಾಧಿಕಾರಿ ಕಚೇರಿ ಆವರಣ, ಓಲ್ಡ್ ಪೋರ್ಟ್ ರೋಡ್, ಮಂಗಳೂರು-1 ಈ ವಿಳಾಸಕ್ಕೆ ಸಲ್ಲಿಸಲು ವಿನಂತಿಸಲಾಗಿದೆ. ಅರ್ಜಿಗಳನ್ನು ಇ-ಮೇಲ್ ಅಥವಾ ವಾಟ್ಸಾಪ್ ಮೂಲಕವೂ ಸಲ್ಲಿಸಬಹುದು‌ ಎಂದು ರೆಡ್ ಕ್ರಾಸ್ ಸೊಸೈಟಿ ದ.ಕ.ಜಿಲ್ಲಾ ಘಟಕದ ಚೇರ್ಮನ್ ಸಿಎ ಶಾಂತಾರಾಮ್ ಶೆಟ್ಟಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.  ಇ-ಮೇಲ್: ircsdkd@gmail.com  ವಾಟ್ಸಾಪ್: 96068 66210

Post a Comment

0 Comments
Post a Comment (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top