ಮಣಿಪಾಲ: ಮಣಿಪಾಲ್ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ (ಮಾಹೆ) ಸಂಸ್ಥೆಯ ಎಂ.ಐ.ಸಿ ಕ್ಯಾಂಪಸ್ನಲ್ಲಿ ಕಾರ್ಯಾಚರಿಸುತ್ತಿರುವ ರೇಡಿಯೊ ಮಣಿಪಾಲ್ 90.4 MHz ಸಮುದಾಯ ಬಾನುಲಿ ಕೇಂದ್ರವು ಅರ್ಪಿಸುವ 'ಗ್ರಾಹಕ ಜಾಗೃತಿ' ವಿಶೇಷ ಸರಣಿ ಕಾರ್ಯಕ್ರಮದ 18ನೇ ಸಂಚಿಕೆಯು ನವೆಂಬರ್ 5 ರಂದು ಗುರುವಾರ ಸಂಜೆ 4:15ಕ್ಕೆ ಪ್ರಸಾರವಾಗಲಿದೆ.
ಈ ಸಂಚಿಕೆಯಲ್ಲಿ ಉಡುಪಿಯ ಬಳಕೆದಾರರ ವೇದಿಕೆಯ ವಿಶ್ವಸ್ಥರಾದ ನಿಡುವಜೆ ರಾಮ ಭಟ್ ಅವರು ಗ್ರಾಹಕರ ಹಕ್ಕುಗಳು ಹಾಗೂ ಜಾಗೃತಿಗೆ ಸಂಬಂಧಿಸಿದ ಮುಖ್ಯ ವಿಷಯಗಳ ಕುರಿತು ಉಪಯುಕ್ತ ಮಾಹಿತಿ ನೀಡಲಿದ್ದಾರೆ. ಸದರಿ ಕಾರ್ಯಕ್ರಮದ ಮರುಪ್ರಸಾರವು ನವೆಂಬರ್ 6 ರಂದು ಶುಕ್ರವಾರ ಮಧ್ಯಾಹ್ನ 12:15ಕ್ಕೆ ಪ್ರಸಾರವಾಗಲಿದೆ. ರೇಡಿಯೊ ಮಾತ್ರವಲ್ಲದೆ, ದೂರದೂರಿನ ಶ್ರೋತೃಗಳು ಹಾಗೂ ಸಾರ್ವಜನಿಕರು ಆಂಡ್ರಾಯ್ಡ್ ಹಾಗೂ ಐಫೋನ್ನಲ್ಲಿ ‘Radio Manipal’ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳುವ ಮೂಲಕವೂ ಈ ಕಾರ್ಯಕ್ರಮವನ್ನು ಆಲಿಸಬಹುದಾಗಿದೆ ಎಂದು ರೇಡಿಯೊ ಮಣಿಪಾಲ ಸಮುದಾಯ ಬಾನುಲಿ ಕೇಂದ್ರದ ಪ್ರಕಟಣೆ ತಿಳಿಸಿದೆ.

