ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ: ರೋಟರಿ ಆಂಗ್ಲ ಮಾಧ್ಯಮ ಶಾಲೆಗೆ ಸಮಗ್ರ ಪ್ರಶಸ್ತಿ

Shreya Hegde
0



ಮೂಡುಬಿದಿರೆ: ವಿದ್ಯಾರ್ಥಿಗಳ ಪ್ರತಿಭೆಯ ಅನಾವರಣಕ್ಕೆ ವೇದಿಕೆಯಾದ ಪ್ರಾಂತ್ಯ ಶಾಲೆಯಲ್ಲಿ ನಡೆದ ಜ್ಯೋತಿನಗರ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಸ್ಪರ್ಧೆಯಲ್ಲಿ ರೋಟರಿ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳು ಅಭೂತಪೂರ್ವ ಯಶಸ್ಸು ದಾಖಲಿಸಿ ಕಿರಿಯ ಮತ್ತು ಹಿರಿಯ ಪ್ರಾಥಮಿಕ ವಿಭಾಗದಲ್ಲಿ ಸಮಗ್ರ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡಿದ್ದಾರೆ.  ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ಮೂಡುಬಿದಿರೆ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಹಾಗೂ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ- ಪ್ರಾಂತ್ಯ ಇವರ ಜಂಟಿ ಆಶ್ರಯದಲ್ಲಿ ನಡೆದ ಈ ಸ್ಪರ್ಧೆಯಲ್ಲಿ ರೋಟರಿ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳು ತಮ್ಮ ಬಹುಮುಖ ಪ್ರತಿಭೆಯಿಂದ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. 


ಪ್ರಾಥಮಿಕ ಹಾಗೂ ಪ್ರೌಢ ವಿಭಾಗಗಳಲ್ಲಿ ಸ್ಪರ್ಧಾರ್ಥಿಗಳು ಒಟ್ಟು 31 ಬಹುಮಾನಗಳನ್ನು ತಮ್ಮದಾಗಿಸಿಕೊಂಡಿದ್ದಾರೆ.

ಕಿರಿಯ ಪ್ರಾಥಮಿಕ ವಿಭಾಗದಲ್ಲಿ 5 ಪ್ರಥಮ, 3 ದ್ವಿತೀಯ ಬಹುಮಾನಗಳು.

ಹಿರಿಯ ಪ್ರಾಥಮಿಕ ವಿಭಾಗದಲ್ಲಿ 6 ಪ್ರಥಮ, 1 ದ್ವಿತೀಯ ಹಾಗೂ 4 ತೃತೀಯ ಬಹುಮಾನಗಳು

ಪ್ರೌಢಶಾಲಾ ವಿಭಾಗದಲ್ಲಿ 6 ಪ್ರಥಮ, 3 ದ್ವಿತೀಯ ಹಾಗೂ 3 ತೃತೀಯ ಬಹುಮಾನಗಳು

ಈ ಮೂಲಕ ಶಾಲೆಯ ವಿದ್ಯಾರ್ಥಿಗಳು ಒಟ್ಟು 17 ಪ್ರಥಮ, 7 ದ್ವಿತೀಯ ಹಾಗೂ 10 ತೃತೀಯ ಬಹುಮಾನಗಳನ್ನು ಗಳಿಸಿ ಗಮನಾರ್ಹ ಸಾಧನೆ ಮಾಡಿದ್ದಾರೆ. ಹಾಗೂ ಒಟ್ಟು 17 ವಿದ್ಯಾರ್ಥಿಗಳು ತಾಲೂಕು ಮಟ್ಟದ ಸ್ಪರ್ಧೆಗೆ ಆಯ್ಕೆ ಆಗಿದ್ದಾರೆ.


ಕಿರಿಯ ಪ್ರಾಥಮಿಕ ವಿಭಾಗ

ಪ್ರಥಮ ಸ್ಥಾನ

ಇಂಗ್ಲಿಷ್ ಕಂಠಪಾಠ– ರಿಯಾನ್ ಜಾಝೀಲ್ ಕುಟ್ಟಿನ್ಹ 

ಛದ್ಮವೇಷ – ಪ್ರೇಕ್ಷ ಶೆಟ್ಟಿ

ಕಥೆ ಹೇಳುವುದು– ಪ್ರದ್ಯುಮ್ನ ಪಿ. ಕಲ್ಲೂರಾಯ

ದೇಶಭಕ್ತಿ ಗೀತೆ– ಆಪ್ತಿ ಶೆಟ್ಟಿ

ಕ್ಲೇ ಮಾಡೆಲಿಂಗ್– ಆರ್ಯನ್ ಎಲ್. ಸಾಲಿಯಾನ್

ದ್ವಿತೀಯ ಸ್ಥಾನ 

ಆಶುಭಾಷಣ– ಅಕುಲ್ ಮಹೇಶ್ ಮಂಗಜ್

ಭಕ್ತಿ ಗೀತೆ– ಶರಣ್ಯ ಬೆಳ್ಳಿರಾಯ

ಚಿತ್ರಕಲೆ– ಅಥರ್ವ ಪಿ. ಕೋಟ್ಯಾನ್


ಹಿರಿಯ ಪ್ರಾಥಮಿಕ ವಿಭಾಗ

ಪ್ರಥಮ ಸ್ಥಾನಗಳು

ಶ್ರೀಜಾ ಆರ್. ಅಂಚನ್ (ಕನ್ನಡ ಕಂಠಪಾಠ)

ಸಫಾ ಫಾತಿಮಾ (ಧಾರ್ಮಿಕ ಪಠಣ– ಅರೇಬಿಕ್)

ಶಿವಂ (ಮಿಮಿಕ್ರಿ)

ವೃತ್ತಿ (ಅಭಿನಯ ಗೀತೆ)

ರಿಯಾ ಪೂಜಾರಿ (ಚಿತ್ರಕಲೆ)

ಶ್ರೀಜಾ ಆರ್. ಅಂಚನ್ (ಕಥೆ ಹೇಳುವುದು)


ದ್ವಿತೀಯ ಸ್ಥಾನಗಳು

ಗಾನವಿ (ಭಕ್ತಿಗೀತೆ)

ತೃತೀಯ ಸ್ಥಾನಗಳು

ಕೆ. ಲಾವಣ್ಯ ಕಾಮತ್ (ಧಾರ್ಮಿಕ ಪಠಣ– ಸಂಸ್ಕೃತ)

ಗಾನವಿ (ದೇಶಭಕ್ತಿಗೀತೆ)

ಪ್ರತ್ಯುಷ್ (ಕ್ಲೇ ಮಾಡೆಲಿಂಗ್)

ಭಾನ್ವಿ ಎಸ್. (ಆಶುಭಾಷಣ)


ಪ್ರೌಢಶಾಲಾ ವಿಭಾಗ

ಪ್ರಥಮ ಸ್ಥಾನಗಳು

ವೆಲೋನಿ ಕಾರ್ಡೋಜಾ 10ನೇ ತರಗತಿ- ಹಿಂದಿ ಭಾಷಣ   

ಹಂಸಿಕಾ 9ನೇ ತರಗತಿ- ಜನಪದ ಗೀತೆ 

ರೆನಿಷಾ ಮನೋಳ ಡಿಸೋಜಾ 10ನೇ ತರಗತಿ- ಪ್ರಬಂಧ ಬರವಣಿಗೆ


ದ್ವಿತೀಯ ಸ್ಥಾನಗಳು

ನಂದನಾ ಪ್ರಭು ಮತ್ತು ರಂಜನಾ ಬೈದಬೆಟ್ಟು ಪೈ 9ನೇ ತರಗತಿ- ರಸಪ್ರಶ್ನೆ 

ಸಿದ್ಧಾರ್ಥ್ 10ನೇ ತರಗತಿ- ಇಂಗ್ಲಿಷ್ ಭಾಷಣ 

ಸಾನ್ವಿ 10ನೇ ತರಗತಿ- ರಂಗೋಲಿ


ತೃತೀಯ ಸ್ಥಾನಗಳು

ಸರ್ವಾಣಿ ಎಸ್– 8ನೇ ತರಗತಿ- ಭಾವಗೀತೆ 

ದಿಶಾ ಪ್ರದೀಪ್ ದೇವಾಡಿಗ 8ನೇ ತರಗತಿ- ಕವನ ವಾಚನ 

ಆದ್ಯಾ 8ನೇ ತರಗತಿ- ಗಜಲ್ 


ಎಲ್ಲಾ ವಿಜೇತ ವಿದ್ಯಾರ್ಥಿಗಳಿಗೆ ಶಾಲಾ ಆಡಳಿತ ಮಂಡಳಿ, ಸಂಚಾಲಕರು, ಮುಖ್ಯೋಪಾಧ್ಯಾಯಿನಿ ಹಾಗೂ ಶಿಕ್ಷಕ ಶಿಕ್ಷಕೇತರ ವೃಂದ ಶುಭ ಹಾರೈಸಿದ್ದಾರೆ.

Post a Comment

0 Comments
Post a Comment (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top