ಸಿ ಎ ಫೌಂಡೇಷನ್ ಪರೀಕ್ಷೆ: ಸಂತ ಫಿಲೋಮಿನಾ ಪ ಪೂ ಕಾಲೇಜಿನ ಹಿರಿಯ ವಿದ್ಯಾರ್ಥಿಗಳ ಸಾಧನೆ

Shreya Hegde
0



ಪುತ್ತೂರು: ಸೆಪ್ಟೆಂಬರ್ 2026ರಲ್ಲಿ ಇನ್ಸ್ಟಿಟ್ಯೂಟ್ ಆಫ್ ಚಾರ್ಟೆಡ್ ಅಕೌಂಟೆಂಟ್ಸ್ ಆಫ್ ಇಂಡಿಯಾ (ICAI) ನಡೆಸಿದ ಸಿ ಎ (CA) ಫೌಂಡೇಷನ್ ಪರೀಕ್ಷೆಯಲ್ಲಿ ಪುತ್ತೂರಿನ ಸಂತ ಫಿಲೋಮಿನಾ ಪದವಿ ಪೂರ್ವ ಕಾಲೇಜಿನ ಹಿರಿಯ ವಿದ್ಯಾರ್ಥಿಗಳಾದ ಬಿ. ವಿ. ಅನು ಮತ್ತು ಕೆ. ಮೊಹಮ್ಮದ್ ಅಜ್ಮಲ್ ಇವರು ಉತ್ತೀರ್ಣರಾಗುವ ಮೂಲಕ ಅತ್ಯುತ್ತಮ ಸಾಧನೆ ಮಾಡಿದ್ದಾ‌ರೆ.


ಸಾಧನೆಗೈದ ಬಿ.ವಿ. ಅನು ಅವರು ಬೆಂಗಳೂರು ನಿವಾಸಿ ವೀರಭದ್ರಯ್ಯ ಹಾಗೂ ಭಾಗ್ಯ ದಂಪತಿಗಳ ಪುತ್ರಿಯಾಗಿದ್ದಾರೆ. ಕೆ. ಮೊಹಮ್ಮದ್ ಅಜ್ಮಲ್ ಅವರು ಪುತ್ತೂರು ನಿವಾಸಿ ಕೆ. ಎಂ. ಹಮ್ಜಾ ಹಾಗೂ ಆಫ್ರಾ ಎಂ. ದಂಪತಿಗಳ ಪುತ್ರರಾಗಿದ್ದಾರೆ. ವಿದ್ಯಾರ್ಥಿಗಳ ಈ ಸಾಧನೆಯನ್ನು ಕಾಲೇಜಿನ ಪ್ರಾಂಶುಪಾಲರಾದ ರೆ. ಫಾ. ಅಶೋಕ್ ರಾಯನ್ ಕ್ರಾಸ್ತಾ ಅವರು ಶ್ಲಾಘಿಸಿ, ಅಭಿನಂದನೆಗಳನ್ನು ಸಲ್ಲಿಸಿದರು. ಈ ಸಂದರ್ಭದಲ್ಲಿ ಕಾಲೇಜಿನ ಉಪನ್ಯಾಸಕರಾದ ಸಂಜಯ್ ಎಸ್., ರಾಹುಲ್, ಭರತ್ ಜಿ. ಪೈ ಹಾಗೂ ಗೀತಾ ಅವರು ಉಪಸ್ಥಿತರಿದ್ದು ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು.

Post a Comment

0 Comments
Post a Comment (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top