ಮನುಷ್ಯನ ದೈನಂದಿನ ಜೀವನದಲ್ಲಿ ಸೂಕ್ಷ್ಮಜೀವಿಗಳ ಅರಿವು ಮಹತ್ವದ್ದು – ಡಾ. ಭಾರತಿ ಪ್ರಕಾಶ್

Shreya Hegde
0



ಮಂಗಳೂರು: ವಿಶ್ವವಿದ್ಯಾನಿಲಯ ಕಾಲೇಜು ಮಂಗಳೂರಿನ ಸ್ನಾತಕೋತ್ತರ ವಾಣಿಜ್ಯ ವಿಭಾಗದ ವತಿಯಿಂದ ಆಯೋಜಿಸಲಾದ ‘ಜ್ಞಾನ ಸೇತು – ಬಿಯಾಂಡ್ ಕಾಮರ್ಸ್’ ಮೊದಲನೇ ಅವೃತ್ತಿಯ ಅಂತರಶಿಸ್ತೀಯ ಉಪನ್ಯಾಸ ಕಾರ್ಯಕ್ರಮದಲ್ಲಿ ಸೂಕ್ಷ್ಮಜೀವಶಾಸ್ತ್ರದ ಮೂಲಭೂತ ಪರಿಕಲ್ಪನೆಗಳು ಹಾಗೂ ಅದರ ಪ್ರಸ್ತುತತೆಯ ಕುರಿತು ವಿಶೇಷ ಉಪನ್ಯಾಸ ನಡೆಯಿತು.


ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ ವಿಶ್ವವಿದ್ಯಾನಿಲಯ ಕಾಲೇಜಿನ ಸೂಸೂಕ್ಷ್ಮಣುಜೀವ ವಿಜ್ಞಾನ ವಿಭಾಗದ ಸಹಪ್ರಾಧ್ಯಾಪಕರಾದ ಡಾ. ಭಾರತಿ ಪ್ರಕಾಶ್ ಅವರು ಸೂಕ್ಷ್ಮಜೀವಶಾಸ್ತ್ರದ ಮೂಲಭೂತ ಅಂಶಗಳನ್ನು ಸರಳವಾಗಿ ವಿವರಿಸಿದರು. ಸೂಕ್ಷ್ಮಜೀವಿಗಳ ಸ್ವರೂಪ, ಅವುಗಳ ವಿಧಗಳು, ಮಾನವನ ಜೀವನದಲ್ಲಿ ಅವುಗಳ ಪಾತ್ರ ಹಾಗೂ ಆರೋಗ್ಯ, ಆಹಾರ, ಪರಿಸರ ಮತ್ತು ವಿವಿಧ ಕ್ಷೇತ್ರಗಳಲ್ಲಿ ಸೂಕ್ಷ್ಮಜೀವಶಾಸ್ತ್ರದ ಮಹತ್ವವನ್ನು ತಿಳಿಸಿಕೊಟ್ಟರು. ದೈನಂದಿನ ಜೀವನದಲ್ಲಿ ಸೂಕ್ಷ್ಮಜೀವಿಗಳು ವಹಿಸುವ ಪಾತ್ರವನ್ನು ಉದಾಹರಣೆಗಳ ಮೂಲಕ ವಿವರಿಸಿ ವಿದ್ಯಾರ್ಥಿಗಳಲ್ಲಿ ವೈಜ್ಞಾನಿಕ ಅರಿವು ಮೂಡಿಸಿದರು.


ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಸ್ನಾತಕೋತ್ತರ ವಿಭಾಗಗಳ ಸಲಹೆಗಾರರಾದ ಡಾ. ಎ. ಸಿದ್ದೀಕ್ ಅವರು ಮಾತನಾಡಿ, ಇಂದಿನ ಉನ್ನತ ಶಿಕ್ಷಣದಲ್ಲಿ ಅಂತರಶಿಸ್ತೀಯ ಅಧ್ಯಯನದ ಅಗತ್ಯವನ್ನು ವಿವರಿಸಿದರು. ವಾಣಿಜ್ಯ ವಿದ್ಯಾರ್ಥಿಗಳು ತಮ್ಮ ಅಧ್ಯಯನವನ್ನು ಕೇವಲ ಲೆಕ್ಕಪತ್ರ, ಹಣಕಾಸು ಮತ್ತು ವ್ಯವಹಾರ ನಿರ್ವಹಣೆಗೆ ಸೀಮಿತಗೊಳಿಸದೆ, ವಿಜ್ಞಾನ ಸೇರಿದಂತೆ ಇತರ ಜ್ಞಾನಶಾಖೆಗಳ ಬಗ್ಗೆಯೂ ಅರಿವು ಬೆಳೆಸಿಕೊಳ್ಳಬೇಕು ಎಂದು ಹೇಳಿದರು. ಸೂಕ್ಷ್ಮಜೀವಶಾಸ್ತ್ರಕ್ಕೂ ವಾಣಿಜ್ಯ ಕ್ಷೇತ್ರಕ್ಕೂ ಇರುವ ಸಂಬಂಧವನ್ನು ವಿವರಿಸಿದ ಅವರು, ಆಹಾರ ಸಂಸ್ಕರಣೆ, ಔಷಧೋದ್ಯಮ, ಜೈವಿಕ ತಂತ್ರಜ್ಞಾನ, ಪರಿಸರ ನಿರ್ವಹಣೆ ಮತ್ತು ಆರೋಗ್ಯ ಕ್ಷೇತ್ರಗಳಲ್ಲಿನ ಉದ್ಯಮಾವಕಾಶಗಳನ್ನು ಅರ್ಥಮಾಡಿಕೊಳ್ಳಲು ವೈಜ್ಞಾನಿಕ ಜ್ಞಾನ ಸಹಕಾರಿಯಾಗಿದೆ ಎಂದರು. 


ಕಾರ್ಯಕ್ರಮದಲ್ಲಿ ವಿಭಾಗದ ಉಪನ್ಯಾಸಕರಾದ ಡಾ. ವೆಂಕಟೇಶ್ ನಾಯಕ್ ಹಾಗೂ ಡಾ. ದಿನಕರ್ ಉಪಸ್ಥಿತರಿದ್ದರು. ವಿಭಾಗದ ವಿದ್ಯಾರ್ಥಿನಿಗಳಾದ ಕು. ಶಾಂತಿಕೃಪಾ ಸ್ವಾಗತಿಸಿ, ಕು. ಶ್ರುತಿ ವಂದಿಸಿದರು.    ಕು. ಪ್ರಿಯಾಲ್ ಆಳ್ವ ಕಾರ್ಯಕ್ರಮ ನಿರೂಪಿಸಿದರು.

Post a Comment

0 Comments
Post a Comment (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top