ವಿಶ್ವ ಹಿರಿಯ ನಾಗರಿಕರ ದಿನಾಚರಣೆ: ಉಚಿತ ಆರೋಗ್ಯ ತಪಾಸಣೆ

Shreya Hegde
0

‌

ಮಂಗಳೂರು:  ದೇರಳಕಟ್ಟೆ ಸಮೀಪದ ಬಗಂಬಿಲ ಅಂಗನವಾಡಿ ಕೇಂದ್ರದಲ್ಲಿ ಕಣಚೂರು ಆಯುರ್ವೇದ ಕಾಲೇಜು ಆಸ್ಪತ್ರೆ ವತಿಯಿಂದ  ದೇರಳಕಟ್ಟೆ, ತ್ರಿವರ್ಣ ಫೌಂಡೇಶನ್ (ರಿ) ಸಹಯೋಗದಲ್ಲಿ ಕೋಟೆಕಾರ್ ಪಟ್ಟಣ ಪಂಚಾಯತ್ ಆಶ್ರಯದಲ್ಲಿ ಗುರುವಾರ (ಅ.1) ವಿಶ್ವ ಹಿರಿಯ ನಾಗರಿಕರ ದಿನಾಚರಣೆಯ ಪ್ರಯುಕ್ತ ಉಚಿತ ಚಿಕಿತ್ಸಾ ಶಿಬಿರವನ್ನು ನಡೆಸಲಾಯಿತು.


ಬೆಳಿಗ್ಗೆ 9:00 ಕ್ಕೆ ಅಂಗನವಾಡಿ ಕಾರ್ಯಕರ್ತೆಯರಿಂದ ದೀಪ ಬೆಳಗುವುದರೊಂದಿಗೆ ಉದ್ಘಾಟನೆಗೊಂಡು ಮುಖ್ಯ ಆತಿಥಿಗಳಾಗಿ ಬಂದಿದ್ದ ಕೋಟೆಕಾರ್ ಪಟ್ಟಣ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ದಿವ್ಯಾ ಸತೀಶ ಶೆಟ್ಟಿ ಅವರು ಮಾತನಾಡುತ್ತಾ, ಬಡ ಜನರಿಗೆ ಉಚಿತ ಅರೋಗ್ಯ ಭಾಗ್ಯ ಕರುಣಿಸುವ ಡಾ ಕಣಚೂರು ಮೋನು ಮತ್ತು ಸಂಸ್ಥೆಯ ಪ್ರಮುಖರನ್ನು ಅಭಿನಂದಿಸಿದರು. ವಿಶೇಷ ಅತಿಥಿಗಳಾಗಿದ್ದ ಸಂಸ್ಥೆಯ ವೈದ್ಯಕೀಯ ಅಧೀಕ್ಷಕ ಡಾ ಸುರೇಶ ನೆಗಳಗುಳಿ ಅವರು,  ಆರೋಗ್ಯವೇ ಅತಿ ಪ್ರಮುಖ ಸಂಪತ್ತು ಹಾಗೂ ಅದನ್ನು ಗಳಿಸಿ ಉಳಿಸಿ ಕೊಳ್ಳಬೇಕು ಎಂದು ಕರೆ ನೀಡಿದರು. ಇನ್ನೋರ್ವ ಆತಿಥಿ ಭುವನ್ ಕನ್ಸ್ಟ್ರಕ್ಷನ್ ಮಾಲಕ ಸುಂದರ ಗಟ್ಟಿ ಉಪಸ್ಥಿತರಿದ್ದರು.


ಗ್ರಾಮೀಣ ಭಾಗದ ಹಿರಿಯ ನಾಗರಿಕರು, ಮಹಿಳೆಯರು ಮತ್ತು ಮಕ್ಕಳಲ್ಲಿ ಆಯುರ್ವೇದದ ಬಗ್ಗೆ ಜಾಗೃತಿ ಮೂಡಿಸುವುದು, ಮಳೆಗಾಲದ ಕಾಯಿಲೆಗಳ ತಪಾಸಣೆ ಮತ್ತು ಉಚಿತ ಔಷಧಿ ವಿತರಣೆಯ ಉದ್ದೇಶ ಹೊಂದಿದ ಈ ಶಿಬಿರದಲ್ಲಿ ಡಾ ಅರ್ಚನಾ. ಡಾ ವಿಶೃತ್, ಡಾ ಅದ್ವೈತ, ಹಾಗೂ ರಾಜಶ್ರೀ ವಿಜಿತಾ ರನಿತಾ ನಿವೇದಿತಾ ಮತ್ತು ಭಾರತೀ  ಸಹಕರಿಸಿದರು ಡಾ ಚರಣ್ ಎಲಿಯಾಣ ಹಾಗೂ ಡಾ ಸಲೀಮಾ ಶಿಬಿರದ ಮೇಲ್ವಿಚಾರಣೆ ನಡೆಸಿದ್ದರು.ಒಟ್ಟು  87 ಜನರ ಆರೋಗ್ಯ ತಪಾಸಣೆ ಮಾಡಲಾಯಿತು. ಇವರಲ್ಲಿ 34 ಹಿರಿಯ ನಾಗರಿಕರು, 41 ಮಹಿಳೆಯರು  ಮತ್ತು 12  ಮಕ್ಕಳು  ಇದರ ಸದುಪಯೋಗ ಪಡೆದರು. 


ಉಚಿತ ರಕ್ತದೊತ್ತಡ ಮತ್ತು ಮಧುಮೇಹ ತಪಾಸಣೆ

ನಾಡಿ ಪರೀಕ್ಷೆ ಮತ್ತು ಪ್ರಕೃತಿ ವಿಶ್ಲೇಷಣೆ 3 ದಿನಗಳ ಉಚಿತ ಆಯುರ್ವೇದ ಔಷಧಿ ವಿತರಣೆ ಮುಂದಿನ ಚಿಕಿತ್ಸೆಗಾಗಿ ಕಣಚೂರು ಆಸ್ಪತ್ರೆಯಲ್ಲಿ 50% ರಿಯಾಯಿತಿ ಕಾರ್ಡ್ ವಿತರಣೆ ಮಾಡಲಾಯಿತು.

Post a Comment

0 Comments
Post a Comment (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top