ಎಸ್.ಡಿ.ಎಂ. ಶಿಕ್ಷಕ ಶಿಕ್ಷಣ ಕಾಲೇಜು ಉಜಿರೆ: ವಾಲ್ಮೀಕಿ ಜಯಂತಿ ಆಚರಣೆ

Shreya Hegde
0



ಉಜಿರೆ: ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಶಿಕ್ಷಕರ ತರಬೇತಿ ಸಂಸ್ಥೆ(ಡಿ.ಎಡ್.) ಹಾಗೂ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಶಿಕ್ಷಣ ಮಹಾವಿದ್ಯಾಲಯ (ಬಿ.ಎಡ್) ದಲ್ಲಿ ವಾಲ್ಮೀಕಿ ಜಯಂತಿಯನ್ನು ಆಚರಿಸಲಾಯಿತು.


ಪ್ರಾಂಶುಪಾಲ ಡಾ ಸಂತೋಷ್ ಆಲ್ಬರ್ಟ್ ಸಲ್ಡಾನ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡುತ್ತಾ ರಾಮಾಯಣವು ಭಾರತೀಯರ ಜೀವನ ಚರಿತ್ರೆಯನ್ನು ಮತ್ತು ಸಂಸ್ಕöÈತಿಯನ್ನು ಪ್ರತಿಬಿಂಬಿಸುವ ಅದ್ಭುತ ಮಹಾಕಾವ್ಯ. ನಮ್ಮ ಬದುಕಿನ ಕೈಗನ್ನಡಿಯಂತಿದ್ದು ನಾವು ಮೌಲ್ಯಗಳನ್ನು ಅಳಡಿಸಿಕೊಂಡು ಹೇಗೆ ಬದುಕಬೇಕೆಂಬುದನ್ನು ಸಾರಿ ಹೇಳುವ ಬದುಕಿನ ಗ್ರಂಥವಾಗಿದೆ. ಜಗದ ಕವಿ ಮಹರ್ಷಿ ವಾಲ್ಮೀಕಿಯ ಪೂರ್ವ ವೃತ್ತಾಂತ ನೈಜತೆಗಿಂತ ದಂತಕಥೆಯಾಗಿ ಪುರಾಣವಾಗಿ ಹೇಳುವುದನ್ನು ಇಂದಿಗೂ ಕಾಣುತ್ತೇವೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.


ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ದ್ವಿತೀಯ ಬಿ.ಇಡಿ. ಪ್ರಶಿಕ್ಷಣಾರ್ಥಿ ಆದಿತ್ಯ ಬಿ ಆರ್ ಮಾತನಾಡುತ್ತಾ ವಾಲ್ಮೀಕಿ ಬರೆದ ರಾಮಾಯಣದ ಆಧಾರದ ಮೇಲೆ ಹಲವಾರು ಭಾಷೆಗಳಲ್ಲಿ ಸಾಹಿತ್ಯ ಪ್ರಕಾರಗಳು ರಚನೆಯಾಗಿರುವುದನ್ನು ಕಾಣುತ್ತೇವೆ. ವಾಲ್ಮೀಕಿಯ ಕಾವ್ಯ ಇತರರಿಗೆ ಸ್ಫೂರ್ತಿಯಾಗಿದ್ದು ಹಲವಾರು ಸಾಹಿತಿಗಳು ತಮ್ಮ ಅನುಭವ, ಜ್ಞಾನದ ಆಧಾರದ ಮೇಲೆ ರಾಮಾಯಣವನ್ನು ಕಾಲಾನುಘಟ್ಟಕ್ಕೆ ಅನುಗುಣವಾಗಿ ತಮ್ಮದೇ ದೃಷ್ಠಿಕೋನದಲ್ಲಿ ಸಾಹಿತ್ಯವನ್ನು ರಚಿಸಿದ್ದಾರೆ. ಕುವೆಂಪು ರಚಿಸಿದ ಶ್ರೀ ರಾಮಾಯಣದರ್ಶನಂ ಮಹಾಕಾವ್ಯಕ್ಕೆ ಜ್ಞಾನಪೀಠ ಪ್ರಶಸ್ತಿ ಲಭಿಸಿದೆ. ಜೈನ ಕವಿ ನಾಗಚಂದ್ರ ರಚಿಸಿದ ಪಂಪ ರಾಮಾಯಣ, ಹದಿನಾರನೇಯ ಶತಮಾನದ ಕವಿ ಕುಮಾರ ವಾಲ್ಮೀಕಿಯ ತೊರವೆ ರಾಮಾಯಣದಲ್ಲಿ ಕಂಡು ಬರುವ ಅನೇಕ ಉದಾಹರಣೆಗಳು, ನಿದರ್ಶನಗಳು ಹಾಗೂ ಉಪಕಥೆಗಳನ್ನು ಹೇಳುವುದರ ಮೂಲಕ ಕಾವ್ಯದ ಸಾರವನ್ನು ಮನಮುಟ್ಟುವಂತೆ ತಿಳಿಸಿದರು.


ಕಾರ್ಯಕ್ರಮದಲ್ಲಿ ಅಧ್ಯಕ್ಷರು, ಮುಖ್ಯ ಅತಿಥಿಗಳು ಹಾಗೂ ಡಿ.ಎಡ್., ಬಿ.ಎಡ್. ಕಾಲೇಜಿನ ವಿದ್ಯಾರ್ಥಿ ನಾಯಕಿಯರಿಂದ ಮಹರ್ಷಿ ವಾಲ್ಮಿಕಿ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಲಾಯಿತು. ಕಾಲೇಜಿನ ಎಲ್ಲಾ ಉಪನ್ಯಾಸಕ ವೃಂದದವರು ಹಾಗೂ ಸಿಬ್ಬಂದಿ ವರ್ಗದವರು, ಪ್ರಶಿಕ್ಷಣಾರ್ಥಿಗಳು ಉಪಸ್ಥಿತರಿದ್ದರು. ಪ್ರಶಿಕ್ಷಣಾರ್ಥಿಗಳಾದ ಸುಕನ್ಯ ಮತ್ತು ಬಳಗ ಪ್ರಾರ್ಥಿಸಿ, ಜಯಂತಿ ಸ್ವಾಗತಿಸಿ, ಯಶವಂತ್ ಆರ್ ಅತಿಥಿ ಪರಿಚಯಿಸಿ, ಭುವನೇಶ್ವರಿ ವಂದಿಸಿ, ಚೈತ್ರ ಹೂಗಾರ್ ನಿರೂಪಿಸಿದರು.

Post a Comment

0 Comments
Post a Comment (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top