ತುಮಕೂರು: ಭಾರತದ ಅತ್ಯಂತ ವಿಶ್ವಾಸಾರ್ಹ ಮತ್ತು ಪ್ರಮುಖ ಆಭರಣ ಬ್ರಾಂಡ್‍ಗಳಲ್ಲಿ ಒಂದಾದ ಕಲ್ಯಾಣ್ ಜ್ಯುವೆಲ್ಲರ್ಸ್, ತುಮಕೂರಿನಲ್ಲಿ ಹೊಸ ಶೋರೂಮ್ ಪ್ರಾರಂಭಿಸುವ ಮೂಲಕ ತನ್ನ ರಿಟೇಲ್ ಮಾರಾಟ ಜಾಲವನ್ನು ವಿಸ್ತರಿಸಲಿದೆ. ಈ ತಿಂಗಳ 24ರಂದು ಶನಿವಾರ ಸಂಜೆ 06:00 ಗಂಟೆಗೆ ನಡೆಯಲಿರುವ ಸಮಾರಂಭದಲ್ಲಿ ಟಾಲಿವುಡ್ ನಟಿ ಶ್ರೀಲೀಲಾ ಪಾಲ್ಗೊಳ್ಳಲಿದ್ದಾರೆ. ಜತೆಗೆ ಕಲ್ಯಾಣ್ ಜ್ಯುವೆಲ್ಲರ್ಸ್‍ನ ಲೈಫ್‍ಸ್ಟೈಲ್ ಆಭರಣ ಬ್ರಾಂಡ್ ಆದ 'ಕ್ಯಾಂಡೆರೆ' ಹೊಸ ಷೋರೂಂ ಕೂಡಾ ಇದೇ ಸ್ಥಳದಲ್ಲಿ ಉದ್ಘಾಟನೆಯಾಗಲಿದೆ ಎಂದು ಕಾರ್ಯನಿರ್ವಾಹಕ ನಿರ್ದೇಶಕ ರಮೇಶ್ ಕಲ್ಯಾಣರಾಮನ್ ಹೇಳಿದ್ದಾರೆ.
ಈ ಹೊಸ ಶೋರೂಮ್, ಮಾರುಕಟ್ಟೆಯಲ್ಲಿ ತನ್ನ ಅಸ್ತಿತ್ವವನ್ನು ಬಲಪಡಿಸುವ ಮತ್ತು ಚಿನ್ನ, ವಜ್ರ ಹಾಗೂ ಅಮೂಲ್ಯ ಹರಳುಗಳ ಆಭರಣಗಳ ವಿಶಾಲ ಸಂಗ್ರಹವನ್ನು ಗ್ರಾಹಕರಿಗೆ ಇನ್ನಷ್ಟು ಸುಲಭವಾಗಿ ತಲುಪಿಸುವ ಕಲ್ಯಾಣ್ ಜ್ಯುವೆಲ್ಲರ್ಸ್‍ನ ಕಾರ್ಯತಂತ್ರದ ಪ್ರಮುಖ ಭಾಗವಾಗಿದೆ. ಅತ್ಯಾಧುನಿಕ ಸೌಲಭ್ಯಗಳನ್ನು ಹೊಂದಿರುವ ಈ ಶೋರೂಮ್, ವಿಶ್ವದರ್ಜೆಯ ಶಾಪಿಂಗ್ ಅನುಭವವನ್ನು ನೀಡಲಿದ್ದು, ಕಂಪನಿಯ ಜನಪ್ರಿಯ ಬ್ರಾಂಡ್‍ಗಳ ವೈವಿಧ್ಯಮಯ ವಿನ್ಯಾಸಗಳು ಇಲ್ಲಿ ಇರುತ್ತವೆ ಎಂದು ಪ್ರಕಟಣೆ ಹೇಳಿದೆ.

