ದಕ್ಷಿಣ ಭಾರತದ, ಕರಾವಳಿಯ ಶ್ವಾಸ, ದ್ರಾವಿಡ ಭಾಷೆಯಲ್ಲಿ ಒಂದಾದ ತುಳು ಭಾಷೆ ಎಂದಿಗೂ ನಮ್ಮೆಲ್ಲರ ಹೆಮ್ಮೆಯ ಭಾಷೆ.ಅದರಲ್ಲೂ ಬಹಳ ಮುಖ್ಯವಾಗಿ ದಕ್ಷಿಣ ಕನ್ನಡ, ಉಡುಪಿ, ಕಾಸರಗೋಡಿನ ಕೆಲವು ಭಾಗಗಲ್ಲಿ ಮಾತ್ರ ತುಳು ಭಾಷೆಯನ್ನು ಮಾತಾಡುವ ಜನರು ಹೆಚ್ಚಾಗಿದರೆ. ಕನ್ನಡ, ಇಂಗ್ಲಿಷ್ ಭಾಷೆಯಲ್ಲಿ ಹೇಗೆ ಲಿಪಿಗಳು ಇವೆಯೋ ಹಾಗೆ ತುಳುವಿಗೂ ಲಿಪಿಗಳು ಇವೆ.ತುಳು ಭಾಷೆ ತುಳುನಾಡಿನ ಅತ್ಯಂತ ಮುಖ್ಯವಾದ ಐಸಿರಿ ಎಂದೇ ಹೇಳಬಹದು.
ಕರಾವಳಿ ಜನಗಳು ಅಗತ್ಯ ಇದ್ದಲಿ ಮಾತ್ರ ಕನ್ನಡ ಭಾಷೆ ಮಾತನಾಡುತ್ತಾರೆ. ಇಲ್ಲದೆ ಹೋದರೆ ತುಳು ಭಾಷೆಯನ್ನು ಬಿಟ್ಟು ಕೊಡುವುದಿಲ್ಲ. ಕೆಲವು ಅಜ್ಜಿಗಳಿಗೆ ಇನ್ನು ಕೂಡ ಕನ್ನಡ ಮಾತನಾಡಲು ಬರುವುದಿಲ್ಲ, ಅವರಿಗೆ ತುಳು ಭಾಷೆ ಮಾತ್ರ ಬರುವ ಕಾರಣ ಅವರು ತಮ್ಮ ಭಾಷೆಯನ್ನು ಎಲ್ಲೂ ಬಿಟ್ಟು ಕೊಡುವುದಿಲ್ಲ. ತುಳು ಭಾಷೆಗೆ ಸಂಸ್ಕೃತಿ, ಆಚರಣೆ ಇಂದ ಅದರ ಪರಂಪರೆ ಹೆಚ್ಚಾಗುತ್ತಾ ಬಂದಿದೆ.ಪಾಡ್ದನ, ಜನಪದ ಹಾಡುಗಳು, ಗಾದೆಗಳು, ಕಥೆಗಳು ಮತ್ತು ಜಾನಪದ ಆಚರಣೆಗಳ ಮೂಲಕ ತುಳುವಿನ ಸೊಗಡು ತಲೆಮಾರುಗಳಿಂದ ತಲೆಮಾರುಗಳಿಗೆ ಹರಿದು ಬಂದಿದೆ.ಪ್ರಾಮುಖ್ಯವಾಗಿ ಭೂತರಾಧನೆ, ಯಕ್ಷಗಾನ ಇವೆಲ್ಲವೂ ಕೂಡ ತುಳು ಭಾಷೆಯಲ್ಲೇ ಪಸರಿಸುತ್ತಿದೆ.
ತುಳುವಿನಲ್ಲಿ ಪುಸ್ತಕಗಳು ಸಹ ಇದೇ. ತುಳು ಭಾಷೆಯಲ್ಲಿ ರಚಿತಾ ವಾದ ಹಲವಾರು ಕಥೆ ಪುಸ್ತಕಗಳು, ಕಾದಂಬರಿಗಳು ಸಹ ಇದೇ. ಕೆ ಪಿ ಪೂರ್ಣಚಂದ್ರ ತೇಜಸ್ವಿಯವರು ಬರೆದ ಕರ್ವೋಲೋ ಪುಸ್ತಕ ಸಹ ತುಳುವಿನಲ್ಲಿ ಅನುಕರಣೆ ಮಾಡಲಾಗಿದೆ. ನಮಗೆ ಈ ಪುಸ್ತಕ ಎಲ್ಲ ಕಾಣ ಸಿಗುವುದು ಮಂಗಳೂರಿನ ತುಳು ಪ್ರತಿಷ್ಠಾನದಲ್ಲಿ. ಅಲ್ಲಿ ಎಲ್ಲ ರೀತಿಯ ತುಳು ಭಾಷೆಯ ಪುಸ್ತಕಗಳು ಲಭ್ಯವಿದೆ. ಅವರ ಪ್ರತಿಷ್ಠಾನದಲ್ಲಿ ಯಾವುದೇ ಕಾರ್ಯಕ್ರಮವನ್ನು ಆಯೋಜಿಸಿದರೂ ಪೂರ್ತಿ ಕಾರ್ಯಕ್ರಮವನ್ನು ತುಳುವಿನಲ್ಲೇ ಪ್ರಾರಂಭ ಮಾಡಿ ಕೊನೆಗೊಳಿಸುತ್ತಾರೆ. ಅವರ ಪ್ರತಿಷ್ಠಾನದಲ್ಲೂ ತುಳು ಭಾಷೆಯ ಪರವಾಗಿ ಹೆಚ್ಚಾಗಿ ಒತ್ತು ನೀಡುತ್ತಾರೆ. ತುಳು ಭಾಷೆಗೆ ತನ್ನದೇ ಆದ ಹಳೆಯ ಲಿಪಿ ತಿಗಳಾರಿ ಲಿಪಿ ಇದೆ. ಆದರೆ ಇಂದಿನ ದಿನಗಳಲ್ಲಿ ತುಳುವನ್ನು ಹೆಚ್ಚಾಗಿ ಕನ್ನಡ ಲಿಪಿಯಲ್ಲೇ ಬರೆಯಲಾಗುತ್ತದೆ. ತುಳು ಸಾಹಿತ್ಯ, ನಾಟಕ, ಸಿನಿಮಾ, ಹಾಡುಗಳು ಹಾಗೂ ಸಾಮಾಜಿಕ ಜಾಲತಾಣಗಳ ಮೂಲಕವೂ ಭಾಷೆಯ ಬಳಕೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ.
2026ರ ಸೆಪ್ಟೆಂಬರ್‌ನಲ್ಲಿ ಕರ್ನಾಟಕ ಸರ್ಕಾರವು ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ತುಳುವಿಗೆ ಹೆಚ್ಚುವರಿ ಆಡಳಿತ ಭಾಷೆಯ ಸ್ಥಾನಮಾನ ನೀಡಲು ಅನುಮೋದನೆ ನೀಡಿದೆ. ಇದರಿಂದ ಸರ್ಕಾರಿ ಆಡಳಿತದಲ್ಲಿಯೂ ತುಳು ಬಳಕೆಗೆ ಹೊಸ ಅವಕಾಶ ಸಿಕ್ಕಂತಾಗಿದೆ. ತುಳು ಭಾಷೆಯ ಉಳಿವು ಮತ್ತು ಬೆಳವಣಿಗೆಯೇ ತುಳುನಾಡಿನ ಸಾಂಸ್ಕೃತಿಕ ಐಸಿರಿಯನ್ನು ಇನ್ನಷ್ಟು ಶ್ರೀಮಂತಗೊಳಿಸಬೇಕು. ಕನ್ನಡ, ಇಂಗ್ಲಿಷ್ ಹೇಗೆ ಮುಖ್ಯವೋ ಹಾಗೆ ತುಳು ಭಾಷೆ ಕೂಡ ಒಂದು ಹೆಜ್ಜೆ ಮುಂದು ಎಂದು ಗುರುತಿಸುವ ಹಾಗೆ ನಾವು ಮಾಡಬೇಕು.
- ಅಂಜಲಿ ಮುಂಡಾಜೆ
ತ್ರಿತೀಯ ಪತ್ರಿಕೋದ್ಯಮ ವಿದ್ಯಾರ್ಥಿನಿ
ಎಸ್ ಡಿ ಯಂ ಕಾಲೇಜು ಉಜಿರೆ


