ಕೌಶಲ್ಯ ಮತ್ತು ತಿಳುವಳಿಕೆ ಎರಡೂ ಸೇರಿದಾಗ ಯಶಸ್ಸು ಖಂಡಿತ: ಉಷಾ ಕಾಮತ್

Upayuktha
0


ಉಜಿರೆ: ಇಲ್ಲಿನ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಮಹಿಳಾ ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿ ಇಂದು (ಅ 07 ರಂದು) ಬ್ಯಾಂಕಿಂಗ್ ಕುರಿತು ವಿಚಾರ ವಿನಿಮಯ ಕಾರ್ಯಕ್ರಮ ನಡೆಯಿತು. ಬೆಳ್ತಂಗಡಿಯ ಅಮೂಲ್ಯ ಆರ್ಥಿಕ ಸಾಕ್ಷರತಾ ಕೇಂದ್ರದ ಸಂಪನ್ಮೂಲ ವ್ಯಕ್ತಿ ಹಾಗೂ ಉಪನ್ಯಾಸಕಿ ಉಷಾ ಕಾಮತ್ ಈ ಕಾರ್ಯಕ್ರಮದ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ್ದರು.


ಆರ್ಥಿಕ ಸಾಕ್ಷರತೆಯನ್ನು ಹೆಚ್ಚಿಸುವ ನಿಟ್ಟಿನಲ್ಲಿ ನಡೆದ ಈ ಮಾಹಿತಿ ಕಾರ್ಯಕ್ರಮದಲ್ಲಿ “ಎಲ್ಲಾ ವಿಚಾರಗಳನ್ನೂ ಹಿತಕರ ಹಾಗೂ ಉತ್ತಮವೆಂದು ಭಾವಿಸಬಾರದು. ‘ಉಳಿತಾಯದಿಂದ ಗಳಿಕೆ’ ಎಂಬ ಧ್ಯೇಯದೊಂದಿಗೆ, ಕೌಶಲ್ಯ ಮತ್ತು ತಿಳುವಳಿಕೆ ಎರಡನ್ನೂ ಬೆಳೆಸಿಕೊಂಡರೆ ಆರ್ಥಿಕ ಯಶಸ್ಸು ಸಾಧ್ಯ” ಎಂದು ತಿಳಿಸಲಾಯಿತು.


ಕಾರ್ಯಕ್ರಮದಲ್ಲಿ ‘ಸೇವಿಂಗ್ಸ್ ಅಕೌಂಟ್’, ‘ಕರೆಂಟ್ ಅಕೌಂಟ್’, ‘ಕ್ರೆಡಿಟ್ ಕಾರ್ಡ್’, ‘ಡೆಬಿಟ್ ಕಾರ್ಡ್’ ಮುಂತಾದ ಬ್ಯಾಂಕಿಂಗ್ ಸೇವೆಗಳ ಕುರಿತು ಸಮಗ್ರ ಮಾಹಿತಿ ನೀಡಲಾಯಿತು. ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿ ವಿವಿಧ ರೀತಿಯಲ್ಲಿ ಹೂಡಿಕೆ ಮಾಡುವ ವಿಧಾನಗಳು, ಹೂಡಿಕೆ ಮಾಡುವ ಸಂದರ್ಭದಲ್ಲಿ ಕೈಗೊಳ್ಳಬೇಕಾದ ಮುನ್ನೆಚ್ಚರಿಕೆಗಳು ಹಾಗೂ ಹಣಕಾಸಿನ ನಿರ್ವಹಣೆಯ ಮಹತ್ವವನ್ನು ವಿವರಿಸಲಾಯಿತು.


ಅದೇ ರೀತಿ ಅಟಲ್ ಪಿಂಚಣಿ ಯೋಜನೆ, ಪ್ರಧಾನ ಮಂತ್ರಿ ಶ್ರಮ ಯೋಗಿ ಯೋಜನೆ, ಸ್ಟ್ಯಾಂಡ್ ಅಪ್ ಇಂಡಿಯಾ, ಸ್ಟಾರ್ಟ್ ಅಪ್ ಇಂಡಿಯಾ ಸೇರಿದಂತೆ ವಿವಿಧ ಸರ್ಕಾರಿ ಯೋಜನೆಗಳ ಕುರಿತು ಮಾಹಿತಿ ನೀಡಲಾಯಿತು. 


ಸ್ವ ಉದ್ಯೋಗ ಆರಂಭಿಸಲು ಬ್ಯಾಂಕ್‌ಗಳಿಂದ ದೊರೆಯುವ ಸಾಲ ಹಾಗೂ ಇತರೆ ನೆರವುಗಳ ಬಗ್ಗೆಯೂ ವಿವರಿಸಲಾಯಿತು. ಮಹಿಳೆಯರ ಆರ್ಥಿಕ ಸಬಲೀಕರಣಕ್ಕೆ ಸಂಬಂಧಿಸಿದ ಮಹಿಳಾ ಶ್ರಮ ಶಕ್ತಿ ಯೋಜನೆ ಕುರಿತಂತೆಯೂ ಚರ್ಚಿಸಲಾಯಿತು.


ಇದರ ಜೊತೆಗೆ ‘ಸ್ಮಾರ್ಟ್ ಸೇವಿಂಗ್ಸ್’, ಪಿಂಚಣಿ, ವಿಮೆ (Insurance) ಹಾಗೂ ಭವಿಷ್ಯದ ಆರ್ಥಿಕ ಭದ್ರತೆಗಾಗಿ ಉಳಿತಾಯದ ಮಹತ್ವವನ್ನು ತಿಳಿಸಲಾಯಿತು.


ಡಿಜಿಟಲ್ ವ್ಯವಹಾರದ ಕುರಿತು ಹಾಗೂ ಅಪರಿಚಿತ ಕರೆಗಳ ಕುರಿತು ತೆಗೆದುಕೊಳ್ಳಬೇಕಾದ ಕ್ರಮಗಳ ಕುರಿತು ವಿಚಾರ ವಿನಿಮಯ ನಡೆಸಿದರು. ಎಲ್ಲಿಯಾದರೂ ಅಪರಿಚಿತ ವ್ಯಕ್ತಿಗಳಿಂದ ಮೋಸ ಹೋದ ಸಂದರ್ಭದಲ್ಲಿ ಒಂದು ಗಂಟೆಯ ಒಳಗಾಗಿ 1930 ಗೆ ಕರೆಮಾಡುವಂತೆ ಸೂಚಿಸಿದರು.


ಅಂಚೆ ಕಚೇರಿಯ MIS (Monthly Income Scheme) ಸೇರಿದಂತೆ ವಿವಿಧ ಉಳಿತಾಯ ಯೋಜನೆಗಳ ಬಗ್ಗೆಯೂ ಮಾಹಿತಿ ನೀಡಲಾಯಿತು.


ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಸ್ಥೆಯ ಪ್ರಾಚಾರ್ಯ ವಿ. ಪ್ರಕಾಶ್ ಕಾಮತ್ ಇವರು ವಹಿಸಿದ್ದು ವಿದ್ಯಾರ್ಥಿನಿಯರು ತಮ್ಮ ಆದಾಯವನ್ನು ಸಮರ್ಪಕವಾಗಿ ನಿರ್ವಹಿಸಿ, ಅಗತ್ಯವಿರುವಷ್ಟು ಉಳಿತಾಯ ಮಾಡಿ, ಸುರಕ್ಷಿತ ಹಾಗೂ ಸೂಕ್ತ ಹೂಡಿಕೆಯ ಮೂಲಕ ಆರ್ಥಿಕವಾಗಿ ಸಬಲರಾಗಬೇಕು ಮತ್ತು ಸ್ವಾವಲಂಬಿಗಳಾಗಿ ಬದುಕಬೇಕು ಎಂದು ತಿಳಿಸಿದರು.


ತೃಪ್ತಿ ನಿರೂಪಿಸಿ ಸ್ವಾಗತಿಸಿದ ಈ ಕಾರ್ಯಕ್ರಮದಲ್ಲಿ ಕಾವ್ಯಶ್ರೀ ಧನ್ಯವಾದ ನೀಡಿದರು.


Post a Comment

0 Comments
Post a Comment (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top