ಅ. 12: ಮೆಲ್ಕಾರ್ ಸರಾ ಆರ್ಕೇಡ್‌ಗೆ ಶ್ರೀ ಶಂಕರ ಪತ್ತಿನ ಸಹಕಾರ ಸಂಘ ಸ್ಥಳಾಂತರ

Shreya Hegde
0


ಬಂಟ್ವಾಳ: ಶ್ರೀ ಶಂಕರ ಪತ್ತಿನ ಸಹಕಾರ ಸಂಘ ನಿ. ಮೆಲ್ಕಾರ್ ಪಾಣೆಮಂಗಳೂರು ಇದರ ನೂತನ ಪ್ರಧಾನ ಕಚೇರಿಯು ಮೆಲ್ಕಾರ್ ಸರಾ ಆರ್ಕೇಡ್ ಪ್ರಥಮ ಮಹಡಿಗೆ ಅ. 12 ರಂದು ಸ್ಥಳಾಂತರಗೊಳ್ಳಲಿದೆ ಎಂದು ಅಧ್ಯಕ್ಷ ಕೈಯ್ಯೂರು ನಾರಾಯಣ ಭಟ್ ಬಿ. ಸಿ.ರೋಡ್ ಪ್ರೆಸ್ ಕ್ಲಬ್ ನಲ್ಲಿ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.


ಕಾಸರಗೋಡು ಎಡನೀರು ಮಠ ಶ್ರೀ ಶ್ರೀ ಸಚ್ಚಿದಾನಂದ ಭಾರತೀ ಮಹಾಸ್ವಾಮಿಗಳು ದೀಪ ಬೆಳಗಿಸಿ ಉದ್ಘಾಟನೆ ಮಾಡುವರು. ಸಹಕಾರಿಯ ಉದ್ಘಾಟನೆ ಅಂಗವಾಗಿ ಡಿಸೆಂಬರ್ 2026 ತನಕ ಸ್ವೀಕರಿಸುವ ಎರಡು ವರ್ಷಾವಧಿ ವಿಶೇಷ ಠೇವಣಿಗೆ ಶೇ. 11 ಬಡ್ಡಿ ನೀಡಲಾಗುತ್ತದೆ. ಸಮೃದ್ಧಿ ಠೇವಣಿಯು 99 ತಿಂಗಳಲ್ಲಿ ದ್ವಿಗುಣಗೊಳ್ಳುವುದು ಎಂದು ಪ್ರಕಟಿಸಿದರು. ಬಂಟ್ವಾಳ ಶಾಸಕ ರಾಜೇಶ್ ನಾಯ್ಡ್ ಉಳಿಪ್ಪಾಡಿಗುತ್ತು ಭದ್ರತಾ ಕೊಠಡಿಯನ್ನು ಉದ್ಘಾಟಿಸುವರು, ಮಾಜಿ ಸಚಿವ ಬಿ. ರಮಾನಾಥ ರೈ ಅವರು ವಿಶೇಷ ಠೇವಣಿಗಳ ಬಿಡುಗಡೆ ಮಾಡುವರು. ಬಿ.ಸಿ. ರೋಡ್ ಹೊಟೇಲ್ ರಂಗೋಲಿ ಮಾಲಕ ಚಂದ್ರಹಾಸ ಶೆಟ್ಟಿ ನಾಮಫಲಕ ಅನಾವರಣ ಮಾಡುವರು. ಉದ್ಯಮಿ ಸಂಜೀವ ಸಮೃದ್ಧಿ ಠೇವಣಿಯು 99 ತಿಂಗಳಲ್ಲಿ ದ್ವಿಗುಣಗೊಳ್ಳುವುದು ಎಂದು ಪ್ರಕಟಿಸಿದರು.


ಬಂಟ್ವಾಳ ಶಾಸಕ ರಾಜೇಶ್ ನಾಯ್ಕ ಉಳಿಪ್ಪಾಡಿಗುತ್ತು ಭದ್ರತಾ ಕೊಠಡಿಯನ್ನು ಉದ್ಘಾಟಿಸುವರು. ಮಾಜಿ ಸಚಿವ ಬಿ. ರಮಾನಾಥ ರೈ ಅವರು ವಿಶೇಷ ಠೇವಣಿಗಳ ಬಿಡುಗಡೆ ಮಾಡುವರು. ಬಿ.ಸಿ. ರೋಡ್ ಹೊಟೇಲ್ ರಂಗೋಲಿ ಮಾಲಕ ಚಂದ್ರಹಾಸ ಶೆಟ್ಟಿ ನಾಮಫಲಕ ಅನಾವರಣ ಮಾಡುವರು. ಉದ್ಯಮಿ ಸಂಜೀವ ಪೂಜಾರಿ ಗುರುಕೃಪಾ, ಕಲ್ಲಡ್ಕ ಕೆ.ಟಿ. ಹೋಟೆಲ್ ಲಕ್ಷ್ಮೀಗಣೇಶ್ ಮಾಲಕ ರಾಜೇಂದ್ರ ಹೊಳ್ಳ, ಸಹಕಾರ ಅಭಿವೃದ್ಧಿ ಅಧಿಕಾರಿ ಡಾ. ಜ್ಯೋತಿ ಡಿ., ಮೆಲ್ಕಾರ್ ಉದ್ಯಮಿ ಎಂ. ಎನ್. ಕುಮಾರ್, ಮೆಲ್ಕಾರ್ ವೈಭವ ಜ್ಯುವೆಲ್ಲರಿ ಮಾಲಕ ಬಿ. ಯೋಗೀಶ್ ನಾಯಕ್, ಗಣ್ಯರಾದ ಸಂಜೀವ ನಾಯ್ಕ ನಿರ್ಬೈಲು ಮಂಚಿ, ಆಯಿಷಾ ಸನಹ ಕುಪ್ಪೆಪದವು ಭಾಗವಹಿಸುವರು ಎಂದು ಅವರು ತಿಳಿಸಿದರು.


ಉಪಾಧ್ಯಕ್ಷ ಜಯಾನಂದ ಪೆರಾಜೆ, ನಿರ್ದೇಶಕ ರವೀಂದ್ರ ಕುಕ್ಕಾಜೆ, ವೃತ್ತಿಪರ ನಿರ್ದೇಶಕ ರಾಕೋಡಿ ಈಶ್ವರ ಭಟ್, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಭವ್ಯ, ಗಣ್ಯರಾದ ಕೃಷ್ಣಶರ್ಮ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

Post a Comment

0 Comments
Post a Comment (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top