ಎಸ್‌ಡಿಎಂ ಕಾಲೇಜು: ಎನ್ ಎಸ್ ಎಸ್ ವತಿಯಿಂದ ಬೀದಿನಾಟಕ ಪ್ರದರ್ಶನ

Shreya Hegde
0



ಉಜಿರೆ:  ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜು (ಸ್ವಾಯತ್ತ), ಉಜಿರೆ, ಇಲ್ಲಿನ ರಾಷ್ಟ್ರೀಯ ಸೇವಾ ಯೋಜನೆ ಘಟಕದ ವತಿಯಿಂದ  ಪೂಜ್ಯ ಡಾ|| ಡಿ. ವೀರೇಂದ್ರ ಹೆಗ್ಗಡೆಯವರ ಪಟ್ಟಾಭಿಷೇಕದ  59ನೇ ವರ್ಧಂತ್ಯುತ್ಸವದ   ಪ್ರಯುಕ್ತ ನಶಾ ಮುಕ್ತ ಭಾರತ ಎಂಬ ವಿಷಯದ ಕುರಿತು  “ಬೀದಿ ನಾಟಕ” ಪ್ರದರ್ಶನವನ್ನು  ಆಕ್ಟೋಬರ್ 13 ಮಂಗಳವಾರದಂದು  ಧರ್ಮಸ್ಥಳ ದ್ವಾರದ ಬಳಿ ಇರುವ ಬಸ್ಟ್ಯಾಂಡ್ ಮತ್ತು ಉಜಿರೆ ಬಸ್‌ ನಿಲ್ದಾಣದಲ್ಲಿ ಆಯೋಜಿಸಲಾಯಿತು.


ಕಾರ್ಯಕ್ರಮದಲ್ಲಿ  ಎನ್ ಎಸ್ ಎಸ್ ಸ್ವಯಂಸೇವಕರು ಭಾಗವಹಿಸಿ, ಸಮಾಜದಲ್ಲಿ ವ್ಯಸನಮುಕ್ತ ಜೀವನದ ಮಹತ್ವದ ಕುರಿತು ಜಾಗೃತಿ ಮೂಡಿಸಿದರು.ಮಾದಕ ವ್ಯಸನಗಳ ಬಳಕೆಯು ಯುವಜನತೆಯ ಮೇಲೆ ಬೀರುವ  ದುಷ್ಪರಿಣಾಮಗಳ ಬಗ್ಗೆ ಜನರಿಗೆ ಅರಿವು ಮೂಡಿಸುವ ಉದ್ದೇಶದಿಂದ ಬೀದಿ ನಾಟಕದ ಮೂಲಕ ಸಂದೇಶವನ್ನು ಸಾರಲಾಯಿತು. ಕಾರ್ಯಕ್ರಮದಲ್ಲಿ ಯೋಜನಾಧಿಕಾರಿ ಡಾ. ಮಾಲಿನಿ ಅಂಚನ್, ಧರ್ಮಸ್ಥಳ ಪಂಚಾಯಿತಿಯ ಸಿಬ್ಬಂದಿ ವರ್ಗ, ಹಾಗೂ ಎನ್ ಎಸ್ ಎಸ್ ನ ಸ್ವಯಂಸೇವಕರು ಉಪಸ್ಥಿತರಿದ್ದರು.

Post a Comment

0 Comments
Post a Comment (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top