ಆರ್ ಎಸ್ ಎಸ್ ನೂತನ ಕಾರ್ಯಾಲಯ ಲೋಕಾರ್ಪಣೆ

Shreya Hegde
0



ಚಿಕ್ಕಬಳ್ಳಾಪುರ: ಜಿಲ್ಲೆಯ ಗೌರಿಬಿದನೂರಿನಲ್ಲಿ ನೂತನವಾಗಿ ನಿರ್ಮಿಸಿರುವ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಕಾರ್ಯಾಲಯ,"ರಜತಾರ್ಪಣ" ದ ಲೋಕಾರ್ಪಣೆ ಕಾರ್ಯಕ್ರಮ ಅದ್ಧೂರಿಯಾಗಿ ನೆರವೇರಿತು. ತಮ್ಮ ಕುಟುಂಬದ ಪೂರ್ವಜರ ವಿಶಾಲ ನಿವೇಶನದಲ್ಲಿ ತಮ್ಮ ಸ್ವಂತ ಖರ್ಚಿನಲ್ಲಿ ಉದ್ಯಮಿ ರಜತ ಕೆ ವಿ ಶಿವಕುಮಾರ್ ನಿರ್ಮಿಸಿರುವ ಬಹುಮಹಡಿ ಕಟ್ಟಡವನ್ನು ಚಿಕ್ಕಬಳ್ಳಾಪುರ ಜಿಲ್ಲೆಯ ಕಳವಾರ ಓಂಕಾರ ಜ್ಯೋತಿ ಮಠದ ಶ್ರೀ ಉಮಾ ಮಹೇಶ್ವರ ಸ್ವಾಮಿಜಿ ಉದ್ಘಾಟನೆ ನೆರವೇರಿಸಿದರು.


ಈ ಸಂದರ್ಭದಲ್ಲಿ ಮಾತನಾಡಿದ ಶ್ರೀ ಉಮಾ ಮಹೇಶ್ವರ ಸ್ವಾಮಿಜಿ,"ಆರ್ ಎಸ್ ಎಸ್ ಕಳೆದ ನೂರಾ ಒಂದು ವರ್ಷಗಳಲ್ಲಿ ಅಸಂಖ್ಯಾತ ಸ್ವಯಂ ಸೇವಕರ ಮೂಲಕ ಅವಿಸ್ಮರಣೀಯ ಸಮಾಜ ಸೇವೆ ಮಾಡಿದೆ. ಸನಾತನ ಹಿಂದೂ ಧರ್ಮದ ಪುನರುತ್ಥಾನಕ್ಕೆ ವೇದಿಕೆಯಾಗಿದೆ" ಎಂದರು. ಕಟ್ಟಡದ ದಾನಿಗಳಾದ ರಜತ ಕೆ ವಿ ಶಿವಕುಮಾರ್ ಮಾತನಾಡಿ, ಪ್ರತಿಯೊಬ್ಬರಿಗೂ ಸಮಾಜದ ಋಣ ಇರುತ್ತದೆ. ಈ ಋಣ ತೀರಿಸಲು ಕೈಲಾದಷ್ಟು ಸಾಮಾಜಿಕ ಸೇವೆ ಸಲ್ಲಿಸುತ್ತಿರುವುದಾಗಿ‌ ಭಾವುಕರಾಗಿ ಹೇಳಿದರು.


ಆರ್ ಎಸ್ ಎಸ್ ಕರ್ನಾಟಕ ದಕ್ಷಿಣ ಪ್ರಾಂತ ಪ್ರಚಾರಕ ಗುರುಪ್ರಸಾದ್ ಮಾತನಾಡಿ, ಹಿಂದೂ ಧರ್ಮವನ್ನು ಸರ್ವಾಂಗೀಣವಾಗಿ ಅಭಿವೃದ್ಧಿ ಪಡಿಸುವ ನಿಟ್ಟಿನಲ್ಲಿ ಕಳೆದ ಒಂದು ಶತಮಾನದಿಂದ ಆರ್ ಎಸ್ ಎಸ್ ನಿಸ್ವಾರ್ಥ ಸೇವೆಯಿಂದ ದೇಶವ್ಯಾಪಿಯಾಗಿದೆ. ಏನೇ ಟೀಕೆ ಟಿಪ್ಪಣಿಗಳು ಬಂದರೂ ಎದೆಗುಂದದೆ ಸಂಘ ಮುನ್ನಡೆಯುತ್ತಿದೆ ಎಂದರು. ಸಂಘದ  ಸ್ವಯಂಸೇವಕರು, ರಜತ ಶಿವಕುಮಾರ್ ಅವರ ಕುಟುಂಬ ಸದಸ್ಯರು ಸೇರಿದಂತೆ ನೂರಾರು ಜನ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

Views: Loading...

Post a Comment

0 Comments
Post a Comment (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top