ಉಡುಪಿ ಫಲಿಮಾರು ಶ್ರೀಗಳಿಗೆ ಗೌರವದ ಅಭಿನಂದನೆ

Shreya Hegde
0


ಕಲಬುರಗಿ: ಉಡುಪಿ ಫಲಿಮಾರು ಮಠಾಧೀಶರಾದ ಶ್ರೀ ವಿದ್ಯಾಧೀಶ ತೀರ್ಥ ಸ್ವಾಮೀಜಿಯವರು ಹಾಗೂ ಹಿರಿಯ ಸ್ವಾಮೀಜಿಗಳಾದ ಶ್ರೀ ವಿದ್ಯಾ ರಾಜೇಶ್ವರ ತೀರ್ಥ ಸ್ವಾಮೀಜಿಯವರಿಗೆ ಕಲಬರಗಿಯ ಶ್ರೀರಾಮ ಮಂದಿರದಲ್ಲಿ ಭಕ್ತಿಯ ಸ್ವಾಗತ ಕೋರಲಾಯಿತು.


ಕಲಬುರಗಿಯ ಹೊಸ ಜೇವರ್ಗಿ ರಸ್ತೆಯ ಶ್ರೀರಾಮ ಮಂದಿರದಲ್ಲಿ ಮಠಾಧೀಶರನ್ನು ಆಕಾಶವಾಣಿಯನಿವೃತ್ತ ಕಾರ್ಯಕ್ರಮ ಮುಖ್ಯಸ್ಥರಾದ ಡಾ. ಸದಾನಂದ ಪೆರ್ಲ, ಜಿಲ್ಲಾ ಹೋಟೆಲ್ ಸಂಘದ ಅಧ್ಯಕ್ಷರಾದ ನರಸಿಂಹ ಮೆಂಡನ್ ದಕ್ಷಿಣ ಕನ್ನಡ ಸಂಘದ ಚಂದ್ರಶೇಖರ್ ಶೆಟ್ಟಿ ಹಾಗೂ ಸುನಿಲ್ ಶೆಟ್ಟಿ ನೇತೃತ್ವದಲ್ಲಿ ಮಾಲಾರ್ಪಣೆ ಹಾಗೂ ಫಲ ಕಾಣಿಕೆ ನೀಡಿ  ಭಕ್ತಿಯ ಗೌರವ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ರಾಮಮಂದಿರದ ವಕ್ತಾರರಾದ ಕಿಶೋರ್ ದೇಶಪಾಂಡೆ ಮ್ಯಾನೇಜರ್ ನಿರಂಜನ ರಾವ್ ವಿಜಯ್ ಕುಮಾರ್ ಉಪಸ್ಥಿತರಿದ್ದರು.

Post a Comment

0 Comments
Post a Comment (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top