ಪುತ್ತೂರಿನ ವಿವೇಕಾನಂದ ಇಂಜಿನಿಯರಿಂಗ್ ಕಾಲೇಜಿನ ಇಬ್ಬರು ಉಪನ್ಯಾಸಕರಿಗೆ ಡಾಕ್ಟರೇಟ್ ಪದವಿ

Upayuktha
0



ಪುತ್ತೂರು: ಪುತ್ತೂರಿನ ವಿವೇಕಾನಂದ ಕಾಲೇಜ್ ಆಫ್ ಇಂಜಿನಿಯರಿಂಗ್ ಎಂಡ್ ಟೆಕ್ನಾಲಜಿಯ ಇಬ್ಬರು ಸಹಾಯಕ ಪ್ರಾಧ್ಯಾಪಕರು ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾನಿಲಯದಿಂದ ಡಾಕ್ಟರೇಟ್ ಪದವಿಯನ್ನು ಪಡೆದುಕೊಂಡಿದ್ದಾರೆ.


ಕಂಪ್ಯೂಟರ್ ಸೈನ್ಸ್ ವಿಭಾಗದಲ್ಲಿ 14 ವರ್ಷಗಳ ಬೋಧನಾನುಭವ ಹೊಂದಿರುವ ಸಹಾಯಕ ಪ್ರಾಧ್ಯಾಪಕ ಪ್ರಮೋದ್ ಕುಮಾರ್.ಪಿ.ಎಮ್ ಅರೇಕಾ ಪ್ಲಾಂಟ್ ಡಿಸೀಸ್ ಐಡೆಂಟಿಫಿಕೇಶನ್ ಎಂಡ್ ಕ್ಲಾಸಿಫಿಕೇಶನ್ ಯೂಸಿಂಗ್ ಡೀಪ್ ಲರ್ನಿಂಗ್ ಟೆಕ್ನಿಕ್ಸ್ Areca Plant Disease identification and classification using deep learning techniques ಎನ್ನುವ ವಿಷಯದ ಬಗ್ಗೆ ತಿಪಟೂರಿನ ಕಲ್ಪತರು ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ಡಾ.ರವಿಪ್ರಕಾಶ್.ಎಮ್.ಎಲ್ ಅವರ ಮಾರ್ಗದರ್ಶನದಲ್ಲಿ ಡಾಕ್ಟರೇಟ್ ಪದವಿಯನ್ನು ಪಡೆದುಕೊಂಡಿದ್ದಾರೆ.


ಅಕ್ಷಯ.ಡಿ.ಶೆಟ್ಟಿ ಇವರು ಡಿಸೈನ್ ಎಂಡ್ ವ್ಯಾಲಿಡೇಶನ್ ಆಫ್ ಗ್ಯಾಲ್ವೇನಿಕ್ ಸ್ಕಿನ್ ರೆಸ್ಪೊನ್ಸ್ ಡಿವೈಸ್ ಫಾರ್ ಟ್ರೀಟ್‌ಮೆಂಟ್ ಆಫ್ ನ್ಯೂರೋಲಾಜಿಕಲ್ ಎಂಡ್ ಸೈಕಿಯಾಟ್ರಿಕ್ ಡಿಸಾರ್ಡರ್ಸ್ (GSR) device for treatment of neurological and psychiatric  disorders) ಎನ್ನುವ ವಿಷಯದ ಬಗ್ಗೆ ಎಸ್.ಇ.ಎ ಕಾಲೇಜ್ ಆಫ್ ಇಂಜಿನಿಯರಿಂಗ್ ಎಂಡ್ ಟೆಕ್ನಾಲಜಿಯ ಪ್ರೊಫೆಸರ್ ಹಾಗೂ ಡೀನ್(ಆರ್&ಡಿ) ಆಗಿರುವ ಡಾ.ಉಷಾ ದೇಸಾಯಿ ಮತ್ತು ಸೆಂಟ್ರಲ್ ಯುನಿವರ್ಸಿಟಿ ಹರ್ಯಾಣದ ಇಲೆಕ್ಟ್ರಾಕಲ್ ಇಂಜಿನಿಯರಿಂಗ್ ವಿಭಾಗದ ಮುಖ್ಯಸ್ಥ ಹಾಗೂ ಪ್ರೊಫೆಸರ್ ಡಾ.ಆಕಾಶ್ ಸಕ್ಸೇನ ಅವರ ಮಾರ್ಗದರ್ಶನದಲ್ಲಿ ಪಿಎಚ್‌ಡಿ ಪದವಿಯನ್ನು ಪಡೆದುಕೊಂಡಿದ್ದಾರೆ. 


ಇವರು ಆರ್ಟಿಫೀಶಿಯಲ್ ಇಂಟೆಲಿಜೆನ್ಸ್ ಎಂಡ್ ಮೆಶಿನ್ ಲರ್ನಿಂಗ್ ವಿಭಾಗದಲ್ಲಿ 9 ವರ್ಷಗಳಿಂದ ಸಹಾಯಕ ಪ್ರಾಧ್ಯಾಪಕಿಯಾಗಿ ಕೆಲಸ ಮಾಡುತ್ತಿದ್ದಾರೆ. ಇವರ ಸಾಧನೆಗೆ ಆಡಳಿತ ಮಂಡಳಿ, ಉಪನ್ಯಾಸಕರು, ಸಿಬ್ಬಂದಿಗಳು ಮತ್ತು ವಿದ್ಯಾರ್ಥಿಗಳು ಅಭಿನಂದಿಸಿದ್ದಾರೆ ಎಂದು ಪ್ರಭಾರ ಪ್ರಾಂಶುಪಾಲ ಡಾ.ಶ್ರೀಕಾಂತ್ ರಾವ್.ಎಸ್.ಕೆ ತಿಳಿಸಿದ್ದಾರೆ. 


Post a Comment

0 Comments
Post a Comment (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top