ಕಲಬುರಗಿ: ಉಡುಪಿಯ ಪೇಜಾವರ ಮಠಾಧೀಶರಾದ ಶ್ರೀ ವಿಶ್ವ ಪ್ರಸನ್ನ ತೀರ್ಥ ಸ್ವಾಮೀಜಿ ಅವರು ಕಲಬುರಗಿಗೆ ಆಗಮಿಸಿ ನ. 3 ಮತ್ತು 4 ರಂದು ಬುಧವಾರ ಭೇಟಿಯಾಗಿ ಆಶೀರ್ವದಿಸಲಿದ್ದಾರೆ.
ಪೇಜಾವರ ಮಠಾಧೀಶರಾದ ಶ್ರೀ ವಿಶ್ವ ಪ್ರಸನ್ನ ತೀರ್ಥ ಸ್ವಾಮೀಜಿಯವರು, ವಿಜಯಪುರದಿಂದ ನವಂಬರ್ 3ರಂದು ಸಂಜೆ ಕಲಬುರಗಿ ಜೇವರ್ಗಿ ರಸ್ತೆಯಲ್ಲಿರುವ ರಾಮಮಂದಿರಕ್ಕೆ ಆಗಮಿಸಲಿದ್ದು ಸಂಜೆ 6 ಗಂಟೆಯ ನಂತರ ಭಕ್ತರು ಭೇಟಿಯಾಗಬಹುದು.
ಕಲಬುರಗಿಯ ವಿದ್ಯಾನಗರದ ಶ್ರೀಕೃಷ್ಣಗುಡಿಯಲ್ಲಿ ನವೆಂಬರ್ 4 ರಂದು ಸಾಯಂಕಾಲ 4.30 ರಿಂದ ಭಕ್ತರಿಗೆ ದರ್ಶನ ಹಾಗೂ ಮಂತ್ರಾಕ್ಷತೆ ಆಶೀರ್ವಾದ ನೀಡಲಿದ್ದಾರೆ. ಪೂಜ್ಯರ ಪಾದ ಪೂಜೆ ಸಲ್ಲಿಸಲಿಚ್ಚಿಸುವವರು ಕಿಶೋರ್ ದೇಶಪಾಂಡೆ (ಮೊಬೈಲ್ 9449731728) ಕೊತ್ತೂರು ನಿಖಿಲ್ ಆಚಾರ್ (ಮೊಬೈಲ್ 80 88240845) ಇವರನ್ನು ಸಂಪರ್ಕಿಸಬಹುದು ಎಂದು ಕೃಷ್ಣ ಗುಡಿಯ ಅಧ್ಯಕ್ಷರಾದ ರಂಗನಾಥ ದೇಸಾಯಿ ಮತ್ತು ಕಾರ್ಯದರ್ಶಿಗಳಾದ ಕಿಶೋರ್ ದೇಶಪಾಂಡೆ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

