'ನಮ್ಮ ಹಬ್ಬ- ನಮ್ಮ ಸೇವೆ': ಉಚಿತ ಮಧುಮೇಹ ತಪಾಸಣಾ ಶಿಬಿರ

Shreya Hegde
0



ಸುರತ್ಕಲ್: ಸಮುದಾಯದ ಆರೋಗ್ಯ ರಕ್ಷಣೆ ಪ್ರತಿಯೊಬ್ಬರ ಕರ್ತವ್ಯವಾಗಿದ್ದು ಸಾಮಾಜಿಕ ಸೇವಾ ಸಂಸ್ಥೆಗಳು ಮಾನವೀಯ ಕಾಳಜಿಯಿಂದ ಕಾರ್ಯ ಪ್ರವೃತ್ತವಾಗಬೇಕಾಗಿದೆ. ರೋಟರಿ ಜಿಲ್ಲೆ 3181 ರ ವಿಶಿಷ್ಟ ಯೋಜನೆ 'ನಮ್ಮ ಹಬ್ಬ.. ನಮ್ಮ ಸೇವೆ'ಯಲ್ಲಿ ಸಾರ್ವಜನಿಕರ ಆರೋಗ್ಯ ಹಿತ ರಕ್ಷಣಾ ದೃಷ್ಠಿಯಿಂದ ಆರೋಗ್ಯ ಜಾಗೃತಿ ಕಾರ್ಯಕ್ರಮ ನಡೆಸಲಾಗುತ್ತಿದೆ ಎಂದು ಸುರತ್ಕಲ್ ರೋಟರಿ ಕ್ಲಬ್ ಅಧ್ಯಕ್ಷ ರೊ. ಶ್ರೀಧರ್ ಟಿ.ಎನ್. ನುಡಿದರು.


ಸುರತ್ಕಲ್ ರೋಟರಿ ಕ್ಲಬ್ ಸಂಸ್ಥೆಯು ಸುರತ್ಕಲ್ ಕ್ಲಿನಿಕಲ್ ಲ್ಯಾಬೋರೇಟರಿ ಸಹಭಾಗಿತ್ವದಲ್ಲಿ ಸುರತ್ಕಲ್ ಸಾರ್ವಜನಿಕ ಶ್ರೀ ಶಾರದಾ ಮಹೋತ್ಸವ ಸಮಿತಿಯ ಸಹಕಾರದೊಂದಿಗೆ ಸುರತ್ಕಲ್ ವಿದ್ಯಾದಾಯಿನಿ ಪ್ರೌಢ ಶಾಲಾ ವಠಾರದ ವಜ್ರ ಮಹೋತ್ಸವ ಸಭಾಂಗಣದಲ್ಲಿ ಜರುಗಿದ ಶ್ರೀ ಶಾರದಾ ಮಹೋತ್ಸವದ ಪುಣ್ಯ ಸಂದರ್ಭದಲ್ಲಿ ಹಮ್ಮಿಕೊಂಡಿದ್ದ 'ನಮ್ಮ ಹಬ್ಬ- ನಮ್ಮ ಸೇವೆ' ಉಚಿತ ಮಧುಮೇಹ ತಪಾಸಣಾ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು.


ಸಾರ್ವಜನಿಕ ಶ್ರೀ ಶಾರದಾ ಮಹೋತ್ಸವ ಸಮಿತಿಯ ಅಧ್ಯಕ್ಷ ಉಜ್ವಲ್ ಎಂ.ಕೆ. ಮತ್ತು ರೋಟರಿ ಜಿಲ್ಲೆ 3181 ವಲಯ 2 ರ ಸಹಾಯಕ ಗವರ್ನರ್ ಸಂದೀಪ್ ರಾವ್ ಇಡ್ಯಾ ಶುಭ ಹಾರೈಸಿದರು. ಶ್ರೀ ಶಾರದಾ ಸೇವಾ ಟ್ರಸ್ಟ್ (ರಿ) ಸುರತ್ಕಲ್ ನ ಕಾರ್ಯದರ್ಶಿ ಸುಕುಮಾರ್ ಎಂ. ಯು., ಸದಸ್ಯ ಎನ್. ಕೃಷ್ಣ ಶೆಟ್ಟಿ, ಶ್ರೀ ಶಾರದಾ ಮಹೋತ್ಸವ ಸಮಿತಿಯ ಕಾರ್ಯದರ್ಶಿ ಸುರೇಶ್ ಶೆಟ್ಟಿ, ಸುರತ್ಕಲ್ ಕ್ಲಿನಿಕಲ್ ಲ್ಯಾಬೋರೆಟರಿಯ ಪ್ರವೀಣ್ ಮಲ್ಲಮಾರು, ಸುರತ್ಕಲ್ ರೋಟರಿ ಕ್ಲಬ್ ನ ಉಪಾಧ್ಯಕ್ಷ ಚಂದ್ರಕಾಂತ್ ಮರಾಟೆ, ನಿರ್ದೇಶಕರಾದ ಶ್ರೀನಿವಾಸ ರಾವ್ ಹೊಸಬೆಟ್ಟು, ರಾಮಮೋಹನ್. ವೈ, ಕೃಷ್ಣ ಮೂರ್ತಿ, ಆನಂದ ರಾವ್ ಉಪಸ್ಥಿತರಿದ್ದರು. ಸುಮಾರು 150 ಮಂದಿ ತಪಾಸಣೆ ಮಾಡಿಕೊಂಡಿದ್ದು ಅರೋಗ್ಯ ಸಲಹೆ ಪಡೆದುಕೊಂಡರು,

Views: Loading...

Post a Comment

0 Comments
Post a Comment (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top