ಮುಂಡಾಜೆ : ಸ್ಕೌಟಿಂಗ್ ತರಬೇತಿ ಶಿಬಿರದ ಉದ್ಘಾಟನೆ

Shreya Hegde
0


ಮುಂಡಾಜೆ: ವಿವೇಕಾನಂದ ವಿದ್ಯಾವರ್ಧಕ ಸಂಘ ಪುತ್ತೂರು (ರಿ.) ಇದರ ಅಧೀನಕ್ಕೊಳಪಟ್ಟ ಮುಂಡಾಜೆ ಪದವಿ ಪೂರ್ವ ಕಾಲೇಜು ಮುಂಡಾಜೆ ಹಾಗೂ ಸರಸ್ವತಿ ಆಂಗ್ಲ ಮಾಧ್ಯಮ ಶಾಲೆ ಮುಂಡಾಜೆ ಇಲ್ಲಿನ ಕಬ್ಸ್- ಬುಲ್ ಬುಲ್, ಸೌಟ್ಸ್- ಗೈಡ್ಸ್, ರೋವರ್ಸ್‌ ಮತ್ತು ರೇಂಜರ್ಸ್ ವಿಭಾಗಗಳ ತರಬೇತಿ ಶಿಬಿರದ ಉದ್ಘಾಟನೆಯು ಜರುಗಿತು. ಶಿಬಿರದ ಉದ್ಘಾಟನೆಯನ್ನು ವಿವೇಕಾನಂದ ಶಿಕ್ಷಣ ಸಂಸ್ಥೆಗಳು ಮುಂಡಾಜೆ ಇದರ ಅಧ್ಯಕ್ಷರಾದ ವಿನಯಚಂದ್ರ ಇವರು ನೆರವೇರಿಸಿ ಶಿಬಿರಕ್ಕೆ ಶುಭ ಹಾರೈಸಿದರು.


ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಗೀತಾ, ಸರಸ್ವತಿ ಆಂಗ್ಲ ಮಾಧ್ಯಮ ಶಾಲೆ ಮುಂಡಾಜೆಯ ಮುಖ್ಯಶಿಕ್ಷಕಿ ಚಂದ್ರಮತಿ, ಹಿರಿಯ ಶಿಕ್ಷಕಿ ಶ್ರೀಜಾ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ರೇಂಜರ್ ವಿದ್ಯಾರ್ಥಿನಿಯರ ಪ್ರಾರ್ಥನೆಯೊಂದಿಗೆ ಆರಂಭವಾದ ಕಾರ್ಯಕ್ರಮವನ್ನು ರೇಂಜರ್ ಲೀಡರ್ ವಸಂತಿ ನಿರೂಪಿಸಿ, ರೋವರ್ ಸ್ಕೌಟ್ ಲೀಡರ್ ಕೃಷ್ಣ ಕಿರಣ್ ಕೆ ಸ್ವಾಗತಿಸಿ, ಗೈಡ್ ಕ್ಯಾಪ್ಟನ್ ರೇವತಿ ಧನ್ಯವಾದಗೈದರು.

Post a Comment

0 Comments
Post a Comment (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top