ಮೀಠಿ ದೀಪಾವಳಿ ಅಭಿಯಾನ: ಗೂಂಜ್ ಜತೆ ಪಾಲುದಾರಿಕೆ

Shreya Hegde
0



ಮಂಗಳೂರು: ಎನ್‍ಪಿಸಿಐ ಭೀಮ್ ಅಭಿವೃದ್ಧಿಪಡಿಸಿರುವ ಭಾರತದ ಸ್ವದೇಶಿ ಪಾವತಿ ಆ್ಯಪ್ ಭೀಮ್ ಪೇಮೆಂಟ್ಸ್ ಆ್ಯಪ್, ತನ್ನ 'ಮೀಠಿ ದೀಪಾವಳಿ' ಅಭಿಯಾನದ ಮೂರನೇ ಆವೃತ್ತಿಯ ಮೂಲಕ ಹಬ್ಬದ ಸಂಭ್ರಮದ ಬೆಳಕನ್ನು ಹರಡುತ್ತಿದೆ. ಅಕ್ಟೋಬರ್ 19ರಿಂದ ನವೆಂಬರ್ 8ರವರೆಗೆ ಆ್ಯಪ್‍ನಲ್ಲಿ ಬಳಕೆದಾರರು ಮಾಡುವ ಪ್ರತಿ 7ನೇ ವಹಿವಾಟಿನ ಸಂದರ್ಭದಲ್ಲಿ, ಕಲಿಕೆಗೆ ಅಗತ್ಯವಾದ ನೆರವು ಬೇಕಿರುವ ಮಕ್ಕಳಿಗೆ ಶಾಲಾ ಕಿಟ್‍ಗಳನ್ನು ಒದಗಿಸುವ ಕೊಡುಗೆ ನೀಡಲಿದೆ.


ಈ ಅಭಿಯಾನಕ್ಕಾಗಿ, ಭೀಮ್ ಆ್ಯಪ್ ಶಿಕ್ಷಣ, ಸಮುದಾಯ ಅಭಿವೃದ್ಧಿ ಮತ್ತು ವಿಪತ್ತು ಪರಿಹಾರ ಕ್ಷೇತ್ರಗಳಲ್ಲಿ ಭಾರತದಾದ್ಯಂತ ದೀರ್ಘಕಾಲದಿಂದ ಮಾನವ ಘನತೆ ಮತ್ತು ಗೌರವಕ್ಕೆ ಆದ್ಯತೆ ನೀಡುವ ಉಪಕ್ರಮಗಳನ್ನು ಕೈಗೊಳ್ಳುತ್ತಿರುವ ಸಾಮಾಜಿಕ ಮತ್ತು ಅಭಿವೃದ್ಧಿ ಸಂಸ್ಥೆಯಾದ ಗೂಂಜ್ ಜೊತೆ ಪಾಲುದಾರಿಕೆ ಮಾಡಿಕೊಂಡಿದೆ. ಈ ಅಭಿಯಾನವು ಗ್ರಾಹಕರು ತಮ್ಮ ದೈನಂದಿನ ವಹಿವಾಟುಗಳಿಗಾಗಿ ಭೀಮ್ ಆ್ಯಪ್ ಅನ್ನು ಆಯ್ಕೆ ಮಾಡಿಕೊಳ್ಳುವಂತೆ ಪೆÇ್ರೀತ್ಸಾಹಿಸುವ ಜೊತೆಗೆ, ಹೆಚ್ಚಿನ ಮಕ್ಕಳಿಗೆ ಅಗತ್ಯವಾದ ಕಲಿಕಾ ಸಾಮಗ್ರಿಗಳು ತಲುಪುವಂತೆ ಮಾಡುವ ಸಾಮೂಹಿಕ ಪ್ರಯತ್ನದ ಭಾಗವಾಗಲು ಅವರನ್ನು ಉತ್ತೇಜಿಸುತ್ತದೆ ಎಂದು ಚೀಫ್ ಆಫ್ ಬಿಸಿನೆಸ್ ಗೌರವ್ ಕೊಚ್ಚರ್ ಹೇಳಿದರು.


'ಮೀಠಿ ದೀಪಾವಳಿ 2026' ಮೂಲಕ, ಡಿಜಿಟಲ್ ಪಾವತಿಯಂತಹ ಸರಳವಾದ ಕಾರ್ಯವನ್ನು ಮಗುವಿನ ಶಿಕ್ಷಣದಂತಹ ಅರ್ಥಪೂರ್ಣ ವಿಷಯದೊಂದಿಗೆ ಸಂಪರ್ಕಿಸುವ ಮೂಲಕ ಆ ಸಂತೋಷವನ್ನು ಇನ್ನಷ್ಟು ದೂರಕ್ಕೆ ಕೊಂಡೊಯ್ಯಲು ನಾವು ಬಯಸುತ್ತೇವೆ. ಪ್ರತಿಯೊಂದು ಮಗುವೂ ಕಲಿಯಲು, ಬೆಳೆಯಲು ಮತ್ತು ಉಜ್ವಲ ಭವಿಷ್ಯದ ಕನಸು ಕಾಣಲು ಅವಕಾಶವನ್ನು ಪಡೆಯಲು ಅರ್ಹವಾಗಿದೆ ಎಂದು ತಿಳಿಸಿದ್ದಾರೆ.


'ಮೀಠಿ ದೀಪಾವಳಿ 2026' ಮೂಲಕ, ಭೀಮ್ ಆ್ಯಪ್ ತನ್ನ ವಾರ್ಷಿಕ ಹಬ್ಬದ ಉಪಕ್ರಮವನ್ನು ಮುಂದುವರಿಸುತ್ತಿದ್ದು, ಡಿಜಿಟಲ್ ಪಾವತಿಗಳನ್ನು ಹಬ್ಬದ ಋತುವಿನಾಚೆಗೂ ವಿಸ್ತರಿಸುವ ಸಾಮಾಜಿಕ ಉದ್ದೇಶದೊಂದಿಗೆ ಸಂಪರ್ಕಿಸುತ್ತಿದೆ ಎಂದು ವಿವರಿಸಿದ್ದಾರೆ.

Post a Comment

0 Comments
Post a Comment (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top