ವಿದ್ಯಾರ್ಥಿಗಳ ಪ್ರತಿಭೆ ಅನಾವರಣಕ್ಕೆ ನವೀನ ಮಾದರಿಯ ಸ್ಪರ್ಧೆಗಳು ಅಗತ್ಯ

Shreya Hegde
0




ಹಳೆಯಂಗಡಿ: ವಿದ್ಯಾರ್ಥಿಗಳಲ್ಲಿ ಸುಪ್ತವಾಗಿರುವ ಪ್ರತಿಭಾ ಶಕ್ತಿಯ ಅನಾವರಣಕ್ಕೆ ನಾವೀನ್ಯ ಮಾದರಿಯ ಸ್ಪರ್ಧೆಗಳು ಅಗತ್ಯವಾಗಿದೆ. ಮೌಲ್ಯಾತ್ಮಕ ಹಳೆಯ ಚಲನಚಿತ್ರಗಳನ್ನು ಹೊಸ ತಲೆಮಾರು ಅಧ್ಯಯನ ನಡೆಸಿ ಅಭಿನಯಿಸುವುದರಿಂದ ಕಲಾ ಶಕ್ತಿಯ ಅರಿವಿನೊಂದಿಗೆ ಸೃಜನಾತ್ಮಕ ಕೌಶಲ್ಯ ಹೊರ ಹೊಮ್ಮುತ್ತದೆ ಎಂದು ಹಿರಿಯ ಟಿ.ವಿ. ನಿರೂಪಕ ಪ್ರಕಾಶ್ ಪುತ್ತೂರು ನುಡಿದರು. 


ಹಳೆಯಂಗಡಿ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಸಾಂಸ್ಕೃತಿಕ ಸಂಘ ಮತ್ತು ಐ.ಕ್ಯೂ.ಎ.ಸಿ. ಆಯೋಜಿಸಿದ 'ಬೆಳ್ಳಿತೆರೆ' ಹಳೆಯ ಶೇಷ್ಠ ಚಲನಚಿತ್ರಗಳಿಗೆ ಯುವ ತಲೆಮಾರಿನ ಕಲಾಭಿನಯದ ಭಾಷ್ಯ- ಅಂತರ್ ಗುಂಪು ವೈವಿಧ್ಯಮಯ ಸಾಂಸ್ಕತಿಕ ಸ್ಪರ್ಧೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು. ವಿದ್ಯಾರ್ಥಿಗಳು ಹೊಸ ಸವಾಲುಗಳನ್ನು ಸ್ವೀಕರಿಸಿ ಮುನ್ನಡೆಯುವಲ್ಲಿ ಪ್ರಾಧ್ಯಾಪಕರ ಪಾತ್ರ ಹಿರಿದಾಗಿದೆ ಎಂದರು.


ಕಾಲೇಜಿನ ಪ್ರಾಂಶುಪಾಲ ಡಾ.ಕಿರಣ್ ಎಂ. ಅಧ್ಯಕ್ಷತೆ ವಹಿಸಿ ಮಾತನಾಡಿ ವಿದ್ಯಾರ್ಥಿಗಳಲ್ಲಿ ಅಂತರ್ಗತವಾಗಿರುವ ಕಲಾಪ್ರತಿಭೆಗಳ ಹೊರಹೊಮ್ಮುವಿಕೆಗೆ ಸಾಂಸ್ಕತಿಕ ಸಂಘ ವೇದಿಕೆಯನ್ನು ಕಲ್ಪಿಸುತ್ತದೆ ಎಂದರು. ಸುಳ್ಯ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಸಹಾಯಕ ಪ್ರಾಧ್ಯಾಪಕಿ ಡಾ.ಪ್ರೀತಿ ರಾವ್, ಬೆಳ್ತಂಗಡಿ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಸಹಾಯಕ ಪ್ರಾಧ್ಯಾಪಕಿ ಡಾ. ದಿವ್ಯಾ ಪ್ರಭು ಮತ್ತು ಕಾರ್ಕಳದ ಎ.ಪಿ.ಎಂ. ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಉಪನ್ಯಾಸಕಿ ಅಕ್ಷತಾ ರಾವ್ ಬಿ. ತೀರ್ಪುಗಾರರಾಗಿ ಪಾಲ್ಗೊಂಡರು. ಸಾಂಸ್ಕೃತಿಕ ಸಂಘದ ಸಂಚಾಲಕಿ ಪೂರ್ಣಿಮಾ ಎಂ. ಸ್ಪರ್ಧೆ ಯ ವಿವರ ಗಳನ್ನು ನೀಡಿದರು.


ಐ.ಕ್ಯೂ.ಎ.ಸಿ.ಯ ಸಂಯೋಜಕ ಡಾ. ಲೋಕೇಶ್, ಸಾಂಸ್ಕೃತಿಕ ಸಂಘದ ಸದಸ್ಯರಾದ ಡಾ.ಅಜಯ್ ಮತ್ತು ಶರತ್ ಹಾರಾಡಿ ಉಪಸ್ಥಿತರಿದ್ದರು. ಹರ್ಷಿತಾ ಸ್ವಾಗತಿಸಿದರು. ಯಶಸ್ವಿನಿ ವಂದಿಸಿದರು. ಹಿತಾ ಕಾರ್ಯಕ್ರಮ ನಿರೂಪಿಸಿದರು.

Post a Comment

0 Comments
Post a Comment (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top