ಅಧ್ಯಾತ್ಮ ಅನುಭೂತಿಯಿಂದಲೇ ಭಾರತ ಪ್ರಸಿದ್ಧಿ: ಉದಯಸುಬ್ರಹ್ಮಣ್ಯ

Upayuktha
0

ಉಜಿರೆಯಲ್ಲಿ ವಾಲ್ಮೀಕಿ ಜಯಂತಿ





ಉಜಿರೆ: ಭಾರತದ ಜ್ಞಾನಪರಂಪರೆಗೆ ಸರಿಸಾಟಿಯಾದ ದೇಶವೇ ಇನ್ನೊಂದಿಲ್ಲ. ಪ್ರಾಚೀನ ಋಷಿಗಳಿಂದ ಇಲ್ಲಿಯ ವರೆಗೆ ಜ್ಞಾನ ಹಾಗೂ ವಿಜ್ಞಾನದಲ್ಲಿ ಸಾಧಿಸದೇ ಇರುವ ವಿಷಯ ಇಲ್ಲ. ವಾಲ್ಮೀಕಿ ಋಷಿಗಳಿಂದ ನಾವು ತಿಳಿಯಬೇಕಾದದ್ದು ಬಹಳಷ್ಟಿವೆ. ಸಾಮಾನ್ಯನೂ ಕೂಡ ಒಬ್ಬ ಋಷಿಯಾಗಿ ಕವಿಯಾಗಿ ಬೆಳೆಯಲು ಸಾಧ್ಯ ಎಂದು ತೋರಿಸಿಕೊಟ್ಟವರು ಅವರು. ಇವರ ರಾಮಾಯಣ ಕಾವ್ಯದಿಂದ ನೂರಾರು ಇತರ ರಾಮಾಯಣ ಗ್ರಂಥಗಳು ಬರೆಯಲ್ಪಟ್ಟಿವೆ. ಇದರಿಂದ ನೂರಾರು ಕವಿಗಳು ಹುಟ್ಟಲು ಸಾಧ್ಯವಾಗಿದೆ. ಇಂತವರ ಅಧ್ಯಾತ್ಮ ಅನುಭೂತಿಯಿಂದಲೇ ಭಾರತ ಪ್ರಸಿದ್ಧಿಯಾಗಿದೆ ಎಂದು ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಯೋಗ ವಿಜ್ಞಾನ ಹಾಗೂ ಪ್ರಕೃತಿ ಚಿಕಿತ್ಸೆ ವಿದ್ಯಾಲಯ ಇದರ ಯೋಗ ವಿಭಾಗದ ಸಹಾಯಕ ಪ್ರಾಧ್ಯಾಪಕ ಉದಯಸುಬ್ರಹ್ಮಣ್ಯ ಇವರು ಹೇಳಿದರು. 


ಇವರು ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪದವಿಪೂರ್ವ ಕಾಲೇಜಿನ ಸಂಸ್ಕೃತ ಸಂಘದ ವತಿಯಿಂದ ನಡೆದ 'ವಾಲ್ಮೀಕಿ ಸಾಂಗತ್ಯ' ಎನ್ನುವ ವಾಲ್ಮೀಕಿ ಜಯಂತಿಯ ಕಾರ್ಯಕ್ರಮದಲ್ಲಿ ಅಭ್ಯಾಗತರಾಗಿ ಮಾತನಾಡಿದರು. ಸಂಸ್ಕೃತ ಭಾಷಾ ವಿಭಾಗದ ಮುಖ್ಯಸ್ಥರಾದ ಡಾ. ಪ್ರಸನ್ನಕುಮಾರ ಐತಾಳ್ ಅಧ್ಯಕ್ಷತೆ ವಹಿಸಿದ್ದರು. 


ಶ್ರೇಯಾ ಮರಿಯಾ, ಹರಿಣಿ ಹಾಗೂ ಕವನಾ ಪ್ರಾರ್ಥಿಸಿದರು. ಸಂಸ್ಕೃತ ಸಂಘದ ಕಾರ್ಯದರ್ಶಿ ವಿಹಾನ್ ಕೆ.ಸಿ ಸ್ವಾಗತಿಸಿದರು. ಕಾರ್ಯದರ್ಶಿಗಳಾದ ಕವನಾ ಎಸ್ ಭಟ್ ನಿರೂಪಿಸಿ, ವಿಕ್ರಮ್ ಸಾಯ ವಂದಿಸಿದರು.


Post a Comment

0 Comments
Post a Comment (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top