ಧರ್ಮತ್ತಡ್ಕ ಶ್ರೀ ದುರ್ಗಾಪರಮೇಶ್ವರಿ ಹೈಸ್ಕೂಲ್‌ನಲ್ಲಿ ಸುವರ್ಣ ರಂಗಮಂದಿರಕ್ಕೆ ಶಿಲಾನ್ಯಾಸ

Shreya Hegde
0


ಧರ್ಮತ್ತಡ್ಕ: ಶ್ರೀ ದುರ್ಗಾಪರಮೇಶ್ವರಿ ಪ್ರೌಢಶಾಲೆ, ಧರ್ಮತ್ತಡ್ಕದ ಐವತ್ತನೇ ವರ್ಷದ ಸುವರ್ಣ ಸಂಭ್ರಮದ ಸ್ಮರಣಾರ್ಥವಾಗಿ ಹಳೆ ವಿದ್ಯಾರ್ಥಿಗಳ ಕೊಡುಗೆಯಾಗಿ ನಿರ್ಮಾಣಗೊಳ್ಳಲಿರುವ ಸುವರ್ಣ ರಂಗಮಂದಿರದ ಶಿಲಾನ್ಯಾಸವನ್ನು ಖ್ಯಾತ ವಾಸ್ತುತಜ್ಞರಾದ ರಾಮಚಂದ್ರ ಶಾಸ್ತ್ರಿಯವರು ನೆರವೇರಿಸಿದರು. ಇದೇ ಸಂದರ್ಭದಲ್ಲಿ ಸರ್ವಧರ್ಮ ಸೌಹಾರ್ದದ ಸಂಕೇತವಾಗಿ ವಿವಿಧ ಧರ್ಮಗಳ ಪ್ರತಿನಿಧಿಗಳ ಉಪಸ್ಥಿತಿಯಲ್ಲಿ ರಂಗಮಂದಿರದ ವಿನಂತಿ ಪತ್ರವನ್ನು ಬಿಡುಗಡೆಗೊಳಿಸಲಾಯಿತು.


ಈ ಕಾರ್ಯಕ್ರಮದಲ್ಲಿ ಕಂಬಾರು ದೇವಸ್ಥಾನದ ಆಡಳಿತ ಮೊಕ್ತೇಸರರಾದ ಕುಂಞಣ್ಣ ಭಂಡಾರಿ, ಚಳ್ಳಂಗಾಯ ಜುಮಾ ಮಸೀದಿಯ ಧರ್ಮಗುರುಗಳಾದ ಅನ್ಸಾರ್ ಸಾಹೇಬ್ ಹಾಗೂ ಪೆರ್ಮುದೆ ಸೇಂಟ್ ಲಾರೆನ್ಸ್ ಇಗರ್ಜಿಯ ಧರ್ಮಗುರುಗಳಾದ ಫಾದರ್ ಹೆರಾಲ್ಡ್ ಡಿಸೋಜಾ ಅವರು ಉಪಸ್ಥಿತರಿದ್ದು ವಿನಂತಿ ಪತ್ರವನ್ನು ಬಿಡುಗಡೆಗೊಳಿಸುವ ಮೂಲಕ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ಈ ಸುಸಂದರ್ಭದಲ್ಲಿ ಸುರ್ವರ್ಣ ಸಂಭ್ರಮ ಸಮಿತಿಗಳ ಗಣ್ಯರು ಉಪಸ್ಥಿತರಿದ್ದರು.


ಶಾಲೆಯ ಸುವರ್ಣ ಸಂಭ್ರಮದ ಅಂಗವಾಗಿ ಹಳೆ ವಿದ್ಯಾರ್ಥಿಗಳು, ಪೋಷಕರು, ಹಿತೈಷಿಗಳು, ಸಾರ್ವಜನಿಕರು, ಊರ ವಿದ್ಯಾಭಿಮಾನಿಗಳು ಹಾಗೂ  ಸಂಸ್ಥೆಯೊಂದಿಗೆ ಆತ್ಮೀಯ ಬಾಂಧವ್ಯ ಹೊಂದಿರುವವರೆಲ್ಲರ ಸಹಕಾರದಿಂದ ನಿರ್ಮಾಣಗೊಳ್ಳಲಿರುವ ಸುವರ್ಣ ರಂಗಮಂದಿರವು ಮುಂದಿನ ದಿನಗಳಲ್ಲಿ ಶಾಲೆಯ ಸಾಂಸ್ಕೃತಿಕ ಹಾಗೂ ಶೈಕ್ಷಣಿಕ ಚಟುವಟಿಕೆಗಳಿಗೆ ಉಪಯುಕ್ತ ವೇದಿಕೆಯಾಗಲಿದೆ ಎಂಬ ಆಶಯ ವ್ಯಕ್ತವಾಯಿತು.

Post a Comment

0 Comments
Post a Comment (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top