ಪ್ರಬುದ್ಧ ಮತದಾರರಿಂದ ಕೈ ಔಟ್- ರಾಜ್ಯ ಸರ್ಕಾರ ವಿರುದ್ಧ ಜನಾದೇಶ: ಡಾ. ಉಮೇಶ್ ಜಾಧವ್

Shreya Hegde
0



ಕಲಬುರಗಿ: ವಿಧಾನ ಪರಿಷತ್ ಪದವೀಧರ ಮತ್ತು ಶಿಕ್ಷಕ ಮತಕ್ಷೇತ್ರಗಳಿಗೆ ರಾಜ್ಯದಲ್ಲಿ ನಡೆದ ಚುನಾವಣಾ ಫಲಿತಾಂಶದಲ್ಲಿ ಪ್ರಬುದ್ಧ ಶಿಕ್ಷಕ ಮತದಾರರು ಕೈ ಯನ್ನು ಔಟ್ ಮಾಡಿರುವುದು ಸರಕಾರದ ಆಡಳಿತದ ವಿರುದ್ಧದ ಜನಾದೇಶದ ಸೂಚನೆ ಎಂದು ಮಾಜಿ ಲೋಕಸಭಾ ಸದಸ್ಯರಾದ ಡಾ. ಉಮೇಶ್ ಜಾಧವ್ ಹೇಳಿದರು.


ಕರ್ನಾಟಕದ ಎರಡು ಪದವೀಧರ ಮತ್ತು ಎರಡು ಶಿಕ್ಷಕ ಮತಕ್ಷೇತ್ರಗಳ ಚುನಾವಣೆಯಲ್ಲಿ ಪ್ರಬುದ್ಧ ಶಿಕ್ಷಕ ಮತದಾರರು ಕಾಂಗ್ರೆಸ್ ಪಕ್ಷವನ್ನು ಸಾರಾಸಗಟಾಗಿ ತಿರಸ್ಕರಿಸಿ ಬಿಜೆಪಿ ಜೆಡಿಎಸ್ ಮೈತ್ರಿಯ ಎನ್ ಡಿ ಎ ಅಭ್ಯರ್ಥಿಗಳನ್ನು ಗೆಲ್ಲಿಸಿ ಸರಕಾರದ ವಿರುದ್ಧ ಸ್ಪಷ್ಟವಾದ ಜನಾದೇಶ ನೀಡಿದ್ದಾರೆ. ಕಾಂಗ್ರೆಸ್ ಸರಕಾರದ ನಾಲ್ಕು ವರ್ಷದ ಆಡಳಿತ ಸಂಪೂರ್ಣ ವಿಫಲವಾಗಿದ್ದು ಅಭಿವೃದ್ಧಿ ಶೂನ್ಯವಾಗಿದೆ. ಪದವೀಧರ ಮತ್ತು ಶಿಕ್ಷಕರ ಸಮಸ್ಯೆಗೆ ಸ್ಪಂದಿಸದೆ ಕೇವಲ ಬುರುಡೆ ಮಾತುಗಳಿಂದ ಮಂಕುಬೂದಿ ಎರಚಿ ಜನರನ್ನು ಮೋಸ ಮಾಡಿದ ಸರಕಾರಕ್ಕೆ ತಕ್ಕ ಪಾಠ ಕಲಿಸಿದಂತಾಗಿದೆ. ರಾಜ್ಯದ ರಾಜಕಾರಣಕ್ಕೆ ಸ್ಟಿಂಗ್ ಅಪರೇಷನ್ ನಂತಹ ಲಜ್ಜೆ ಕೆಟ್ಟ ಸಂಪ್ರದಾಯ ಹಾಕಿದ ಕಾಂಗ್ರೆಸ್ ಬಗ್ಗೆ ಜನರಿಗೆ ಅಸಹ್ಯ ಹಾಗೂ ಭ್ರಮನಿರಸನವಾಗಿದೆ.


ಕಲ್ಯಾಣ ಕರ್ನಾಟಕ ಭಾಗದಲ್ಲಿ ಯಾವುದೇ ಅಭಿವೃದ್ಧಿಯನ್ನು ಮಾಡದೆ ಶಿಕ್ಷಕರ ಸಮಸ್ಯೆಗಳಿಗೆ ಸ್ಪಂದಿಸದೆ ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿಯಲ್ಲಿ ಅಕ್ಷರ ಆವಿಷ್ಕಾರದಂತಹ ಕಾರ್ಯಕ್ರಮಗಳನ್ನು ಅನುಷ್ಠಾನ ಮಾಡಿ ಸಾವಿರಾರು ಕೋಟಿ ರೂಪಾಯಿ ಪೋಲು ಮಾಡಿದ ಸರಕಾರವು ಎಸ್ ಎಸ್ ಎಲ್ ಸಿ, ಪಿಯುಸಿ ಫಲಿತಾಂಶದಲ್ಲಿ ಒಂದಿಸ್ಟೂ ಪ್ರಗತಿಯನ್ನು ಕಾಣಲು ಸಾಧ್ಯವಾಗಲಿಲ್ಲ. ಶಿಕ್ಷಣ ಕ್ಷೇತ್ರದಲ್ಲಿ ಗುಣಾತ್ಮಕ ಬದಲಾವಣೆಯ ನೀತಿ ಅನುಸರಿಸದೆ ಹಾಗೂ ಶಿಕ್ಷಕರ ನೇಮಕಾತಿ ಮಾಡದೆ ಪೂರ್ಣವಾಗಿ ಶಿಕ್ಷಣ ರಂಗವನ್ನು ಕಡೆಗಣಿಸಿ ಅಯೋಮಯ ಸೃಷ್ಟಿಸಿದ ಪರಿಣಾಮವಾಗಿ ಶಿಕ್ಷಕರು ಎನ್ ಡಿ ಎ ಅಭ್ಯರ್ಥಿಗಳನ್ನು ಗೆಲ್ಲಿಸುವುದರ ಮೂಲಕ ತಮ್ಮ ಆಕ್ರೋಶವನ್ನು ಹೊರಹಾಕಿದ್ದಾರೆ.


 ಖರ್ಗೆಯವರ ತವರಲ್ಲಿ ಬಿಜೆಪಿ ಅಭ್ಯರ್ಥಿ ಶಶಿಲ್ ನಮೋಶಿ ಭರ್ಜರಿ ಯಶಸ್ಸು ಸಾಧಿಸಿ ಕಮಲವನ್ನು ಅರಳಿಸಿ ಕಾಂಗ್ರೆಸ್ ಸರಕಾರಕ್ಕೆ ತೀವ್ರ ಮುಖ ಭಂಗವಾಗಿದೆ. 2028ರ ಚುನಾವಣೆಯಲ್ಲಿ ಇಡೀ ರಾಜ್ಯದಲ್ಲಿ ಭಾರತೀಯ ಜನತಾ ಪಕ್ಷದ ಮತ್ತು ಜೆಡಿಎಸ್ ಮೈತ್ರಿಕೂಟದ ಎನ್ ಡಿ ಎ ಅದ್ಭುತ ಯಶಸ್ಸು ಸಾಧಿಸುವ ಮುನ್ಸೂಚನೆಯನ್ನು ಈ ಚುನಾವಣೆ ನೀಡಿದೆ. ಐದನೇ ಬಾರಿಗೆ ವಿಧಾನ ಪರಿಷತ್ ಪ್ರವೇಶಿಸುವ ಜನಪ್ರಿಯ ನಾಯಕ, ಶಿಕ್ಷಣ ರಂಗದ ದೂರದೃಷ್ಟಿಯ ನಾಯಕ ಶಶಿಲ್ ಜಿ ನಮೋಶಿ ಅವರಿಗೆ ಅಭಿನಂದನೆಗಳು ಮತ್ತು ಮುಂದಿನ ದಿನಗಳಲ್ಲಿ ಕಲ್ಯಾಣ ಕರ್ನಾಟಕ ಭಾಗದ ಎಲ್ಲ ಶಿಕ್ಷಕರ ಬೇಡಿಕೆಗಳನ್ನು ಪ್ರಾಮಾಣಿಕವಾಗಿ ಬಗೆಹರಿಸಿ ಶಿಕ್ಷಣ ರಂಗದ ಪ್ರಗತಿಗೆ ಸಾರಥ್ಯವಹಿಸಲಿ ಎಂದು ಪತ್ರಿಕಾ ಹೇಳಿಕೆ ನೀಡಿ ಶುಭ ಕೋರಿದ್ದಾರೆ.


ಬ್ಯಾಲೆಟ್ ಪೇಪರ್‌ನಲ್ಲೂ ಸೋಲು; ಖರ್ಗೆಗೆ ಜಾಧವ್ ಟಾಂಗ್

ಚುನಾವಣೆಯಲ್ಲಿ ಸೋಲು ಕಂಡಾಗಲೆಲ್ಲಾ ಇವಿಎಂ ಮೇಲೆ ಆರೋಪ ಮಾಡುವ ಕಾಂಗ್ರೆಸ್ ನಾಯಕರಿಗೆ ಈಗ ಒಂದು ಸರಳ ಪ್ರಶ್ನೆ! ಮಲ್ಲಿಕಾರ್ಜುನ ಖರ್ಗೆಯವರೇ, ಈ ವಿಧಾನ ಪರಿಷತ್ ಚುನಾವಣೆಯಲ್ಲಿ ಮತದಾನ ನಡೆದಿರುವುದು ಇವಿಎಂ ಮೂಲಕವಲ್ಲ, ಬ್ಯಾಲೆಟ್ ಪೇಪರ್ ಮೂಲಕ ಹಾಗಾದರೆ, ಈಗ ಯಾರನ್ನು ದೂರುತ್ತೀರಿ. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರವೇ ಅಧಿಕಾರದಲ್ಲಿದೆ. ಆಡಳಿತ ಯಂತ್ರ ನಿಮ್ಮದೇ.ಬ್ಯಾಲೆಟ್ ಪೇಪರ್ ಮೂಲಕ ನಡೆದ ಚುನಾವಣೆಯಲ್ಲೂ ಪ್ರಬುದ್ಧ ಶಿಕ್ಷಕರು ಮತ್ತು ಪದವೀಧರ ಮತದಾರರು ಎನ್‌ಡಿಎ ಮೈತ್ರಿಕೂಟದ ಅಭ್ಯರ್ಥಿಗಳಿಗೆ ತಮ್ಮ ಸ್ಪಷ್ಟ ಬೆಂಬಲ ವ್ಯಕ್ತಪಡಿಸಿದ್ದಾರೆ. ಆದರೂ ಕಾಂಗ್ರೆಸ್ ನಾಯಕರಿಗೆ ಜನರ ತೀರ್ಪನ್ನು ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲವೇ?


ಇವಿಎಂ ಇದ್ದರೆ ಇವಿಎಂ ಮೇಲೆ ಆರೋಪ, ಬ್ಯಾಲೆಟ್ ಪೇಪರ್ ಇದ್ದರೆ ಯಾರ ಮೇಲೆ ಆರೋಪ? ಜನರ ತೀರ್ಪನ್ನು ಒಪ್ಪಿಕೊಳ್ಳದೆ ಪ್ರಜಾಪ್ರಭುತ್ವದ ವ್ಯವಸ್ಥೆಯನ್ನೇ ಪ್ರಶ್ನಿಸುವುದು, ಪ್ರಧಾನಿಯವರನ್ನು ಅಪಮಾಬ ಮಡುವುದು ಕಾಂಗ್ರೆಸ್‌ನ ರಾಜಕೀಯ ಸಂಸ್ಕೃತಿಯೇ? ಇದು ಇವಿಎಂನ ಸೋಲಲ್ಲ; ಜನರ ವಿಶ್ವಾಸ ಗಳಿಸುವಲ್ಲಿ ಕಾಂಗ್ರೆಸ್ ವಿಫಲವಾಗಿರುವುದರ ಬಗ್ಗೆ ಆತ್ಮಾವಲೋಕನ ಮಾಡಿಕೊಳ್ಳಬೇಕಾದ ಸಮಯ. ಶಿಕ್ಷಕರು ಮತ್ತು ಪದವೀಧರರು ತಮ್ಮ ಮತದಾನದ ಮೂಲಕ ನೀಡಿರುವ ಸಂದೇಶವನ್ನು ಅರ್ಥಮಾಡಿಕೊಳ್ಳಿ. ಜನರ ತೀರ್ಪನ್ನು ಗೌರವಿಸಿ, ಆಡಳಿತದ ವೈಫಲ್ಯಗಳನ್ನು ಸರಿಪಡಿಸುವತ್ತ ಗಮನಹರಿಸಿ ಎಂದು ಕಾಂಗ್ರೆಸ್ ನಾಯಕರಿಗೆ ಕಿವಿಮಾತು ಹೇಳಿದ್ದಾರೆ. ಬ್ಯಾಲೆಟ್ ಪೇಪರ್‌ನಲ್ಲೂ ಜನರು ಎನ್‌ಡಿಎ ಪರ ತೀರ್ಪು ನೀಡಿರುವಾಗ, ಈಗಲಾದರೂ ಇವಿಎಂ ಮೇಲೆ ಆರೋಪ ಮಾಡುವಿರಾ, ಅಥವಾ ಜನರ ತೀರ್ಪನ್ನು ಒಪ್ಪಿಕೊಳ್ಳುವ ಧೈರ್ಯ ತೋರುವಿರಾ? ಎಂದು ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ ಹಾಗೂ ಮರಿ ಖರ್ಗೆ ಅವರಿಗೆ ಡಾ. ಜಾಧವ್ ಟಾಂಗ್ ನೀಡಿದ್ದಾರೆ.

Post a Comment

0 Comments
Post a Comment (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top