ಸಿಎ ಇಂಟರ್ಮಿಡಿಯೇಟ್: ತ್ರಿಶಾ ಕಾಲೇಜಿನ ಮೊಹಮ್ಮದ್ ರಿಝಾನ್‌ಗೆ ದೇಶಕ್ಕೆ 35ನೇ ರ‍್ಯಾಂಕ್

Shreya Hegde
0




ಕಟಪಾಡಿ: ಇನ್‌ಸ್ಟಿಟ್ಯೂಟ್ ಆಫ್ ಚಾರ್ಟರ್ಡ್ ಅಕೌಂಟೆಂಟ್ಸ್ ಆಫ್ ಇಂಡಿಯಾ (ICAI) ನಡೆಸಿದ ಸೆಪ್ಟೆಂಬರ್ 2026ರ ಸಿಎ ಇಂಟರ್ಮಿಡಿಯೇಟ್ ಪರೀಕ್ಷೆಯಲ್ಲಿ ಕಟಪಾಡಿಯ ತ್ರಿಶಾ ವಿದ್ಯಾ ಕಾಲೇಜ್ ಆಫ್ ಕಾಮರ್ಸ್ ಆ್ಯಂಡ್‌ ಮ್ಯಾನೇಜ್ಮೆಂಟ್ ನ ಸಂಧ್ಯಾ ಕಾಲೇಜಿನ ವಿದ್ಯಾರ್ಥಿ ಮೊಹಮ್ಮದ್ ರಿಝಾನ್ ಅವರು ಒಟ್ಟು 449 ಅಂಕಗಳನ್ನು ಗಳಿಸಿ ಅಖಿಲ ಭಾರತ ಮಟ್ಟದಲ್ಲಿ 35ನೇ ರ‍್ಯಾಂಕ್ ಪಡೆದು ಗಮನಾರ್ಹ ಸಾಧನೆ ಮಾಡಿದ್ದಾರೆ.


ಉಡುಪಿಯ ಉದ್ಯಾವರದ ಆಸಿಫ್ ಅಜೀಜ್ ಮತ್ತು ರಿಝ್ವಾನಾ ಆಸಿಫ್ ದಂಪತಿಯ ಪುತ್ರರಾದ ಮೊಹಮ್ಮದ್ ರಿಝಾನ್ ಅವರು ತಮ್ಮ ಪರಿಶ್ರಮ, ಶ್ರದ್ಧೆ ಮತ್ತು ನಿರಂತರ ಅಧ್ಯಯನದ ಮೂಲಕ ಈ ಸಾಧನೆ ಮಾಡಿದ್ದಾರೆ. ವಿಷಯವಾರು ಅಂಕಗಳ ವಿವರ ಹೀಗಿದೆ: ಅಡ್ವಾನ್ಸ್ಡ್ ಅಕೌಂಟಿಂಗ್‌ನಲ್ಲಿ 84, ಕಾರ್ಪೊರೇಟ್ ಆ್ಯಂಡ್ ಅದರ್ ಲಾಸ್‌ನಲ್ಲಿ 68, ಟ್ಯಾಕ್ಸೇಶನ್‌ನಲ್ಲಿ 67, ಕಾಸ್ಟ್ ಆ್ಯಂಡ್ ಮ್ಯಾನೇಜ್‌ಮೆಂಟ್ ಅಕೌಂಟಿಂಗ್‌ನಲ್ಲಿ 83, ಆಡಿಟಿಂಗ್ ಆ್ಯಂಡ್ ಎಥಿಕ್ಸ್‌ನಲ್ಲಿ 75 ಹಾಗೂ ಸ್ಟ್ರಾಟೆಜಿಕ್ ಮ್ಯಾನೇಜ್‌ಮೆಂಟ್ ಆ್ಯಂಡ್ ಫೈನಾನ್ಷಿಯಲ್ ಮ್ಯಾನೇಜ್‌ಮೆಂಟ್‌ನಲ್ಲಿ 72 ಅಂಕಗಳನ್ನು ಗಳಿಸಿದ್ದಾರೆ.


ರಿಝಾನ್‌ ಕಟಪಾಡಿಯ ತ್ರಿಶಾ ಸಂಸ್ಥೆಯಲ್ಲಿ ಸಿಎ ಇಂಟರ್ಮಿಡಿಯೇಟ್ ಕೋಚಿಂಗ್ ಪಡೆದುಕೊಂಡಿದ್ದು ಅಖಿಲ ಭಾರತ ಮಟ್ಟದಲ್ಲಿ 35ನೇ ರ‍್ಯಾಂಕ್ ಗಳಿಸಿರುವುದು ಕಾಲೇಜಿನ ಶೈಕ್ಷಣಿಕ ವಾತಾವರಣ ಹಾಗೂ ವಿದ್ಯಾರ್ಥಿಯ ಸಾಧನಾ ಮನೋಭಾವಕ್ಕೆ ಹೆಮ್ಮೆಯ ಸಂಗತಿಯಾಗಿದೆ. ಅವರ ಈ ಸಾಧನೆ ಇತರ ವಿದ್ಯಾರ್ಥಿಗಳಿಗೂ ಸ್ಫೂರ್ತಿದಾಯಕವಾಗಿದ್ದು ವಿದ್ಯಾರ್ಥಿಯ ಸಾಧನೆಗೆ ತ್ರಿಶಾ ಸಂಸ್ಥೆಯ ಸಂಸ್ಥಾಪಕರಾದ ಸಿಎ  ಗೋಪಾಲಕೃಷ್ಣ ಭಟ್, ಸಿದ್ಧಾಂತ್ ಫೌಂಡೇಶನ್ ಟ್ರಸ್ಟಿಗಳಾದ ಶ್ರೀಮತಿ ನಮಿತಾ ಜಿ.ಭಟ್ ಮತ್ತು ರಾಮ್ ಪ್ರಭು, ಕಾಲೇಜಿನ ಆಡಳಿತ ಮಂಡಳಿ, ಪ್ರಾಂಶುಪಾಲರು, ಉಪನ್ಯಾಸಕ ವೃಂದ ಹಾಗೂ ಸಿಬ್ಬಂದಿಗಳು ಅಭಿನಂದನೆ ಸಲ್ಲಿಸಿ, ಅವರ ಮುಂದಿನ ಶೈಕ್ಷಣಿಕ ಮತ್ತು ವೃತ್ತಿಜೀವನಕ್ಕೆ ಶುಭ ಹಾರೈಸಿದ್ದಾರೆ.

Post a Comment

0 Comments
Post a Comment (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top