ಪ್ರೇಕ್ಷಕರು ಕಲೆಯ ಆರಾಧಕರಾಗ ಬೇಕು - ವಿದ್ವಾನ್ ಶ್ರೀಹರಿ ನಾರಾಯಣ ದಾಸ ಅಸ್ರಣ್ಣ

Shreya Hegde
0



ಕಾಸರಗೋಡು: ಕಲೆಯಲ್ಲಿ ತೊಡಗಿಕೊಂಡ ಕಲಾವಿದ ಆ ಕಲೆಯ ಸ್ವರೂಪವನ್ನು ಸರಿಯಾಗಿ ಅರಿತುಕೊಂಡು ವ್ಯವಸಾಯ ಮಾಡಿದರೆ ಅದು ಆತನಿಗೆ ಬ್ರಹ್ಮಾನಂದ ಸಾಹೋದರ್ಯವನ್ನು ಒದಗಿಸುತ್ತದೆ. ಅದಕ್ಕಿಂತ ಆಚಿನ ಆನಂದ ಮತ್ತೊಂದಿಲ್ಲ. ಪ್ರೇಕ್ಷಕರು ಕಲೆಯ ಆರಾಧಕರಾಗ ಬೇಕಲ್ಲದೆ ಕಲಾವಿದನ ಆರಾಧಕರು ಆಗಬಾರದು. ಚಪ್ಪಾಳೆ ಸಿಳ್ಳು ಕಲಾವಿದನನ್ನು ಹಾಳು ಮಾಡುತ್ತಿದೆ. ಮೇಳದ ಒಂದು ಯಕ್ಷಗಾನ ಪ್ರದರ್ಶನದಲ್ಲಿ ಹಿಮ್ಮೇಳಕ್ಕೆ ಅನೇಕ ಕಲಾವಿದರು ಇರುವುದೇ ಕಲೆಗೆ ತೊಡಕಾಗಿದೆ. ಸಮಯ ಸಂದರ್ಭಗಳನ್ನು ಅರಿತು ಭಾಗವತ ರಾಗಗಳನ್ನು ಬಳಸಲು ಕಲಿಯಬೇಕು.


ಭಾಗವತ ಆದವನಿಗೆ ಕಥೆ, ಸಾಹಿತ್ಯ ಜ್ಞಾನ, ರಂಗ ನಿಯಂತ್ರಣ ಸಾಮರ್ಥ್ಯ, ಅಶು ಕವಿತ್ವ ಎಲ್ಲವೂ ಇರಬೇಕಾಗುತ್ತದೆ. ಹಿಂದಿನ ಹಿರಿಯ ಭಾಗವತರುಗಳು ಅಂತಹ ಪ್ರತಿಭಾಶಾಲಿ ಗಳಾಗಿದ್ದರು. ಈಗಿನ ಹೊಸ ತಲೆಮಾರಿನ ಭಾಗವತರುಗಳು, ಹಿಮ್ಮೇಳ ಕಲಾವಿದರು ಈ ಕುರಿತು ಪ್ರಯತ್ನಶೀಲರಾಗ ಬೇಕು. ಆ ನಿಟ್ಟಿನಲ್ಲಿ ಇಂತಹ ಶಿಬಿರಗಳು ಪ್ರೇರಣೆ ಆಗಲಿ ಎಂದು ಅಕ್ಟೋಬರ್ 25 ಆದಿತ್ಯವಾರದಂದು ಸಿರಿಬಾಗಿಲು ವೆಂಕಪ್ಪಯ್ಯ ಸಾಂಸ್ಕೃತಿಕ ಪ್ರತಿಷ್ಠಾನದ ಶ್ರೀ ಕೇಶವಾನಂದ ಭಾರತಿ ಸ್ಮೃತಿ ಮಂದಿರದಲ್ಲಿ ಜರಗಿದ ಯಕ್ಷಗಾನ ಕಲೆಯ ದೀಪಕ್ಕೆ ತೈಲಧಾರೆಗಳಾಗೋಣ. ......!ಎಂಬ ಶೀರ್ಷಿಕೆ ಅಡಿಯಲ್ಲಿ ಯಕ್ಷಗಾನ ಹಿಮ್ಮೇಳ ಶಿಬಿರದ ಸಮಾರೋಪ ಸಮಾರಂಭದಲ್ಲಿ ವಿದ್ವಾನ್ ಶ್ರೀ ಶ್ರೀಹರಿನಾರಾಯಣದಾಸ ಆಸ್ರಣ್ಣ ಅನುವಂಶಿಕ ಅರ್ಚಕರು ಶ್ರೀ ಕ್ಷೇತ್ರ ಕಟೀಲು ದ.ಕ.ಇವರು ತಿಳಿಸಿದರು.


ಮುಖ್ಯ ಅತಿಥಿಗಳಾಗಿ ಶ್ರೀಕೃಷ್ಣ ಶರ್ಮ. ಪಿ ಪರುಮುಖ, ಕುಕ್ಕೆ ಸುಬ್ರಹ್ಮಣ್ಯ ಯಕ್ಷಗಾನ ಸಂಘಟಕ, ಹಾಗೂ ಹಿರಿಯ ಸಂಗೀತ ವಿದ್ವಾಂಸರಾದ ಶ್ರೀಮತಿ ಶಕುಂತಲಾ ಭಟ್ ಕುಂಚಿನಡ್ಕ ಭಾಗವಹಿಸಿದರು. ಯಕ್ಷಗಾನದ ಹಿರಿಯ ಹಿಮ್ಮೇಳ ಗುರುಗಳಾದ ಶ್ರೀ ಹರಿ ನಾರಾಯಣ ಬೈಪಡಿತಾಯ ಉಪಸ್ಥಿತರಿದ್ದರು. ಡಾ.ಶ್ರುತ ಕೀರ್ತಿ ರಾಜ ಉಜಿರೆ ನಿರೂಪಿಸಿದರೆ  ಪ್ರತಿಷ್ಠಾನದ ಅಧ್ಯಕ್ಷರಾದ ಸಿರಿಬಾಗಿಲು ರಾಮಕೃಷ್ಣ ಮಯ್ಯ  ಅತಿಥಿಗಳನ್ನು ಸ್ವಾಗತಿಸಿದರು.

Post a Comment

0 Comments
Post a Comment (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top