ಬಂಟ್ವಾಳ: ಸಂಪಾಜೆಯಿಂದ ಮಂಗಳೂರುವರೆಗೆ ಹಸಿರು ದಳ ಮಂಗಳೂರು ಇದರ ವತಿಯಿಂದ ಏರ್ಪಡಿಸಲಾದ ಸ್ವಚ್ಚ ದಂಡೆಯಾತ್ರೆ ಕೈಗೊಂಡಿರುವ ನಾಗರಾಜ ಬಜಾಲ್ ಇವರನ್ನು ಲಯನ್ಸ್ ಕ್ಲಬ್ ಮಾಣಿ ಇದರ ವತಿಯಿಂದ ಮಾಣಿ ಜಂಕ್ಷನ್‌ನಲ್ಲಿ ಸ್ವಾಗತಿಸಿ ಅವರು ಕೈಗೊಂಡಿರುವ ಯಾತ್ರೆಗೆ ಕೈಜೋಡಿಸಿದರು. ಹೆಜ್ಜೆ ನನ್ನದು ಹೊಣೆಗಾರಿಕೆ ನಮ್ಮದು ಎಂಬ ಸ್ವಚ್ಛ ದಂಡಯಾತ್ರೆ ಕಾರ್ಯಕ್ರಮಕ್ಕೆ ಲಯನ್ಸ್ ಕ್ಲಬ್ ಅಧ್ಯಕ್ಷ ವಿನ್ಸೆಂಟ್ ಲಸ್ರಾದೋ ಅಭಿನಂದನೆ ಸಲ್ಲಿಸಿದರು.
ಮಾಣಿ ಪರಿಸರದ ರಾಷ್ಟ್ರೀಯ ಹೆದ್ದಾರಿಯ ಪಕ್ಕದಲ್ಲಿದ್ದ ಪ್ಲಾಸ್ಟಿಕ್ ಹೆಕ್ಕುವ ಮೂಲಕ ಸ್ವಚ್ಚತಾ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಬಳಿಕ ಮಾಣಿಯಿಂದ ಸೂರಿಕುಮೇರುವರೆಗೆ ಪ್ಲಾಸ್ಟಿಕ್ ಹಾಗೂ ಕಸಗಳನ್ನು ಹೆಕ್ಕಿ ಗೋಣಿ ಚೀಲದಲ್ಲಿ ತುಂಬಿಸಿಸಲು ಲಯನ್ಸ್ ಕ್ಲಬ್ ಸದಸ್ಯರು ಸಹಕರಿಸಿದರು. ಸ್ಥಾಪಕಾಧ್ಯಕ್ಷ ಗಂಗಾಧರ ರೈ, ಡಾ. ಶ್ರೀನಾಥ್ ಆಳ್ವ, ಸಚ್ಚಿದಾನಂದ ರೈ ಪಾಳ್ಯ, ಉಮೇಶ್ ಸಮೃದ್ಧಿ, ಲೂಯಿಸ್ ಮಾರ್ಟಿಸ್, ಲಯನ್ಸ್ ಕ್ಲಬ್ ಕಾರ್ಯದರ್ಶಿ ಅನಿಲ್ ಕುಮಾರ್ ಪೆರಾಜೆ, ಮಾಜಿ ವಲಯಾಧ್ಯಕ್ಷ ಉದ್ಯಮಿ ಬಾಲಕೃಷ್ಣ ಶೆಟ್ಟಿ ಕಡೇಶ್ವಾಲ್ಯ, ಮಾರ್ಷೇಲ್ ಪಾಯಸ್ ಕೆದಿಲ, ಜಯಾನಂದ ಪೆರಾಜೆ, ಮತ್ತಿತರರು ಯಾತ್ರೆಯಲ್ಲಿ ಪಾಲ್ಗೊಂಡರು.


