ಅ.10; ಬನವಾಸಿಯ ಸುಸ್ಥಿರ ಕೃಷಿ ಅಧ್ಯಯನಕ್ಕೆ ಪೆರ್ಲ ನಾಲಂದಾ ಕಾಲೇಜು ವಿದ್ಯಾರ್ಥಿಗಳ ಭೇಟಿ.

Upayuktha
0



ಪೆರ್ಲ: ನಾಲಂದಾ ಆರ್ಟ್ಸ್ ಆ್ಯಂಡ್ ಸೈನ್ಸ್ ಕಾಲೇಜಿನ 'ಭೂಮಿತ್ರ ಸೇನೆ'ಯ ವತಿಯಿಂದ ಅಕ್ಟೋಬರ್ 10ರಂದು ನೀರ್ಚಾಲು ಸಮೀಪದ  ಬನವಾಸಿಗೆ ಶೈಕ್ಷಣಿಕ ಹಾಗೂ ಪರಿಸರ ಅಧ್ಯಯನ ಪ್ರವಾಸ ಆಯೋಜಿಸಲಾಗಿದೆ. ಕಾಲೇಜಿನ ಭೂಮಿತ್ರಸೇನೆಯ ವಿದ್ಯಾರ್ಥಿಗಳು, ಉಪನ್ಯಾಸಕರು ಹಾಗೂ ಪ್ರಾಂಶುಪಾಲರಾದ ಡಾ. ಮೋಹನ ಕುಂಟಾರ್ ಅವರ ನೇತೃತ್ವದಲ್ಲಿ ಈ ತಂಡವು ಬನವಾಸಿಯ ಸುಸ್ಥಿರ ಕೃಷಿ ಮಾದರಿಯನ್ನು ವೀಕ್ಷಿಸಲಿದೆ.


ದಿನಪೂರ್ತಿ ನಡೆಯುವ ಈ ಭೇಟಿಯಲ್ಲಿ ವಿದ್ಯಾರ್ಥಿಗಳು ಬನವಾಸಿಯ ಜಲಸಂರಕ್ಷಣೆಯ ಮಳೆಕೊಯ್ಲು ಕೊಳ, ಸಮೃದ್ಧ ಔಷಧೀಯ ಸಸ್ಯಗಳ ತೋಟ ಹಾಗೂ ಸಾಂಪ್ರದಾಯಿಕ ಭತ್ತದ ಕೃಷಿ ಪದ್ಧತಿಗಳನ್ನು ಪ್ರತ್ಯಕ್ಷವಾಗಿ ವೀಕ್ಷಿಸಿ ಅಧ್ಯಯನ ನಡೆಸಲಿದ್ದಾರೆ.


ಈ ಭೇಟಿಯ ಪ್ರಮುಖ ಆಕರ್ಷಣೆಯಾಗಿ ವಿದ್ಯಾರ್ಥಿಗಳು ಗ್ರಾಮೀಣ ಪರಂಪರೆಯ ಅಡುಗೆ ವಿಧಾನದ ನೇರ ಅನುಭವ ಪಡೆಯಲಿದ್ದಾರೆ. ಬಂಜರು ಭೂಮಿಯನ್ನು ಫಲವತ್ತಾದ ಕೃಷಿ ಕಾನನ 'ಬನವಾಸಿ'ಯನ್ನಾಗಿ ಪರಿವರ್ತಿಸಿದ ಡಾ. ರತ್ನಾಕರ ಮಲ್ಲಮೂಲೆ ಅವರು ಈ ಸಂದರ್ಭದಲ್ಲಿ ವಿದ್ಯಾರ್ಥಿಗಳನ್ನುದ್ದೇಶಿಸಿ ತಮ್ಮ ದೀರ್ಘ ಕೃಷಿ ತಪಸ್ಸಿನ ಅನುಭವಗಳನ್ನು ಹಂಚಿಕೊಳ್ಳಲಿದ್ದಾರೆ. ಕಾರ್ಯಕ್ರಮದ ಭಾಗವಾಗಿ ಕೃಷಿ, ಜಲಸಂರಕ್ಷಣೆ ಹಾಗೂ ಪರಿಸರ ಸಮತೋಲನದ ಕುರಿತು ವಿದ್ಯಾರ್ಥಿಗಳೊಂದಿಗೆ ವಿಶೇಷ ಸಂವಾದವೂ ನಡೆಯಲಿದೆ.

Post a Comment

0 Comments
Post a Comment (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top