ಮಂಗಳೂರು: ಫೋನ್ ಪೇ ಮತ್ತು ವೀಸಾ ಜಂಟಿಯಾಗಿ ಮೂರು ಹೊಸ ಪಾವತಿ ಪರಿಹಾರಗಳನ್ನು ಪ್ರಾರಂಭ ಘೋಷಿಸಿವೆ. ಟ್ಯಾಪ್ ಟು ಪೇ, ಕ್ರಾಸ್ ಬಾರ್ಡರ್ ಸ್ಕ್ಯಾನ್ ಟು ಪೇ ಮತ್ತು ಸ್ಮಾರ್ಟ್ ಆಕ್ಸೆಪ್ಟ್. ಗ್ಲೋಬಲ್ ಫಿನ್‌ಟೆಕ್ ಫೆಸ್ಟ್ ಈ ವರ್ಷ ವೇದಿಕೆಯಲ್ಲಿ ಎರಡು ಸಂಸ್ಥೆಗಳ ನಾಯಕತ್ವ ಅನಾವರಣಗೊಂಡ ಈ ಪಾಲುದಾರಿಕೆಯಿಂದಾಗಿ, ಅಂತರರಾಷ್ಟ್ರೀಯ ವಹಿವಾಟುಗಳಿಗಾಗಿ ಕ್ರಾಸ್ ಬಾರ್ಡರ್ ಸ್ಕ್ಯಾನ್ ಟು ಪೇ ಪರಿಚಯಿಸಿದ ಭಾರತದ ಮೊದಲ ಆ್ಯಪ್ ಫೋನ್ ಪೇ ಎನಿಸಿಕೊಂಡಿದೆ.
ಗ್ರಾಹಕರಿಗಾಗಿ ವೀಸಾದ ಮೂರು ಮುಖ್ಯ ಸಾಮರ್ಥ್ಯಗಳಾದ ಆನ್‌ಲೈನ್ ಡಿವೈಸ್ ಟೋಕನೈಸೇಶನ್, ಟ್ಯಾಪ್ ಟು ಪೇ ಮತ್ತು ಕ್ರಾಸ್ ಬಾರ್ಡರ್ ಸ್ಕ್ಯಾನ್ ಟು ಪೇ ಒಳಗೊಂಡ ಸಂಪೂರ್ಣ ಸೂಟ್ ಸಕ್ರಿಯಗೊಳಿಸಿದ ಮೊದಲ ಆ್ಯಪ್ ಫೋನ್ಪೇ ಆಗಿದೆ. ಇದರೊಂದಿಗೆ, ಈ ವೇದಿಕೆ ಸ್ಮಾರ್ಟ್ ಆಕ್ಸೆಪ್ಟ್ ಮೂಲಕ ಕಾರ್ಡ್ ಪಾವತಿಗಳನ್ನು ಸ್ವೀಕರಿಸಲು ಮೈಕ್ರೋ-ಮರ್ಚೆಂಟ್ಸ್‌ಗಳನ್ನು ಸಶಕ್ತಗೊಳಿಸುತ್ತಿದೆ.
ಫೆ.2025ರಲ್ಲಿ ವೆದಿಕೆಯಲ್ಲಿ ಪ್ರಾರಂಭಿಸಲಾದ ವೀಸಾ ಡಿವೈಸ್ ಟೋಕನೈಸೇಶನ್ ಆಧಾರದ ಮೇಲೆ, ಸುಗಮವಾದ ಕಾರ್ಡ್‌ಲೆಸ್ ಪೇಮೆಂಟ್ ಇಕೋಸಿಸ್ಟಮ್ ಸ್ಥಾಪಿಸುತ್ತದೆ. ಬಳಕೆದಾರರು ತಮ್ಮ ವೀಸಾ ಕಾರ್ಡ್ ಫೋನ್ ಪೇನಲ್ಲಿ ಒಮ್ಮೆ ಸೇವ್ ಮಾಡಿದರೆ ಸಾಕು, ಸ್ಟೋರ್‌ಗಳಲ್ಲಿ ಪಾವತಿಸಲು ತಮ್ಮ ಫೋನ್ ಟ್ಯಾಪ್ ಮಾಡಬಹುದು, ತಮ್ಮ ನೆಚ್ಚಿನ ಆನ್‌ಲೈನ್ ವ್ಯಾಪಾರಿಗಳ ಬಳಿ ಚೆಕ್‌ಔಟ್ ಮಾಡಬಹುದು ಅಥವಾ ವಿದೇಶ ಪ್ರಯಾಣದ ಸಮಯದಲ್ಲಿ ಕ್ಯೂಆರ್ ಕೋಡ್‌ಗಳನ್ನು ಸ್ಕ್ಯಾನ್ ಮಾಡಬಹುದು. ಇದರಿಂದ ಭೌತಿಕ ಕಾರ್ಡ್‌ಗಳ ಜೊತೆ ಕೊಂಡೊಯ್ಯುವ ಅಗತ್ಯವೇ ಸಂಪೂರ್ಣವಾಗಿ ಇಲ್ಲದಂತಾಗುತ್ತದೆ.
ಈ ಬಿಡುಗಡೆ ಸಂದರ್ಭದಲ್ಲಿ ಮಾತನಾಡಿದ ಫೋನ್ಪೇ ಸಹಸ್ಥಾಪಕ ಮತ್ತು ಸಿಪಿಟಿಒ ರಾಹುಲ್ ಚಾರಿ ಫೋನ್ಪೇನಲ್ಲಿ ನಮ್ಮ ದೃಷ್ಟಿಕೋನವು ಯಾವಾಗಲೂ ಪಾವತಿಗಳನ್ನು ಸಾರ್ವತ್ರಿಕವಾಗಿ ಸುಲಭ, ಸರಳ ಮತ್ತು ಸುರಕ್ಷಿತಗೊಳಿಸುವ ತಂತ್ರಜ್ಞಾನವನ್ನು ನಿರ್ಮಿಸುವುದಾಗಿದೆ ಎಂದರು.


