ಕೊಂಕಣಿ ಲೇಖಕ ಜೊನೆಲ್ ಕಾಸ್ಸಿಯಾ ನಿಧನ

Upayuktha
0


ಮಂಗಳೂರು: ಕೊಂಕಣಿ ಲೇಖಕ ‘ಜೊನೆಲ್ ಕಾಸ್ಸಿಯಾ’ ನಾಮಾಂಕಿತ ಜೋನ್ ಲುವಿಸ್ ಡಿಸೋಜಾ (85 ವರ್ಷ) ಅಲ್ಪಕಾಲದ ಅಸ್ವಾಸ್ಥ್ಯದಿಂದ ಸಪ್ಟೆಂಬರ್ 30ರಂದು ಖಾಸಗಿ ಆಸ್ಪತ್ರೆಯಲ್ಲಿ ನಿಧನ ಹೊಂದಿದರು. ಅವರು ಮೂರು ಅವಧಿಗೆ ಚರ್ಚಿನ ಉಪಾಧ್ಯಕ್ಷರಾಗಿ, ಚರ್ಚ್ ಮ್ಯಾಗಝಿನ್ ಸಂಪಾದಕರಾಗಿ, ಕಾಸ್ಸಿಯಾ ಕಥೊಲಿಕ್  ಸಭೆಯ ಸ್ಥಾಪಕಾಧ್ಯಕ್ಷರಾಗಿ, ಫಾದರ್ ಮುಲ್ಲರ್ ಸಂಸ್ಥೆಯ ಆಡಳಿತ ಮಂಡಳಿಯ ಸದಸ್ಯರಾಗಿ, ಸೈಂಟ್ ಜೋಸೆಫ್ ವರ್ಕ್ ಶಾಪಿನ ಆಡಳಿತ ಮಂಡಳಿ ಸದಸ್ಯರಾಗಿ, ಕೊಂಕಣಿ ಭಾಷಾ ಮಂಡಳ್-ಕರ್ನಾಟಕ ಇದರ ಅಧ್ಯಕ್ಷರಾಗಿ, ಸೌಹಾರ್ಧ ಫೌಂಡೇಶನ್ ಸಂಸ್ಥೆಯ ಟ್ರಸ್ಟಿಯಾಗಿ ಸೇವೆಯನ್ನು ಸಲ್ಲಿಸಿದ್ದರು.


ಇವರ ‘ಲೊಟ್ರೆಚೊ ದುಡು’, ‘ಹಂಕಾರಾಚೊ ಪ್ರತಿಫಳ್’, ಕೊಂಕಣಿ ಕಾದಂಬರಿಗಳು ಪ್ರಕಾಶಿತಗೊಂಡು ಅನೇಕ ಸಣ್ಣ ಕಥೆಗಳು ಹಾಗೂ ಲೇಖನಗಳು ಕೊಂಕಣಿ ಪತ್ರಿಕೆಗಳಲ್ಲಿ ಪ್ರಕಟಗೊಂಡಿದ್ದವು. ಇವರು ಪತ್ನಿ, ಇಬ್ಬರು ಪುತ್ರರು, ಸೊಸೆಯಂದಿರು, ಮೊಮ್ಮಕ್ಕಳು ಹಾಗೂ ಬಂಧುಬಳಗದವರನ್ನು ಅಗಲಿದ್ದಾರೆ. ಮೃತರ ಅಂತಿಮಕ್ರಿಯೆಯು ಶುಕ್ರವಾರ ಸಂಜೆ ಕಾಸ್ಸಿಯಾ ಸಂತ ರೀಟಾ ಚರ್ಚಿನಲ್ಲಿ 4 ಗಂಟೆಗೆ ನಡೆಯಲಿರುವುದು.

Post a Comment

0 Comments
Post a Comment (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top