ಭಜನೆ ಹಾಗೂ ನೈತಿಕತೆ ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ: ಅನಿಲ್ ಕುಮಾರ್

Upayuktha
0



ಧರ್ಮಸ್ಥಳ:  ಭಜನೆ ಮತ್ತು ನೈತಿಕತೆಯು ಆಳವಾಗಿ ಬೆರೆತುಕೊಂಡಿದ್ದು, ನೀತಿಯುತವಾದ ನಾಯಕತ್ವವನ್ನು ಬೆಳೆಸಿಕೊಳ್ಳುವಲ್ಲಿ ಭಜನೆಯು ಸಹಕಾರಿಯಾಗಿದೆ. ಭಜನೆಯಿಂದ ನಮ್ಮ ಆಂತರಿಕ ಗುಣಲಕ್ಷಣಗಳು ಪರಿವರ್ತನೆಯಾಗಿ ಉತ್ತಮ ವ್ಯಕ್ತಿತ್ವವನ್ನು ‌ ರೂಪಿಸಿಕೊಳ್ಳಬಹುದಾಗಿದೆ ಎಂದು ಎಸ್. ಕೆ. ಡಿ. ಆರ್. ಡಿ. ಪಿ. ಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅನಿಲ್ ಕುಮಾರ್ ಅಭಿಪ್ರಾಯ ವ್ಯಕ್ತಪಡಿಸಿದರು.


ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಭಜನಾ ಪರಿಷತ್ ವತಿಯಿಂದ ಅ.03, ಶನಿವಾರದಂದು ನಡೆದ 28ನೇ ವರ್ಷದ ಭಜನಾ ಕಮ್ಮಟದ ಆರನೇ ದಿನ ಶಿಬಿರದ ಉಪನ್ಯಾಸ ಕಾರ್ಯಕ್ರಮದಲ್ಲಿ ಮುಖ್ಯ ಉಪನ್ಯಾಸಕ ನೆಲೆಯಲ್ಲಿ  ಮಾತನಾಡಿದರು.


ನಮ್ಮ ಯಾವುದೇ ಕಾರ್ಯವನ್ನು ಅತಿ   ಶ್ರದ್ದೆಯಿಂದ ಕೈಗೊಂಡಾಗ ಮಾತ್ರ, ಆ ಕಾರ್ಯದ ಒಬ್ಬ ಉತ್ತಮ ನಾಯಕನಾಗಲು ಸಾಧ್ಯ. ಪ್ರತಿಯೊಬ್ಬ ಭಜಕನು ಯಾವ ರೀತಿಯ ದುರಭ್ಯಾಸಗಳಿಗೆ ಬಲಿಯಾಗದೆ, ಮಾದರಿ ತತ್ವವನ್ನು ಮೈಗೂಡಿಸಿಕೊಂಡು ಸಮಾಜಕ್ಕೆ ಒಬ್ಬ ಆದರ್ಶ ನಾಯಕನಾಗಬೇಕಾಗಿದೆ.  ಆಧ್ಯಾತ್ಮಿಕ ಪ್ರಕ್ರಿಯೆಯಲ್ಲಿ ಭಾಗಿಯಾಗುದರಿಂದ ಕುಟುಂಬದಲ್ಲಿ ಪ್ರೀತಿ, ಸೌಹಾರ್ದತೆ, ಐಕ್ಯತೆ ಹಾಗೂ ಒಗ್ಗಟ್ಟನ್ನು  ಹೆಚ್ಚಿಸಬಹುದಾಗಿದೆ. ಈ ದಿಸೆಯಲ್ಲಿ ನಾವು ಮುನ್ನಡೆಯಬೇಕು ಎಂದು ಹೇಳಿದರು.


ಆಧುನಿಕತೆಯ ಜೀವನಶೈಲಿಯಲ್ಲಿ ಸಾರ್ಥಕ ಬದುಕು ಅಸಾಧ್ಯವಾಗಿದ್ದು, ಪೂರ್ವಕಾಲದ ಸಂಸ್ಕೃತಿಯನ್ನು ಎತ್ತಿ ಹಿಡಿಯುವಲ್ಲಿ ಪ್ರಮುಖ ಪಾತ್ರ ವಹಿಸಿದ ಭಜನೆಯನ್ನು ಮೈಗೂಡಿಸಿಕೊಳ್ಳುವ ಮೂಲಕ ಸಾರ್ಥಕ ಬದುಕನ್ನು ಸಾಧ್ಯವಾಗಿಸಬಹುದಾಗಿದೆ ಎಂದು ಶಿಬಿರಾರ್ಥಿಗಳಿಗೆ ಬೋಧಿಸಿದರು.


ಖಾವಂದರ ಹಾಗೂ ಹೇಮಾವತಿ ಅಮ್ಮನವರ ದಿವ್ಯ ಚಿಂತನೆಯಿಂದ ಹೊರಬಂದ ಗ್ರಾಮೀಣ ಅಭಿವೃದ್ಧಿ ಯೋಜನೆಯು ಇಂದು ಕರ್ನಾಟಕದ ಸಾವಿರಾರು ಜನರ ಬದುಕಿಗೆ   ನೆರಳಾಗಿ ನಿಂತಿದೆ. ಜನತೆಗೆ ಮೂಲ ಸೌಕರ್ಯಗಳನ್ನು ಒದಗಿಸಿ, ಆರ್ಥಿಕತೆಯಲ್ಲಿ ಸದೃಢರನ್ನಾಗಿಸುವ ನಿಟ್ಟಿನಲ್ಲಿ ಕೈಗೊಳ್ಳುತ್ತಿರುವ ಸಾವಿರಾರು ಯೋಜನೆಗಳು  ಇಡೀ  ದೇಶಕ್ಕೆ  ಮಾದರಿಯಾಗಿ ನಿಂತಿದೆ ಎಂದು ಶ್ಲಾಘನೆಯನ್ನು ವ್ಯಕ್ತಪಡಿಸಿದರು.


ಈ ಸಂದರ್ಭದಲ್ಲಿ   ಎಸ್.ಡಿ.ಎಮ್. ಶಿಕ್ಷಣ ಸಂಸ್ಥೆಗಳು, ಉಜಿರೆ ಇದರ  ಉಪಾಧ್ಯಕ್ಷ ಡಿ. ಸುರೇಂದ್ರ ಕುಮಾರ್, ಶ್ರೀ ಮಹಾಲಕ್ಷ್ಮಿ ಸೇವಾ ಪ್ರತಿಷ್ಠಾನ, ಶ್ರೀ ಧಾಮ, ಮಾಣಿಲ ಇಲ್ಲಿನ   ಶ್ರೀ  ಮೋಹನದಾಸ ಪರಮಹಂಸ ಸ್ವಾಮೀಜಿಯವರು, ಶ್ರೀ ಕ್ಷೇತ್ರ ಧರ್ಮಸ್ಥಳದ ಹಿರಿಯ ಮುತ್ಸದ್ಧಿ ಭುಜಬಲಿ, ಭಜನಾ ಕಮ್ಮಟ ಪರಿಷತ್ ಸಂಚಾಲಕ ಸುಬ್ರಹ್ಮಣ್ಯ ಪ್ರಸಾದ್, ಸರ್ವ ಸದಸ್ಯರು ಹಾಗೂ ಶಿಬಿರಾರ್ಥಿಗಳು ಭಾಗಿಯಾಗಿದ್ದರು


Post a Comment

0 Comments
Post a Comment (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top