ಡಾ. ಶ್ರೀಕೃಷ್ಣ ಭಟ್ ಅರ್ತಿಕಜೆಯವರಿಗೆ ಭಾವಪೂರ್ಣ ಶ್ರದ್ಧಾಂಜಲಿ

Shreya Hegde
0


ಮಂಗಳೂರು: ಚೆನ್ನೈ ವಿಶ್ವವಿದ್ಯಾಲಯದ ವಿಶ್ರಾಂತ ಕನ್ನಡ ಪ್ರಾಧ್ಯಾಪಕ ಹಾಗೂ ವಿಭಾಗ ಮುಖ್ಯಸ್ಥರಾಗಿದ್ದ, ಹಿರಿಯ ಸಾಹಿತಿ ಡಾ. ಶ್ರೀಕೃಷ್ಣ ಭಟ್ ಅರ್ತಿಕಜೆ ಅವರಿಗೆ ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಮಂಗಳೂರು ತಾಲೂಕು ಘಟಕದ ವತಿಯಿಂದ ಅಕ್ಟೋಬರ್ 4, 2026 ರಂದು ಸಂಜೆ 'ಸರೋಜಿನಿ' ಬಾರೆಬೈಲ್, ಮಂಗಳೂರು ಇಲ್ಲಿ ಶ್ರದ್ಧಾಂಜಲಿ ಕಾರ್ಯಕ್ರಮವು ಜರುಗಿತು. ಮಂಗಳೂರು ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಶ್ರೀ ಮಂಜುನಾಥ ಎಸ್. ರೇವಣ್ಕರ್ ಅವರು ಸಭೆಯ ಅಧ್ಯಕ್ಷತೆ ವಹಿಸಿದ್ದರು.


ಕಾರ್ಯಕ್ರಮದಲ್ಲಿ ಹಿರಿಯರಾದ ಶ್ರೀ ಅನಂತ ಶರ್ಮ ಅವರು ನುಡಿ ನಮನ ಸಲ್ಲಿಸುತ್ತಾ, ಡಾ. ಶ್ರೀಕೃಷ್ಣ ಭಟ್ಟರು ತಮಿಳುನಾಡಿನಲ್ಲಿ ಸಲ್ಲಿಸಿದ ಅನನ್ಯ ಕನ್ನಡ ಸೇವೆ, ಅವರ ಸಾಹಿತ್ಯಕ ಕೃತಿಗಳು, ಸಂಶೋಧನಾ ಕಾರ್ಯಗಳು, ಹಲವು ಭಾಷೆಗಳ ಪಾಂಡಿತ್ಯ ಹಾಗೂ ಅನುವಾದದ ಸಾಧನೆಗಳನ್ನು ಸ್ಮರಿಸಿದರು. ಎಲ್ಲದಕ್ಕಿಂತ ಹೆಚ್ಚಾಗಿ ಅವರ ಮಾನವೀಯ ಅಂತಃಕರಣ ಮತ್ತು ಎಲ್ಲರನ್ನೂ ಪ್ರೀತಿಸುತ್ತಿದ್ದ ಅವರ ಆದರ್ಶ ಗುಣಗಳನ್ನು ನೆನಪಿಸಿಕೊಂಡು ಭಾವಪೂರ್ಣ ನಮನ ಸಲ್ಲಿಸಿದರು.


ಇದೇ ವೇಳೆ, ಶ್ರೀ ಸುಬ್ರಮಣ್ಯ ಭಟ್ ಅರ್ತಿಕಜೆ ಅವರು ಮಾತನಾಡಿ, ಡಾ. ಶ್ರೀಕೃಷ್ಣ ಭಟ್ ಅರ್ತಿಕಜೆಯವರ ಕನ್ನಡ ಸೇವೆಯನ್ನು ಸ್ಮರಿಸುವುದರ ಜೊತೆಗೆ, ನುಡಿ ನಮನ ಸಲ್ಲಿಸಿದ ಕನ್ನಡ ಸಾಹಿತ್ಯ ಪರಿಷತ್ತಿಗೆ ಅರ್ತಿಕಜೆ ಕುಟುಂಬದ ಪರವಾಗಿ ಧನ್ಯವಾದಗಳನ್ನು ಅರ್ಪಿಸಿದರು. ಕಾರ್ಯಕ್ರಮದಲ್ಲಿ ಕ.ಸಾ.ಪ. ಮಂಗಳೂರು ತಾಲೂಕು ಘಟಕದ ಗೌರವ ಕಾರ್ಯದರ್ಶಿಗಳಾದ ಡಾ. ಮುರಲೀ ಮೋಹನ್ ಮತ್ತು ಗಣೇಶ್ ಪ್ರಸಾದ್ ಜೀ, ಹಾಗೂ ಕೋಶಾಧಿಕಾರಿ ಶ್ರೀ ಸುಬ್ರಾಯ ಭಟ್ ಉಪಸ್ಥಿತರಿದ್ದರು.


ಬಾರೆಬೈಲ್ ಬಡಾವಣೆಯ ಗಣ್ಯರಾದ ಶ್ರೀ ರವೀಂದ್ರನಾಥ್ ಪಿ. ಎಸ್., ಶ್ರೀಕೃಷ್ಣ ಭಟ್, ಕಸಾಪದ ಶ್ರೀ ರವೀಂದ್ರನಾಥ್, ಶ್ರೀ ಸನತ್ ಕುಮಾರ್ ಜೈನ್ ಹಾಗೂ ಡಾ. ರಾಜಶ್ರೀ ಮೋಹನ್ ಸೇರಿದಂತೆ ಸರ್ವ ಸದಸ್ಯರು ಉಪಸ್ಥಿತರಿದ್ದು, ದಿವಂಗತರಿಗೆ ಪುಷ್ಪ ನಮನ ಸಲ್ಲಿಸಿ ಗೌರವ ಅರ್ಪಿಸಿದರು.

Post a Comment

0 Comments
Post a Comment (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top