ಭೀಮ್ ಆಪ್ ನಲ್ಲಿ ತತ್ಕಾಲ್ ಎನ್‍ಪಿಎಸ್ ಸೇವೆ ಆರಂಭ

Shreya Hegde
0


ಮಂಗಳೂರು: ಎನ್‍ಪಿಸಿಐ ಭೀಮ್ ಸರ್ವೀಸಸ್ ಲಿಮಿಟೆಡ್ ಇಂದು ಭೀಮ್ ಪೇಮೆಂಟ್ಸ್ ಆ್ಯಪ್‍ನಲ್ಲಿ ತತ್ಕಾಲ್ ಎನ್‍ಪಿಸ್ ಸೌಲಭ್ಯ ಆರಂಭವನ್ನು ಘೋಷಿಸಿದೆ. ಪೆನ್ಷನ್ ಫಂಡ್ ರೆಗ್ಯುಲೇಟರಿ ಅಂಡ್ ಡೆವಲಪ್‍ಮೆಂಟ್ ಅಥಾರಿಟಿ (ಪಿ.ಎಫ್‍.ಆರ್.ಡಿ.ಎ) ಆರಂಭಿಸಿರುವ ಈ ಸೌಲಭ್ಯದ ಮೂಲಕ, ಬಳಕೆದಾರರು ಬ್ಯಾಂಕ್ ಶಾಖೆಗೆ ಭೇಟಿ ನೀಡದೆ ಅಥವಾ ಹೊಸ ದಾಖಲೆಗಳನ್ನು ಸಲ್ಲಿಸದೆ, ಕೇವಲ ಮೂರು ಹಂತಗಳಲ್ಲಿ ಆ್ಯಪ್ ಮೂಲಕ ನ್ಯಾಷನಲ್ ಪೆನ್ಷನ್ ಸಿಸ್ಟಮ್ (ಎನ್‍ಪಿಎಸ್) ಖಾತೆಯನ್ನು ತೆರೆಯಬಹುದು ಎಂದು ಎನ್‍ಬಿಎಸ್‍ಎಲ್ ಎಂಡಿ ಲಲಿತಾ ನಟರಾಜ್ ಪ್ರಕಟಣೆಯಲ್ಲಿ ಹೇಳಿದ್ದಾರೆ.


ಖಾತೆ ತೆರೆಯುವ ಪ್ರಕ್ರಿಯೆಯಲ್ಲಿ ಬ್ಯಾಂಕ್ ಈಗಾಗಲೇ ಪರಿಶೀಲಿಸಿರುವ ಕೆವೈಸಿ ವಿವರಗಳನ್ನೇ ಬಳಸಲಾಗುತ್ತದೆ. ಬಳಕೆದಾರರು ತಮ್ಮ ಜನ್ಮ ದಿನಾಂಕವನ್ನು ನಮೂದಿಸಿ, ಅರ್ಹ ಬ್ಯಾಂಕ್ ಖಾತೆಯನ್ನು ಆಯ್ಕೆ ಮಾಡಿಕೊಂಡು, ಯುಪಿಐ ಮೂಲಕ ಮೊದಲ ಎನ್‍ಪಿಎಸ್ ಕಂತನ್ನು ಪಾವತಿಸಬೇಕು. ಪ್ರಸ್ತುತ, ಭೀಮ್ ಆ್ಯಪ್‍ನಲ್ಲಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಎಚ್‍ಡಿಎಫ್‍ಸಿ ಬ್ಯಾಂಕ್, ಐಸಿಐಸಿಐ ಬ್ಯಾಂಕ್, ಆಕ್ಸಿಸ್ ಬ್ಯಾಂಕ್, ಇಂಡಸ್‍ಇಂಡ್ ಬ್ಯಾಂಕ್ ಮತ್ತು ಬ್ಯಾಂಕ್ ಆಫ್ ಬರೋಡಾ ಗ್ರಾಹಕರಿಗೆ 'ತತ್ಕಾಲ್ ಎನ್‍ಪಿಎಸ್' ಸೌಲಭ್ಯ ಲಭ್ಯವಿದೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಬ್ಯಾಂಕ್‍ಗಳನ್ನು ಈ ಸೌಲಭ್ಯದ ವ್ಯಾಪ್ತಿಗೆ ಸೇರಿಸುವ ನಿರೀಕ್ಷೆಯಿದೆ ಎಂದು ವಿವರಿಸಿದ್ದಾರೆ.


18ರಿಂದ 85 ವರ್ಷ ವಯಸ್ಸಿನ ಅರ್ಹ ಭಾರತೀಯ ನಾಗರಿಕರು ಭೀಮ್ ಪೇಮೆಂಟ್ಸ್ ಆ್ಯಪ್‍ನಲ್ಲಿರುವ 'ತತ್ಕಾಲ್ ಎನ್‍ಪಿಎಸ್' ಸೌಲಭ್ಯದ ಮೂಲಕ ಎನ್‍ಪಿಎಸ್ ಖಾತೆ ತೆರೆಯಬಹುದು. ಖಾತೆ ತೆರೆಯುವಾಗ ಕನಿಷ್ಠ ರೂ. 250 ಜಮೆ ಮಾಡಬೇಕು. ನಂತರದ ಕಂತುಗಳನ್ನು ಅನ್ವಯವಾಗುವ ಎನ್‍ಪಿಎಸ್ ನಿಯಮಗಳ ಪ್ರಕಾರ ಕನಿಷ್ಠ ರೂ. 10ರ ಗುಣಕಗಳಲ್ಲಿ ಪಾವತಿಸಬಹುದು ಎಂದು ಪ್ರಕಟಣೆ ಹೇಳಿದೆ.

Post a Comment

0 Comments
Post a Comment (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top