ವಿದ್ಯಾರ್ಥಿಗಳಿಗೆ ಗುಣಮಟ್ಟದ ಆಹಾರ ಪೂರೈಕೆ ಗುರಿ: ಶಶಿಲ್ ನಮೋಶಿ

Upayuktha
0

ಪಿಡಿಎ ಎಂಜಿನಿಯರಿಂಗ್ ಕಾಲೇಜ್ ನವೀಕೃತ ಉಪಹಾರ ಗೃಹಕ್ಕೆ ಚಾಲನೆ



ಕಲಬುರಗಿ: ಪೂಜ್ಯ ದೊಡ್ಡಪ್ಪ ಅಪ್ಪ ಇಂಜಿನಿಯರಿಂಗ್ ಕಾಲೇಜಿನ ನವೀಕೃತ ಉಪಾಹಾರ ಗೃಹವನ್ನು ವಿಧಾನಪರಿಷತ್ ಸದಸ್ಯರು ಹಾಗೂ ಎಚ್ ಕೆ ಇ ಸೊಸೈಟಿಯ ಅಧ್ಯಕ್ಷರಾದ ಶಶಿಲ್ ನಮೋಶಿ ಜ್ಯೋತಿ ಬೆಳಗಿಸಿ ಉದ್ಘಾಟಿಸಿ ಚಾಲನೆ ನೀಡಿದರು.


ನಗರದ ಪಿಡಿಎ ಇಂಜಿನಿಯರಿಂಗ್ ಕಾಲೇಜಿನ ಆವರಣದಲ್ಲಿ ಬುಧವಾರ (ಸೆ. 2 ರಂದು) ನವೀಕೃತ ಉಪಾಹಾರ ಗೃಹವನ್ನು ಉದ್ಘಾಟಿಸಿದ ನಂತರ ಶಶಿಲ್ ಜಿ ನಮೋಶಿಯವರು ಮಾತನಾಡುತ್ತಾ ಇಂಜಿನಿಯರಿಂಗ್ ಕಾಲೇಜು ಆವರಣದಲ್ಲಿ ಸುಮಾರು 4 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದು ಅವರಿಗೆ ಉತ್ತಮ ಗುಣಮಟ್ಟದ ಹಾಗೂ ಕೈಗೆಟಕುವ ದರದಲ್ಲಿ ಆಹಾರ ಪೂರೈಕೆಗಾಗಿ ಹೋಟೆಲ್ ಉದ್ಯಮದಲ್ಲಿ ಹೆಸರಾಂತ ಕರಾವಳಿ ಮೂಲದ ಶ್ರೀ ಕೃಷ್ಣ ಭವನ ಗ್ರೂಪಿನವರ ಉಪಾಹಾರ ಗೃಹವನ್ನು ಆರಂಭಿಸಲಾಗಿದೆ. ಇದರಿಂದ ವಿದ್ಯಾರ್ಥಿಗಳ ಬಹುದಿನಗಳ ಈಡೇರಿಸಿದಂತಾಗಿದೆ ಎಂದು ಹೇಳಿದರು.


ಕಾರ್ಯಕ್ರಮದಲ್ಲಿ ಶ್ರೀ ಕೃಷ್ಣ ಭವನದ ವ್ಯವಸ್ಥಾಪಕ ನಿರ್ವಾಹಕರಾದ ಸುಜಿತ್ ಶೆಟ್ಟಿ ಸರ್ವರನ್ನು ಸ್ವಾಗತಿಸಿ ನಮೋಶಿಯವರಿಗೆ ಶಾಲು ಹಾಗೂ ಹೂಗುಚ್ಛ ನೀಡಿ ಸನ್ಮಾನಿಸಿದರು. ಹೋಟೆಲ್ ಸಂಘದ ಸದಸ್ಯರಾದ ಸುನಿಲ್ ಶೆಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿ ಉತ್ತಮ ವ್ಯವಸ್ಥೆಯೊಂದಿಗೆ ಗುಣಮಟ್ಟದ ಆಹಾರ ತಯಾರಿಸಿ ವಿದ್ಯಾರ್ಥಿಗಳಿಗೆ ಹಾಗೂ ಸಾರ್ವಜನಿಕರಿಗೆ ನೀಡಲು ಸಜ್ಜಾಗಿದ್ದು ಇದು ಇಂಜಿನಿಯರಿಂಗ್ ಕಾಲೇಜಿನ ಅನೇಕ ಸಮಯಗಳ ಕೊರತೆಯನ್ನು ನೀಗಿಸಿದಂತಾಗಿದೆ ಎಂದರು.


ಈ ಸಂದರ್ಭದಲ್ಲಿ ಹೈ.ಕ. ಶಿಕ್ಷಣ ಸಂಸ್ಥೆಯ ಆಡಳಿತ ಮಂಡಳಿ ಸದಸ್ಯರಾದ ಅಶೋಕ್ ಪಟ್ಟಣ್, ಕುಲ ಸಚಿವರಾದ ಜಯಂತ ಉಡುಪ,ವಿಶೇಷ ಅಧಿಕಾರಿ ದೇವ ಸುಧಾಕರ ಪಾಟೀಲ್, ಆಡಳಿತಾಧಿಕಾರಿ ಡಾ. ಎಸ್.ಎಲ್ ಹಿರೇಮಠ ಪರೀಕ್ಷಾ ನಿಯಂತ್ರಕರಾದ ವಿಜಯ ಹಿರೇಮಠ, ಪ್ರಾಂಶುಪಾಲರಾದ ಡಾ ಸಿದ್ದರಾಮ ಆರ್ ಪಾಟೀಲ್, ಉಪಪ್ರಾಂಶುಪಾಲರಾದ ಎಸ್ ಆರ್ ಹೊಟ್ಟಿ, ಡಾ ಭಾರತಿ ಹರಸೂರ್, ಆಕಾಶವಾಣಿಯ ನಿವೃತ್ತ ಕಾರ್ಯಕ್ರಮ ಮುಖ್ಯಸ್ಥ ಡಾ. ಸದಾನಂದ ಪೆರ್ಲ, ಮಹಾ ಕೀರ್ತಿ ಶೆಟ್ಟಿ ಹೋಟೆಲ್ ಸಂಘದ ಅಧ್ಯಕ್ಷ ನರಸಿಂಹ ಮೆಂಡನ್, ದ. ಕ. ಸಂಘದ ಪ್ರಶಾಂತ ಶೆಟ್ಟಿ ಇನ್ನಾ, ಚಂದ್ರಶೇಖರ ಶೆಟ್ಟಿ, ಜಯಶ್ರೀ ಶೆಟ್ಟಿ, ಕ್ಷಮಾ ಶೆಟ್ಟಿ, ಮತ್ತಿತರರು ಉಪಸ್ಥಿತರಿದ್ದರು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter

Post a Comment

0 Comments
Post a Comment (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top