ಮಂಗಳೂರು: ಸಿ.ಆರ್.ಇ ಕಾರ್ಯಾಗಾರ

Shreya Hegde
0

ಮಂಗಳೂರು: ಸೇವಾ ಭಾರತಿ (ರಿ) ಮಂಗಳೂರು ಇದರ ಅಂಗಸಂಸ್ಥೆಯಾದ ಅದಮ್ಯ ಚೇತನಾ ದಿವ್ಯಾಂಗ ಮಕ್ಕಳ ವಸತಿಯುತ ಶಾಲೆ, ಮೊಂಟೆಪದವು, ಮಾಧವವನ ಇಲ್ಲಿ NIEPID ದಾವಣಗೆರೆ ಇದರ ಸಹಯೋಗದೊಂದಿಗೆ “CRE (Continues Rehabilitation Education) ಕಾರ್ಯಾಗಾರವನ್ನು ದಿನಾಂಕ 23.09.2026ರಿಂದ 25.09.2026ರವರೆಗೆ 3 ದಿನಗಳ ಕಾಲ ಹಮ್ಮಿಕೊಳ್ಳಲಾಯಿತು. ಈ ಕಾರ್ಯಕ್ರಮಕ್ಕೆ ಅತಿಥಿಯಾಗಿ ಯೆನೆಪೋಯ ಹೋಮಿಯೋಪತಿ ಮೆಡಿಕಲ್ ಕಾಲೇಜು, ಆಸ್ಪತ್ರೆಯ ಪ್ರಾಂಶುಪಾಲರಾದ ಡಾ. ವಿಜಯೇಂದ್ರ ಇಟಗಿ ಹಾಗೂ ಸಮಪನ್ಮೂಲ ವ್ಯಕ್ತಿಗಳಾಗಿ ಸಂಯೋಜಿತ ಪ್ರಾದೇಶಿಕ ಕೇಂದ್ರ ದಾವಣಗೆರೆ ಇದರ ವಿಶೇಷ ಶಿಕ್ಷಣ ವಿಭಾಗದ ಸಹಾಯಕ ಪ್ರಾಧ್ಯಾಪಕರಾದ ಡಾ. ದೇವರಾಜ್ ಎನ್.ಬಿ ಮತ್ತು ಕ್ಲಿನಕಲ್ ಸೈಕಾಲಜಿ ವಿಭಾಗದ ಕ್ಲಿನಿಕಲ್ ಸಹಾಯಕರಾದ ಶ್ರೀ ರಾಜು ತಾಳಿಕೋಟೆ ಇವರು ಆಗಮಿಸಿದರು. 


ಕಾರ್ಯಕ್ರಮಕ್ಕೆ ವಿಶೇಷ ಶಿಕ್ಷಕರಾದ ಅಶೋಕ್ ಮಂಡ್ಯ ಇವರು ಪ್ರಾರ್ಥನಾ ಗೀತೆಯನ್ನು ಹಾಡಿ ಚಾಲನೆ ನೀಡಿದರು. ಪ್ರಾಸ್ತಾವಿಕ ಮಾತನಾಡಿ, ಅತಿಥಿ ಗಣ್ಯರುಗಳನ್ನು ಸಂಸ್ಥೆಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶ್ರೀ ಪೃಥ್ವಿಪಾಲ ಕೆ ಇವರು ಸ್ವಾಗತಿಸಿದರು. ಕಾರ್ಯಾಗಾರದ ಉದ್ಘಾಟನೆಯು ಅತಿಥಿ ಗಣ್ಯರಿಂದ ದೀಪ ಬೆಳಗಿಸುವುದರ ಮೂಲಕ ನೆರವೇರಿತು. ಕಾರ್ಯಕ್ರಮದ ಸಂಪನ್ಮೂಲ ವ್ಯಕ್ತಿಗಳಾದ ಸಂಯೋಜಿತ ಪ್ರಾದೇಶಿಕ ಕೇಂದ್ರ ದಾವಣಗೆರೆಯ ಇಲಾಖೆಯ ವಿಶೇಷ ಶಿಕ್ಷಣದ ಸಹಾಯಕ ಪ್ರಾಧ್ಯಾಪಕರು ಡಾ. ದೇವರಾಜ್ ಎನ್.ಬಿ ಇವರು, ಅವರ “ಸಂಯೋಜಿತ ಪ್ರಾದೇಶಿಕ ಕೇಂದ್ರ, ದಾವಣಗೆರೆ” ಇಲ್ಲಿ ವಿಶೇಷ ಮಕ್ಕಳಿಗೆ ಉನ್ನತ ಮಟ್ಟದ ಚಿಕಿತ್ಸೆ ಹಾಗೂ ಸೌಲಭ್ಯ ಇರುವ ಕುರಿತು ಮತ್ತು ದಿಶಾ ಪಠ್ಯಕ್ರಮ ಬಗ್ಗೆ ಮಾಹಿತಿಯನ್ನು ನೀಡಿದರು.


ಮುಖ್ಯ ಶಿಕ್ಷಕಿ ಶ್ರೀಮತಿ ವರ್ಷ ನಿರೂಪಿಸಿದರು. ವಿಶೇಷ ಶಿಕ್ಷಕಿ ಶ್ರೀಮತಿ ರೇಖಾ ವಂದಿಸಿದರು. ಸಂಸ್ಥೆಯ ಕೋಶಾಧಿಕಾರಿ ಪಿ ವಿನೋದ್ ಶೆಣೈ, ಸಂಸ್ಥೆಯ ಗೌರವ ಕಾರ್ಯದರ್ಶಿ ಹೆಚ್. ನಾಗರಾಜ್ ಭಟ್, ಶಿಕ್ಷಕ ರಕ್ಷಕ ಸದಸ್ಯರು, ಸ್ವಯಂ ಸೇವಕರು, ವಿವಿಧ ಶಾಲೆಯ ವಿಶೇಷ ಶಿಕ್ಷಕರು, ವಿಶ್ವಸ್ಥರು ಉಪಸ್ಥಿತರಿದ್ದರು.


ಕೊನೆಯ ದಿನದ ಸಮಾರೋಪ ಸಮಾರಂಭದಲ್ಲಿ ನಮ್ಮ ಸಂಸ್ಥೆಯ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಯವರಾದ ಪೃಥ್ವಿಪಾಲ ಕೆ ಇವರು ಈ ಕಾರ್ಯಗಾರದ ಬಗ್ಗೆ ಮಾತನಾಡಿ ತಮ್ಮ ಅನಿಸಿಕೆಗಳನ್ನು ಮತ್ತು ಇಂತಹ ಕಾರ್ಯಾಗಾರದ ಅಗತ್ಯಗಳ ಬಗ್ಗೆ ಹಾಗೂ ವಿಶೇಷ ಶಿಕ್ಷಕರು ಇಂತಹ ಕಾರ್ಯಾಗಾರದ ಸದುಪಯೋಗ ಪಡೆದುಕೊಳ್ಳಬೇಕೆಂದು ತಿಳಿಸಿದರು. ಈ ಕಾರ್ಯಾಗಾರಕ್ಕೆ ಆಗಮಿಸಿದ ವಿಶೇಷ ಶಿಕ್ಷಕಿಯಾದ ಯಮುನಾ ಮತ್ತು ಶಿಕ್ಷಕರರಾದ ಶಿವಾಜಿ ಎ.ಕೆ ಇವರು ತಮ್ಮ ಅನಿಸಿಕೆಗಳನ್ನು ತಿಳಿಸಿ ನಮ್ಮ ಸಂಸ್ಥೆಗೆ ಧನ್ಯವಾದವನ್ನು ಅರ್ಪಿಸಿದರು.

Views: Loading...

Post a Comment

0 Comments
Post a Comment (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top