ಗಡಿನಾಡ ಕಲಾ ವೇದಿಕೆಯಿಂದ 'ಕಲಾ ಸೌರಭ 2026' ಪ್ರಶಸ್ತಿ ಪ್ರದಾನ

Shreya Hegde
0


ಕಾಸರಗೋಡು: ಗಡಿನಾಡ ಸಾಂಸ್ಕೃತಿಕ ಕಲಾ ವೇದಿಕೆ (ರಿ.) ಕಾಸರಗೋಡು ಸಂಸ್ಥೆಯ ವತಿಯಿಂದ ಸೀತಾಂಗೋಳಿ ಶ್ರೀ ದೇವಿ ಭಜನಾ ಮಂದಿರದ 19ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವದ ಅಂಗವಾಗಿ 'ಸಾಂಸ್ಕೃತಿಕ ಕಲಾ ವೈಭವ' ಕಾರ್ಯಕ್ರಮ ವೈಭವದಿಂದ ನೆರವೇರಿತು.


ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಗುರುರಾಜ್ ಕಾಸರಗೋಡು ಅವರ ಸಂಯೋಜನೆ ಮತ್ತು ನಿರೂಪಣೆಯಲ್ಲಿ ನಡೆದ ಈ ಸಾಂಸ್ಕೃತಿಕ ರಸಸಂಜೆಯಲ್ಲಿ 50ಕ್ಕೂ ಹೆಚ್ಚು ಕಲಾವಿದರು ಭಾಗವಹಿಸಿ ಸಾರ್ವಜನಿಕರ ಮೆಚ್ಚುಗೆಗೆ ಪಾತ್ರರಾದರು.


ಈ ಶುಭ ಸಂದರ್ಭದಲ್ಲಿ ಸಂಸ್ಥೆಯ ಪ್ರಮುಖ ಪದಾಧಿಕಾರಿಗಳು ಹಾಗೂ ಗಣ್ಯರ ಸಮ್ಮುಖದಲ್ಲಿ ಅಪ್ರತಿಮ ನೃತ್ಯ ಕಲಾವಿದರಾದ ಕುಮಾರಿ ಸುತನಿಧಿ, ಕುಮಾರಿ ಪ್ರಣಮ್ಯ ಕುಲಾಲ್ ಮತ್ತು ಶ್ರೀಮತಿ ರಮ್ಯಾ ಶಿವರಾಜ್ ಅವರಿಗೆ 'ಕಲಾ ಸೌರಭ 2026' ಪ್ರಶಸ್ತಿ ಹಾಗೂ ಪುಟಾಣಿ ತೇಜುಷಾ ಅವರಿಗೆ 'ಬಾಲ ಕಲಾ ಸೌರಭ 2026' ಪ್ರಶಸ್ತಿ ನೀಡಿ ಗೌರವಿಸಲಾಯಿತು. ಕಾರ್ಯಕ್ರಮದ ಕೊನೆಯಲ್ಲಿ ಭಾಗವಹಿಸಿದ ಸಂಸ್ಥೆಯ ಎಲ್ಲಾ ಕಲಾವಿದರಿಗೂ ಸ್ಮರಣಿಕೆ ನೀಡಿ ಸನ್ಮಾನಿಸಲಾಯಿತು.

Post a Comment

0 Comments
Post a Comment (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top