ಮಂಗಳೂರು: ಪ್ರಧಾನಿ ಮೋದಿಯವರ 76ನೇ ಜನ್ಮದಿನದ ಪ್ರಯುಕ್ತ ಸೇವಾಸಂಕಲ್ಪ ಅಭಿಯಾನದ ಭಾಗವಾಗಿ ಬಿಜೆಪಿ ಮಂಗಳೂರು ನಗರ ದಕ್ಷಿಣ ಮಂಡಲದ ಅಲ್ಪಸಂಖ್ಯಾತ ಮೋರ್ಚಾದ ವತಿಯಿಂದ ಜಪ್ಪು ವೆಲೆನ್ಸಿಯದಲ್ಲಿರುವ ಸೇಂಟ್ ಆಂಥೋನಿ ಅನಾಥಾಶ್ರಮದ 350 ಆಶ್ರಿತರಿಗೆ ಹಣ್ಣು ಹಂಪಲು ವಿತರಿಸುವ ಕಾರ್ಯಕ್ರಮವು ನಡೆಯಿತು.
ಮಂಡಲದ ಅಲ್ಪಸಂಖ್ಯಾತ ಮೋರ್ಚಾದ ಅಧ್ಯಕ್ಷರಾದ ದೀಪಕ್ ಡಿಸೋಜರವರ ಅಧ್ಯಕ್ಷತೆಯಲ್ಲಿ ಹಾಗೂ ಮಂಡಲದ ಬಿಜೆಪಿ ಅಧ್ಯಕ್ಷರಾದ ರಮೇಶ್ ಕಂಡೆಟ್ಟು ರವರ ಉಪಸ್ಥಿತಿಯಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಅನಾಥಾಶ್ರಮದ ನಿರ್ದೇಶಕರಾದ ಫಾ. ಜೆ.ಬಿ ಕ್ರಾಸ್ತ, ಅರ್ಷದ್ ಪೋಪಿ, ಶಾಕೀರ್ ಕಣ್ಣೂರು, ನೆಲ್ಸನ್ ಕ್ಯಾಸ್ಟಲಿನೋ, ಸುಶೀಲ್ ಪಾಲನ್ನ, ಎ. ಆರ್ ಬೋಳಾರ್, ಗಿಲ್ ಕ್ರಿಸ್ಟ್ ಡಿಸೋಜಾ, ರೋಹನ್ ಡಿಸೋಜ, ಜೋಶ್ವನ್, ಮತ್ತಿತರರು ಉಪಸ್ಥಿತರಿದ್ದರು.
