ಉಜಿರೆ: ಎಸ್ ಡಿ ಎಂ ಪದವಿಪೂರ್ವ ಕಾಲೇಜಿನ ಮಾನವ ಸಂಪನ್ಮೂಲ, ಮಹಿಳಾ ಅಭಿವೃದ್ಧಿ ಹಾಗೂ ವೃತ್ತಿಮಾರ್ಗದರ್ಶನ ಕೋಶಗಳ ವತಿಯಿಂದ ಎರಡು ದಿನಗಳಲ್ಲಿ ನಡೆದ 'ಲಿಂಗಸೂಕ್ಷ್ಮತೆ ಅರಿವು' ತರಬೇತಿ ಕಾರ್ಯಕ್ರಮದ ಸಮಾರೋಪ ನಡೆಯಿತು.
ಕಾಲೇಜಿನ ಮಾನವ ಸಂಪನ್ಮೂಲ, ಮಹಿಳಾ ಅಭಿವೃದ್ಧಿ ಹಾಗೂ ವೃತ್ತಿಮಾರ್ಗದರ್ಶನ ಕೋಶಗಳ ಸಂಚಾಲಕರಾದ ಡಾ.ಪ್ರಸನ್ನಕುಮಾರ ಐತಾಳ್, ಎಸ್ ಡಿ ಎಂ ಸ್ನಾತ್ತಕೋತ್ತರ ಕಾಲೇಜಿನ ಮನಃಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕಿ ಅಶ್ವಿನಿ ಕಾರಂತ್ ಹಾಗೂ ಸಿಂಧು ವಿ. ತರಬೇತಿ ನೀಡಿದ ಮನಃಶಾಸ್ತ್ರ ವಿಭಾಗದ ವಿದ್ಯಾರ್ಥಿಗಳಿಗೆ ಪ್ರಮಾಣಪತ್ರ ನೀಡಿ ಗೌರವಿಸಿದರು.
ಕಾಲೇಜಿನ ಮಾನವ ಸಂಪನ್ಮೂಲ, ಮಹಿಳಾ ಅಭಿವೃದ್ಧಿ ಹಾಗೂ ವೃತ್ತಿಮಾರ್ಗದರ್ಶನ ಕೋಶಗಳ ಸದಸ್ಯೆ ಉಪನ್ಯಾಸಕಿ ಸ್ಮಿತಾ ಬೇಡೇಕರ್ ನಿರೂಪಿಸಿ, ವಂದಿಸಿದರು. ವಿದ್ಯಾರ್ಥಿ ಪ್ರತಿನಿಧಿ ಐಶ್ವರ್ಯ ಶೆಟ್ಟಿ ಸಹಕರಿಸಿದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ

