ಪ್ರದೇಶ ಹೋಟೆಲ್ ಸಂಘಕ್ಕೆ ಡಾ. ಸದಾನಂದ ಪೆರ್ಲ ಸೇರ್ಪಡೆ

Upayuktha
0

 


 ಕಲಬುರಗಿ : ಪ್ರದೇಶ ಹೋಟೆಲ್ ಅಸೋಸಿಯೇಷನ್ ಸದಸ್ಯರಾಗಿ ಕಲಬುರಗಿಯ ಹೋಟೆಲ್ ಬೃಂದಾವನ ಗ್ರ್ಯಾಂಡ್ ನ ವ್ಯವಸ್ಥಾಪಕ ನಿರ್ದೇಶಕರಾದ ಡಾ. ಸದಾನಂದ ಪೆರ್ಲ ಅವರನ್ನು ಸೇರ್ಪಡೆ ಮಾಡಲಾಗಿದೆ ಎಂದು ಪ್ರದೇಶ ಹೋಟೆಲ್  ಅಸೋಸಿಯೇಷನ್ ಉಪಾಧ್ಯಕ್ಷರಾದ ಸತ್ಯನಾಥ ಶೆಟ್ಟಿ ಪ್ರಕಟಿಸಿದರು. 


ಕಲಬುರಗಿಯಲ್ಲಿ ಬುಧವಾರ ( ಆಗಸ್ಟ್ 12 ರಂದು ) ನಗರದ ಸಾರ್ವಜನಿಕ ಉದ್ಯಾನವನದ ಶ್ರೀಯಾತ್ರಿ ನಿವಾಸ್ ಸಭಾಂಗಣದಲ್ಲಿ ನಡೆದ ಕಲಬುರಗಿ ಜಿಲ್ಲಾ ಹೋಟೆಲ್ ವಸತಿ ಮತ್ತು ಬೇಕರಿ ಮಾಲೀಕರ ಸಂಘದ ಸಭೆಯಲ್ಲಿ ಅವರಿಗೆ ಸದಸ್ಯತ್ವ ನೀಡಿದ ನಂತರ ಸನ್ಮಾನಿಸಲಾಯಿತು. ರಾಜ್ಯ ಹಾಗೂ ಜಿಲ್ಲಾ ಸಂಘಕ್ಕೆ ಸೇರ್ಪಡೆಯಾದ ಡಾ ಪೆರ್ಲ ಅವರ ಅನುಭವವನ್ನು ಉದ್ಯಮ ರಂಗದ ಬೆಳವಣಿಗೆಗೆ ಬಳಸಲಾಗುವುದು ಎಂದು ಸತ್ಯನಾಥ ಶೆಟ್ಟಿ ಹೇಳಿ ಶುಭ ಹಾರೈಸಿದರು. 


ಜಿಲ್ಲಾಧ್ಯಕ್ಷ ನರಸಿಂಹ ಮೆಂಡನ್ ಉಪಾಧ್ಯಕ್ಷರಾದ ಗಿರಿಧರ ಭಟ್, ಮೊಯಿನುದ್ದೀನ್, ಶರಣು ಪಾಟೀಲ್ ಮಹಾಕೀರ್ತಿ ಶೆಟ್ಟಿ, ಸುನಿಲ್ ಶೆಟ್ಟಿ, ಮಾಲಾ ಕಣ್ಣಿ ಮತ್ತಿತರರು ಶುಭ ಕೋರಿದರು.



ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top