ಸ್ವಾತಂತ್ರ್ಯದ ಅಮೃತ ಮಹೋತ್ಸವದಂದು ಪ್ರಾರಂಭಿಸಿದ 'ಹರ್ ಘರ್ ತಿರಂಗ' ಅಭಿಯಾನಕ್ಕೆ ಈಗ ಐದು ವರ್ಷ. ಸ್ವಾತಂತ್ರ್ಯ ಹೋರಾಟದ ಸ್ಫೂರ್ತಿಗೀತೆ ವಂದೇ ಮಾತರಂಗೆ ಸಹ ಈಗ ನೂರಾ ಐವತ್ತರ ಸಂಭ್ರಮ.
ದೇಶಾದ್ಯಂತ ಎಲ್ಲ ಮನೆ, ಕಟ್ಟಡಗಳ ಮೇಲೆ ಇದೇ 9 ರಿಂದ 17 ರವರೆಗೆ ಒಂಭತ್ತು ದಿನಗಳ ಕಾಲ ಹಗಲು - ರಾತ್ರಿ ಎನ್ನದೇ ನಮ್ಮ ತ್ರಿವರ್ಣ ಧ್ವಜ ಹಾರಾಡುತ್ತದೆ.
ದೇಶಕ್ಕೊಂದು ಧ್ವಜದ ಕಲ್ಪನೆ ಮೊದಲು ಹುಟ್ಟಿದ್ದು ಆಂಧ್ರ ಪ್ರದೇಶದ ಸ್ವಾತಂತ್ರ್ಯ ಹೋರಾಟಗಾರ,ಬ್ರಿಟಿಷ್ ಸೇನೆಯ ಸೈನಿಕ ಪಿಂಗಳಿ ವೆಂಕಯ್ಯ ಅನ್ನುವವರ ಮನಸ್ಸಿನಲ್ಲಿ
1906 ಕಲ್ಕತ್ತ ಕಾಂಗ್ರೆಸ್ ಅಧಿವೇಶನದಲ್ಲಿ ಭಾಗಿಯಾಗಿದ್ದ ಅವರಿಗೆ ಅಧಿವೇಶನದಲ್ಲಿ ಯೂನಿಯನ್ ಜಾಕ್ ಹಾರಿಸುವಾಗ ಭಾರತೀಯರಿಗೊಂದು ಧ್ವಜ ಬೇಡವೇ ಅನ್ನುವ ಪ್ರಶ್ನೆ ಮೂಡಿತು.
1921 ವಿಜಯವಾಡ ಕಾಂಗ್ರೆಸ್ ಅಧಿವೇಶನಕ್ಕೆ ಆಗಮಿಸಿದ್ದ ಗಾಂಧೀಜೀ ಅವರಿಗೆ ಕೇಸರಿ - ಹಸಿರು ಬಾವುಟದ ಕಲ್ಪನೆಯನ್ನು ಅವರಿಗೆ ತೋರಿಸಿದರು. ಅವೆರಡರ ನಡುವೆ ಬಿಳಿ ಯನ್ನು ಸೇರಿಸಲು ಗಾಂಧೀಜೀ ಸಲಹೆ ನೀಡಿದರು.
ಮುಂದೆ ಹಲವಾರು ಚಿಂತನ ಮಂಥನಗಳು ನಡೆದು,ಜುಲೈ 22 ರಂದು ಸಂವಿಧಾನ ರಚನಾ ಸಭೆ ಈಗಿರುವ ಧ್ವಜವನ್ನು ಅಂಗೀಕರಿಸಿತು
ಧ್ವಜ ಸಂಹಿತೆ
ಧ್ವಜದ ವರ್ಣ,ವಿನ್ಯಾಸ,ಉಪಯೋಗಿಸುವ ವಿಧಾನ, ದುರುಪಯೋಗಕ್ಕೆ ದಂಡನೆ ಬಗ್ಗೆ ಈ ಅಧಿನಿಯಮಗಳಲ್ಲಿ ಹೇಳಿದೆ.
ಧ್ವಜ ಖಾದಿ, ಕೈ ಮಗ್ಗದ ಹತ್ತಿ ಅಥವಾ ರೇಷ್ಮೆ ಬಟ್ಟೆಯಲ್ಲಿರಬೇಕು. 2021 ರ ತಿದ್ದುಪಡಿಯಲ್ಲಿ ಕಾಗದ, ಪಾಲಿಸ್ಟರ್ ಹಾಗೂ ಯಾಂತ್ರಿಕ ಮಗ್ಗದ ಬಟ್ಟೆ ಧ್ವಜಗಳಿಗೆ ವಿನಾಯಿತಿ ನೀಡಲಾಗಿದೆ.
* ಧ್ವಜದ ಉದ್ದಗಲ 3:2 ಪ್ರಮಾಣದಲ್ಲಿರಬೇಕು
* ಮೂರೂ ಬಣ್ಣಗಳೂ ಆಯತಾಕಾರದಲ್ಲಿ ಸಮ ಪ್ರಮಾಣದಲ್ಲಿರಬೇಕು
* 24 ಅರೆಗಳ ಚಕ್ರ ನೇವಿ ಬ್ಲೂ ಬಣ್ಣದಲ್ಲಿ ಬಿಳುಪಿನ ನಡುವೆ ಎರಡೂ ಬದಿಯಲ್ಲಿ ಸ್ಫುಟವಾಗಿ ಅಚ್ಚಾಗಿರಬೇಕು
* ನೆಲಕ್ಕೆ,ನೀರಿಗೆ ತಗಲುವಂತೆ ಇರಕೂಡದು
* ಬೇರೆ ಯಾವುದೇ ಅಕ್ಷರ ಘೋಷಣೆ ಅದರಲ್ಲಿ ಇರಬಾರದು
* ಸಭಾವನದಲ್ಲಿ ಇಡಬೇಕಾದ ಮತ್ತು ಹಿಂದಿನ ತೆರೆ (ಬ್ಯಾಕ್ ಡ್ರಾಪ್) ನಲ್ಲಿ ಲಗತ್ತಿಸುವಾಗ ಯಾವಾಗಲೂ ಬಲ ಬದಿಯಲ್ಲಿರಬೇಕು.
* ಅರ್ಧ ಧ್ವಜ ಹಾರಿಸಬೇಕಾದ ಸಂದರ್ಭದಲ್ಲಿ ಮೊದಲು ಏರಿಸಿ ಅರ್ಧಕ್ಕೆ ಇಳಿಸಬೇಕು.
ಅವರೋ
ಹಣದಲ್ಲಿಯೂ
ಇದೇ ಕ್ರಮ ಅನುಸರಿಸಬೇಕು.
* ಹಳೆಯ,ಜೀರ್ಣವಾದ ಧ್ವಜವನ್ನು ಎಲ್ಲೆಂದರಲ್ಲಿ ಎಸೆಯಬಾರದು. ಧ್ವಜದ ಘನತೆಗೆ ಚ್ಯುತಿ ಬಾರದಂತೆ ವಿಲೇವಾರಿ ಮಾಡಬೇಕು ಅಥವಾ ದಹಿಸ ಬಹುದು.
* ಕಾರುಗಳಲ್ಲಿ ಅಕ್ಕ ಪಕ್ಕ ಕಟ್ಟುವಂತಿಲ್ಲ. ವಿಂಡ್ ಶೀಲ್ಡ್ ಅಥವಾ ಡ್ಯಾಶ್ ಬೋರ್ಡ್ ಮೇಲಿರಿಸಬೇಕು.
* ಹಾರದೊಂದಿಗೆ ಏರಿಸುವುದು ಕೂಡದು. ಆರೋಹಣ ಸಂದರ್ಭ ಹೂವಿನ ದಳಗಳ ನ್ನು ಸೇರಿಸಬಹುದು.
ಧ್ವಜ ಜಾಗತಿಕ ಮಟ್ಟದಲ್ಲಿ ದೇಶವೊಂದನ್ನು ಗುರುತಿಸುವ ದೃಶ್ಯ ಸಾಧನ. ಆ ದೇಶದ ಸ್ವಾತಂತ್ರ್ಯ, ಸಾರ್ವ ಭೌಮತೆಯ ಸಂಕೇತ.
ಅದರ ವರ್ಣ ವಿನ್ಯಾಸಗಳು ಆಯಾ ರಾಷ್ಟ್ರಗಳು ನಂಬಿ,
ಪಾಲಿ ಸಿಕೊಂಡು ಬಂದಿರುವ ಪರಂಪರೆ ಮತ್ತು ಮೌಲ್ಯಗಳನ್ನು ಪ್ರತಿಬಿಂಬಿಸುತ್ತವೆ.
ದೇಶದ ಒಳಗಿನ ಪ್ರಾಂತ್ಯ,ಭಾಷೆ,ಧರ್ಮ,ಪಕ್ಷ, ಸಿದ್ಧಾಂತ - ಇವುಗಳಿಗೆಲ್ಲಾ ಅವುಗಳದೇ ಆದ ಧ್ವಜ ಇರುವ ಪದ್ಧತಿ ಇದೆ.ಆದರೆ ತಿರಂಗಾ ಅಥವಾ ತ್ರಿವರ್ಣ ಧ್ವಜದ ಕೆಳಗೆ ನಾವೆಲ್ಲ ಸೇರಿದಾಗ ಉಳಿದೆಲ್ಲ ವ್ಯತ್ಯಾಸಗಳೂ ಮರೆಯಾಗಿಬಿಡುತ್ತವೆ.
ಸಂಭ್ರಮದ ಕ್ಷಣಗಳು
15 ಆಗಸ್ಟ್ 1947 ಅಂಚೆ ಇಲಾಖೆಯ ಮೂರೂವರೆ ಆಣೆ ಅಂಚೆ ಚೀಟಿಯ ಮೇಲೆ ಚಕ್ರವರ್ತಿ ಜಾರ್ಜ್ ಅವರ ಚಿತ್ರವಿದ್ದ ಸ್ಥಳ ದಲ್ಲಿ ನಮ್ಮ ತಿರಂಗ ಧ್ವಜ ಮೂಡಿ ಬಂದಾಗ..
1948,52 ಮತ್ತು56 ರಲ್ಲಿ ಸತತವಾಗಿ ಹಾಕಿಯಲ್ಲಿ ಒಲಂಪಿಕ್ಸ್ ಚಿನ್ನ ಗೆದ್ದು ಆಸ್ಟ್ರೇಲಿಯಾದ ಮೆಲ್ಬೋರ್ನ್ ನಲ್ಲಿ ಭಾರತದ ಹಾಕಿ ಪಟು ಬಲ್ ಬೀರ್ ಸಿಂಗ್
ತ್ರಿವರ್ಣ ಧ್ವಜವನ್ನು ಎತ್ತಿ ಹಿಡಿದು ಸಂಭ್ರಮಿಸಿದಾಗ..
26 ಜುಲೈ 1999 ಕಾರ್ಗಿಲ್ ಡ್ರಾಸ್ ಟೈಗರ್ ಹಿಲ್ ಮೇಲೆ ನಮ್ಮ ಯೋಧರು ವಿಜಯ ಸಾಧಿಸಿ 37'X26' ವಿಸ್ತಾರದ ತಿರಂಗಾ ವನ್ನು ಎತ್ತಿ ಹಿಡಿದಾಗ..
ನಮ್ಮ ಪರ್ವತಾರೋಹಿಗಳು ತಿರಂಗವನ್ನು ಎವರೆಸ್ಟ್ ಮೇಲಿರಿಸಿ ಸಾಹಸವನ್ನು ಮೆರೆದಾಗ..
ಟಿ -20 ಕ್ರಿಕೆಟ್ ವಿಶ್ವ ಕಪ್ ಗೆದ್ದು ಅಹ್ಮದಾ ಬಾದಿನ ಕ್ರೀಡಾಂಗಣದಲ್ಲಿ ಲಕ್ಷಾಂತರ ಕ್ರೀಡಾಪ್ರೇಮಿಗಳು ತಿರಂಗಾ ಬೀಸುತ್ತಾ ಹರ್ಷಿಸುತ್ತಿದ್ದಾಗ..
ಹೀಗೆ ಎಲ್ಲೆಲ್ಲಿ ಭಾರತದ ಧ್ವಜವನ್ನು ನಭಕೆತ್ತಿ ಸಂಭ್ರ ಮಿಸಿದಾಗಲೆಲ್ಲ.. !
ಮಾಡಲೇ ಬೇಕಾದ ಕರ್ತವ್ಯಗಳು
ನಮ್ಮ ದೇಶದ ಬಗ್ಗೆ ನಾವು ತೋರಬಹುದಾದ,ಪ್ರೀತಿ,ಗೌರವ,ಶ್ರದ್ಧೆ, ಆದರ ಮತ್ತು ಬದ್ಧತೆಯ ಬಗ್ಗೆ
ಮಾತುಗಳು ಆಗಾಗ ಕೇಳಿಬರುತ್ತಿರುತ್ತವೆ.
ನಾವು ನಮ್ಮ ಮಕ್ಕಳಿಗೆ ಮತ್ತು ಯುವ ಜನತೆಗೆ ದೇಶದ ಇತಿಹಾಸ, ಸಂಸ್ಕೃತಿ, ಸಭ್ಯತೆ , ಪರಂಪರೆ ಇವುಗಳ ಕುರಿತು ಹೇಳಬೇಕು ಮತ್ತು ಹೇಳುತ್ತಲೇ ಇರಬೇಕು
ದೇಶ ಬಿಡುಗಡೆಯ ಹೋರಾಟದ ಪ್ರತಿ ಘಟ್ಟವನ್ನೂ ಅವರಿಗೆ ಮನದಟ್ಟು ಮಾಡಿಕೊಡಬೇಕು
ಅದರಲ್ಲೂ ಕರ್ನಾಟಕದಲ್ಲಿನ ಈಸೂರು,
ವಿದುರಾಶ್ವತ್ಥ.
ಶಿವಪುರ,
ಅಂಕೋಲಾ ಸತ್ಯಾಗ್ರಹಗಳ ಕುರಿತು ಮಾತನಾಡಬೇಕು. ಇಂತಹ ಸ್ಥಳಗಳು,ಸ್ಮಾರಕಗಳು,ಚಿತ್ರ ಪ್ರದರ್ಶನ ಮಳಿಗೆ ಗಳನ್ನು ಸಂದರ್ಶಿಸಬೇಕು.
ಎಲ್ಲ ರಾಷ್ಟ್ರೀಯ ಹಬ್ಬಗಳು,ಉತ್ಸವಗಳು ಮತ್ತು ಆಚರಣೆಗಳನ್ನು ಅರ್ಥಪೂರ್ಣವಾಗಿ ಆಚರಿಸಬೇಕು.
ಸಮುದಾಯದ ಮತ್ತುಸಮಾಜದ ಕೆಲಸಕಾರ್ಯಗಳಲ್ಲಿ ಸ್ವಯಂ ಪ್ರೇರಿತರಾಗಿ ಪಾಲ್ಗೊಳ್ಳಬೇಕು.
ಪಠ್ಯ ಪುಸ್ತಕಗಳಲ್ಲಿ ಅಳವಡಿಸಬೇಕು.
ಎಲ್ಲಕ್ಕೂ ಮಿಗಿಲಾಗಿ ನಾವು,ಹಿರಿಯರು,ರಾಜಕಾರಿಣಿಗಳು,ಅಧಿಕಾರಿಗಳು,ಸಾಹಿತಿಗಳು,ಶಿಕ್ಷಕರು,ಕಲಾವಿದರು ಉತ್ತಮ ಉದಾಹರಣೆಯಾಗಬೇಕು.
- ಡಾ. ಹೆಚ್. ಎಸ್.ಸುರೇಶ್.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ
