ಶಕ್ತಿ ಸಂಸ್ಥೆಗಳು: ಡ್ರಗ್ಸ್ ವಿರೋದಿ ಜಾಗೃತಿ ಕಾರ್ಯಕ್ರಮ

Upayuktha
0

 



ಮಂಗಳೂರು: ಶಕ್ತಿನಗರದ ಶಕ್ತಿ ರೆಸಿಡೆನ್ಸಿಯಲ್ ಶಾಲೆ ಮತ್ತು ಶಕ್ತಿ ಪಪೂ ಕಾಲೇಜಿನ ವಿದ್ಯಾರ್ಥಿಗಳಿಗೆ ನಶ ಮುಕ್ತ ಭಾರತದ ಅಂಗವಾಗಿ ಡ್ರಗ್ಸ್ ವಿರೋದಿ ಜಾಗೃತಿ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. 


ಈ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ನಗರ ಪೋಲೀಸ್ ಉಪ ಆಯುಕ್ತ ಮಿಥುನ್ ಹೆಚ್ ಏನ್ ಐಪಿಎಸ್ ಸಮಾಜದಲ್ಲಿ ದುಶ್ಚಟಗಳಿಗೆ ಕೆಟ್ಟ ಕಾರ್ಯಗಳಿಗೆ ಗುರಿಯಾಗಿಸಿ ಯುವ ಜನಾಂಗವನ್ನು ಹಾಳು ಮಾಡುವ ಚಟುವಟಿಕೆಗಳು ನಡೆಯುತ್ತಲೆ ಇವೆ. ಈಗಿನ ಕಾಲದಲ್ಲಿ ಮಕ್ಕಳಲ್ಲಿ ಡ್ರಗ್ಸ್ನ ಬಗ್ಗೆ ಜಾಗೃತಿ ಮೂಡಿಸುವ ಅವಶ್ಯಕತೆ ತುಂಬಾ ಇದೆ. ಆ ಕೆಲಸವನ್ನು ಶಕ್ತಿ ಆಡಳಿತ ಮಂಡಳಿ ನಡೆಸುತ್ತಿದೆ ಹಾಗಾಗಿ ಮೊದಲಿಗೆ ಶಕ್ತಿ ವಿದ್ಯಾ ಸಂಸ್ಥೆಗೆ ಅಭಿನಂದನೆಗಳು ಎಂದರು. 


ಚಿಕ್ಕ ವಯಸ್ಸಲ್ಲಿ ಡ್ರಗ್ಸ್ ಅಂದ್ರೆ ಎಷ್ಟು ದುಷ್ಟರಿಣಾಮ ಬೀರುತ್ತೆ ಅನ್ನೋದನ್ನು ಮೊದಲು ತಿಳಿದುಕೊಳ್ಳಬೇಕು. ಧೂಮಪಾನ, ಮದ್ಯಪಾನ, ಗುಟ್ಕಾ ಎಲ್ಲವು ಮನುಷ್ಯನ ದೈಹಿಕ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತೆ ಇದರಿಂದ ಜೀವನದಲ್ಲಿ ನೀವು ಕಂಡ ಕನಸು, ಗುರಿಗಳನ್ನು ತಲುಪಲು ಅಸಾಧ್ಯವಾಗದಿರಬಹುದು, ನನ್ನ ಜೀವನದಲ್ಲಿ ಈ ರೀತಿಯ ವ್ಯಸನಗಳಿಗೆ ದುಶ್ಚಟಗಳಿಗೆ ನಾನು ಬಲಿಯಾಗುವುದಿಲ್ಲ ಎಂದು ಶಪಥ ತೆಗೆದುಕೊಳ್ಳಬೇಕು. ಯಾವುದೇ ಸಂದರ್ಭದಲ್ಲಿ ಸಮಾಜದಲ್ಲಿ ಡ್ರಗ್ಸ್ ಗೆ ಸಂಬಂಧಿಸಿ ದುಷ್ಕರ್ಯಗಳು ನಡೆಯುವುದು ನಿಮ್ಮ ಗಮನಕ್ಕೆ ಬಂದರೆ ಅದನ್ನು ಭಯವಿಲ್ಲದೆ ಪೊಲೀಸ್ ಗೆ ತಿಳಿಸಬಹುದು. ಪೊಲೀಸ್ ಸಿಬ್ಬಂದಿಗಳು ಇರೋದು ನಿಮ್ಮ ಕ್ಷೇಮಕ್ಕಾಗಿ ಸಮಾಜದ ಹಿತಕ್ಕಾಗಿ. ಯಾರಾದರೂ ನಿಮಗೆ ದುಶ್ಚಟಗಳ ಸೇವನೆಗಾಗಿ ಪ್ರಚೋದನೆ ಮಾಡುತ್ತಿದ್ದರೆ ನೀವು ಅದನ್ನು ನೇರವಾಗಿ ಬೇಡ ಎಂದು ತಿರಸ್ಕರಿಸಿ. ಯಾವುದೇ ಕಾರಣಕ್ಕೂ ಹೆದರಬೇಕಿಲ್ಲ ಎಂದರು.


ವಾಮಂಜೂರು ಆರಕ್ಷಕ ಠಾಣಾ ಪೊಲೀಸ್ ಅಧಿಕಾರಿ ಅರುಣ್ ಮಾತನಾಡಿ. ಶಿಕ್ಷಣದಲ್ಲಿ ಮಕ್ಕಳಿಗೆ ಡ್ರಗ್ಸ್ ಜಾಗೃತಿ ಮೂಡಿಸುವ ಕಾರ್ಯ ಆಗಬೇಕು. ಒಮ್ಮೆ ದುಶ್ಚಟಗಳಿಗೆ ಬಲಿಯಾಗಿ ಸಮಾಜ ಘಾತಕ ಚಟುವಟಿಕೆಯಲ್ಲಿ ಸಿಕ್ಕಿಬಿದ್ದರೆ ಕಾನೂನಿನಿಂದ ಶಿಕ್ಷೆಗೆ ಗುರಿಯಾಗಬೇಕಾಗುತ್ತದೆ. ನಿಮ್ಮ ತಂದೆ ತಾಯಿಯರನ್ನೇ ನಿಮ್ಮ ಆದರ್ಶ ವ್ಯಕ್ತಿಯನ್ನಾಗಿ ಮಾಡಿಕೊಂಡು ಜೀವನದಲ್ಲಿ ಸಾಧನೆ ಮಾಡಿ. ದೃಢವಾದ ಮನಸ್ಸಿನಿಂದ ಈ ಡ್ರಗ್ಸ್ ಬಲೆಗೆ ಬೀಳದಿರೋಣ. ೧೮ ವರ್ಷಕ್ಕಿಂತ ಕೆಳಗಿನ ಮಕ್ಕಳು ಕೂಡ ಈ ಡ್ರಗ್ಸ್ ಚಟುವಟಿಕೆಯಲ್ಲಿ ತೊಡಗಿಸಿಕೊಂಡದ್ದು ಸಾಬೀತಾದರೆ ಕಾನೂನಿನ ಅಡಿಯಲ್ಲಿ ಶಿಕ್ಷೆ ಆಗುತ್ತದೆ ಎಂದರು. 


ಕನ್ನಡ ಶಿಕ್ಷಕ ಶರಣಪ್ಪ ವ್ಯಸನ ಮುಕ್ತ ಸಮಾಜ ನಿರ್ಮಾಣ ಎಂಬ ವಿಷಯದ ಕುರಿತು ವಿದ್ಯಾರ್ಥಿಗಳಲ್ಲಿ ಅರಿವು ಮೂಡಿಸುವ ಜಾಗೃತ ಗೀತೆಯನ್ನು ಹಾಡಿದರು.


ಶಕ್ತಿ ವಿದ್ಯಾ ಸಂಸ್ಥೆಯ ಸಂಸ್ಥಾಪಕ ಡಾ. ಕೆ ಸಿ ನಾಯ್ಕ್, ಶಕ್ತಿ ವಿದ್ಯಾ ಸಂಸ್ಥೆಯ ಪ್ರಧಾನ ಸಲಹೆಗಾರ ರಮೇಶ್ ಕೆ, ಶಕ್ತಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಪ್ರದೀಪ್ ಕುಮಾರ್ ಶೆಟ್ಟಿ, ಶಕ್ತಿ ರೆಸಿಡೆನ್ಸಿಯಲ್ ಶಾಲಾ ಪ್ರಾಂಶುಪಾಲೆ ಸುರೇಖಾ ಆರ್ ಭಟ್ ಉಪಸ್ಥಿತರಿದ್ದರು.


ಶಿಕ್ಷಕಿ ಪ್ರಿಯಾಂಕ ಕಾರ್ಯಕ್ರಮ ನಿರೂಪಿಸಿ, ಚೇತನ ಸ್ವಾಗತಿಸಿದರು. ಭವ್ಯಶ್ರೀ ವಂದಿಸಿದರು.


ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top