ಎಸ್. ಜಾನಕಿ ಗಾನನಮನ: ಸಂಗೀತ ಲೋಕದ ಕೋಗಿಲೆಗೆ 'ಸ್ಪಂದನಾ' ಭಾವಪೂರ್ಣ ನುಡಿನಮನ

Upayuktha
0


ಸುರಪುರ: ಇಲ್ಲಿನ ಕನ್ನಡ ಸಾಹಿತ್ಯ ಸಂಘದ ಸಭಾಂಗಣದಲ್ಲಿ ‘ಸ್ಪಂದನಾ ಮೆಲೋಡೀಸ್’ ಹಾಗೂ ಗೆಳೆಯರ ಬಳಗದ ಸಂಯುಕ್ತ ಆಶ್ರಯದಲ್ಲಿ ಭಾರತೀಯ ಚಿತ್ರರಂಗದ ಪ್ರಖ್ಯಾತ ಹಿನ್ನೆಲೆ ಗಾಯಕಿ ಎಸ್. ಜಾನಕಿ ಅವರಿಗೆ ಭಾವಪೂರ್ಣ 'ನುಡಿನಮನ' ಹಾಗೂ 'ಗಾನನಮನ' ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.


ಕಾರ್ಯಕ್ರಮದಲ್ಲಿ ಮುಖ್ಯ ಭಾಷಣಕಾರರಾಗಿ ಆಗಮಿಸಿದ್ದ ಸಾಹಿತಿ ಶ್ರೀನಿವಾಸ ಜಾಲವಾದಿ ಮಾತನಾಡಿ, ಎಸ್. ಜಾನಕಿ ಅವರು ಇಡೀ ವಿಶ್ವವೇ ಕಂಡ ಅದ್ಭುತ ಪ್ರತಿಭೆ. ಮೂಲತಃ ತೆಲುಗು ಭಾಷೆಯವರಾಗಿದ್ದರೂ, ಅವರು ಸದಾ ಕನ್ನಡವನ್ನೇ ತಮ್ಮ ಉಸಿರಾಗಿಸಿಕೊಂಡಿದ್ದರು. 22 ಭಾಷೆಗಳಲ್ಲಿ ಸುಮಾರು 48,000ಕ್ಕೂ ಹೆಚ್ಚು ಗೀತೆಗಳನ್ನು ಹಾಡಿರುವ ಈ ಜೇನುಕಂಠದ ಗಾಯಕಿ ಇಂದು ನಮ್ಮನ್ನಗಲಿರಬಹುದು, ಆದರೆ ಈ ಜಗತ್ತು ಇರುವವರೆಗೆ ಅವರ ಹಾಡುಗಳು ಜನರ ಮನಸ್ಸಿನಲ್ಲಿ ಅನುರಣಿಸುತ್ತಲೇ ಇರುತ್ತವೆ ಎಂದು ಬಣ್ಣಿಸಿದರು.


ಕಾರ್ಯಕ್ರಮವನ್ನು ಸುರಪುರ ಕನ್ನಡ ಸಾಹಿತ್ಯ ಸಂಘದ ಅಧ್ಯಕ್ಷರಾದ ಬಸವರಾಜ ಜಮದ್ರಖಾನಿ  ಉದ್ಘಾಟಿಸಿ ಶುಭ ಹಾರೈಸಿದರು.


ಸಂಗೀತ ಸಂಜೆಯಲ್ಲಿ ಗಾಯಕರಾದ ರಮೇಶ ಕಟ್ಟಿಮನಿ, ನರಸಿಂಹ ಬಾಡಿಯಾಳ, ಶ್ರೀಪಾದ ಭಟ್ಟ, ಶಿಲ್ಪಾ ಪಾಟೀಲ, ರಾಜೇಶ ಮಸ್ಕಿ, ಸಿದ್ದರಾಜ ಕೆ., ಮಹೇಶ ಜಾಗೀರದಾರ, ಶರಣು ಮೊಗಲಿ, ಶಿವು ಮಂಗಿಹಾಳ, ಸುರೇಶ, ವೀರೂಪಾಕ್ಷ ಹೂಗಾರ, ಕಿರಣ, ಶರಣು, ಕೀರಲಿಂಗಪ್ಪ ಹಾಗೂ ಅನ್ನಪೂರ್ಣ ಸುರಪುರ ಅವರು ಜಾನಕಿಯವರ ಜನಪ್ರಿಯ ಗೀತೆಗಳನ್ನು ಪ್ರಸ್ತುತಪಡಿಸಿದರು. ಕಾರ್ಯಕ್ರಮದುದ್ದಕ್ಕೂ ಜಾನಕಮ್ಮನವರು ಹಾಡಿ ಅಮರಗೊಳಿಸಿದ ಮಧುರ ಗೀತೆಗಳ ಝೇಂಕಾರ ಮೊಳಗಿದ್ದು, ನೆರೆದಿದ್ದ ಸಂಗೀತ ಪ್ರೇಮಿಗಳನ್ನು ಪ್ರೇಮಲೋಕ ಹಾಗೂ ಭಾವಲೋಕಕ್ಕೆ ಕರೆದೊಯ್ಯಿತು.


ಇದೇ ಸಂದರ್ಭದಲ್ಲಿ ಸುರಪುರ ಕನ್ನಡ ಸಾಹಿತ್ಯ ಸಂಘದ ವತಿಯಿಂದ ಇಬ್ಬರು ಸಾಧಕರನ್ನು ಸನ್ಮಾನಿಸಲಾಯಿತು. ಸುರಪುರ ಅರ್ಬನ್ ಕೋ-ಆಪರೇಟಿವ್ ಬ್ಯಾಂಕಿನ ನೂತನ ನಿರ್ದೇಶಕರಾಗಿ ನಾಮನಿರ್ದೇಶನಗೊಂಡ ಹಿನ್ನೆಲೆಯಲ್ಲಿ ನರಸಿಂಹ ಬಾಡಿಯಾಳ (ಗಾಯಕ) ಹಾಗೂ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಯಿಂದ (KSCA) ಯಾದಗಿರಿ ಜಿಲ್ಲೆಯ ಆಯ್ಕೆದಾರರಾಗಿ ನೇಮಕಗೊಂಡ ಹಿನ್ನೆಲೆಯಲ್ಲಿ ಸಿದ್ದರಾಜ ಕೆ.


ಗಾಯಕ ಶ್ರೀಪಾದ ಭಟ್ಟ ನಿರೂಪಿಸಿ, ನಗರಸಭೆ ನಾಮನಿರ್ದೇಶಿತ ಸದಸ್ಯ ಪ್ರಕಾಶ ಅಲಬನೂರ ವಂದಿಸಿದರು. ಕಾರ್ಯಕ್ರಮದಲ್ಲಿ ನಗರದ ಸಾಹಿತ್ಯ ಹಾಗೂ ಸಂಗೀತ ಪ್ರೇಮಿಗಳು ಅಪಾರ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು.


ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top