ಮಂಗಳೂರು ಮಹಾನಗರಪಾಲಿಕೆ: ಹಣ್ಣಿನ ಗಿಡ ನೆಡುವ ಕಾರ್ಯಕ್ರಮ

Upayuktha
0


ಮಂಗಳೂರು: ಮಹಾನಗರಪಾಲಿಕೆ ವ್ಯಾಪ್ತಿಯ ಪಚ್ಚನಾಡಿ ಡಂಪಿಂಗ್ ಯಾರ್ಡ್ ಪ್ರದೇಶದಲ್ಲಿ ಬುಧವಾರ ಮಂಗಳೂರಿನ ಹಸಿರೀಕರಣಕ್ಕಾಗಿ ಹಾಗೂ ಅಳಿದು ಹೋದ ಗುಬ್ಬಚ್ಚಿ, ಕೋಗಿಲೆ, ಅಳಿಲು, ಗಿಳಿ ಹಾಗೂ ಇನ್ನಿತರ ಪಕ್ಷಿ ಸಂಕುಲ ಮರಳಿ ಕರೆ ತರಲು ಸಮುದಾಯ ಚಳುವಳಿಯಡಿ 200 ಹಣ್ಣು ನೀಡುವ ಗಿಡಗಳನ್ನು ನೆಡಲಾಗಿದೆ.
      
ರೋಟರಿ ಮಿಡ್ ಟೌನ್ ಆ್ಯಂಡ್ ಫ್ಯೂಚರ್ ಅಕಾಡೆಮಿ 200 ಹಣ್ಣಿನ ಗಿಡಗಳ ಪ್ರಾಯೋಜಕತೆ ಮಾಡಿರುತ್ತಾರೆ. ಸೈಂಟ್ ರೈಮಂಡ್ಸ್ ಡಿಗ್ರಿ ಕಾಲೇಜು ವಿದ್ಯಾರ್ಥಿಗಳು ಮತ್ತು ಎನ್.ಎಸ್.ಎಸ್ ಅಧಿಕಾರಿಗಳು ಪಚ್ಚನಾಡಿ ಡಂಪಿಂಗ್ ಯಾರ್ಡ್‍ನಲ್ಲಿ ಸುಮಾರು ಗಿಡಗಳನ್ನು ನೆಡಲು ಸಹಕರಿಸಿದರು.
     
ಈ ಸಂದರ್ಭದಲ್ಲಿ ಮಹಾನಗರಪಾಲಿಕೆ ಕದ್ರಿ ವಲಯ ಆಯುಕ್ತೆ ರೇಖಾ ಜೆ ಶೆಟ್ಟಿ, ಸಮಾಜ ಸೇವಕಿ ಕ್ರಾಸ್ತ, ಸಂಘಟನಾಧಿಕಾರಿಗಳಾದ ವಿನಿತ ರೈ, ಟೀನಾ ಪಿರೇರಾ, ಹಾಗೂ ಅಕ್ಷಿತ ಶೆಟ್ಟಿ, ಗ್ಲೋಬಲ್ ಟಿವಿ ನಿರ್ದೇಶಕ ಪೌಲ್, ಒಣ ಟ್ರಸ್ಟ್ ಸಹ ಪಾಲುದಾರ ಜೀತ್ ರೋಚ್ ಮತ್ತಿತ್ತರರು ಇದ್ದರು.

Post a Comment

0 Comments
Post a Comment (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top