ಮಂಗಳೂರು: ಲಯನ್ಸ್ ಕ್ಲಬ್ ಮಂಗಳೂರು ಸೆಂಟೆನಿಯಲ್‌ನ 2026–27ನೇ ಸಾಲಿನ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭವು ನಗರದ ಕದ್ರಿ ಪಾರ್ಕ್ ಸಮೀಪದ ಲಯನ್ಸ್ ಅಶೋಕ ಭವನದಲ್ಲಿ ನಡೆಯಿತು.
ಸಮಾರಂಭದಲ್ಲಿ ಲಯನ್ ಅಮಲ್ ಮರಿಯಾ ಇಸಬೆಲ್ಲಾ ಕ್ವಾಡ್ರೋಸ್ (PMJF) ನೂತನ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದರು. ಲಯನ್ ಸ್ವರೂಪ್ ಎನ್. ಶೆಟ್ಟಿ (PMJF) ನೂತನ ಪದಾಧಿಕಾರಿಗಳಿಗೆ ಅಧಿಕಾರದ ಪ್ರಮಾಣವಚನ ಬೋಧಿಸಿ, ಐವರು ನೂತನ ಸದಸ್ಯರನ್ನು ಲಯನ್ಸ್ ಕುಟುಂಬಕ್ಕೆ ಸೇರ್ಪಡೆಗೊಳಿಸಿದರು. ಕ್ಲಬ್ ಸಮಾಜಮುಖಿ ಸೇವಾ ಚಟುವಟಿಕೆಗಳನ್ನು ಶ್ಲಾಘಿಸಿದ ಅವರು, ಮುಂದೆಯೂ ಇನ್ನಷ್ಟು ಅರ್ಥಪೂರ್ಣ ಸೇವಾ ಕಾರ್ಯಗಳನ್ನು ಕೈಗೊಳ್ಳುವಂತೆ ಶುಭ ಹಾರೈಸಿದರು.
ನೂತನ ಕಾರ್ಯಕಾರಿ ಸಮಿತಿಯಲ್ಲಿ ರಿಚರ್ಡ್ ಪಿಂಟೋ ಕಾರ್ಯದರ್ಶಿಯಾಗಿ, ಸುರೇಶ್ ಮೊಂತೇರೊ ಖಜಾಂಚಿಯಾಗಿ, ಹೆರಾಲ್ಡ್ ಡಿ’ಕುನ್ಹಾ ಹಾಗೂ ಲಾರೆನ್ಸ್ ಲೋಬೊ ಉಪಾಧ್ಯಕ್ಷರಾಗಿ, ಡಯಾನಾ ಶಾನ್‌ಭೋಗ್, ವಿನ್ಸೆಂಟ್ ಪಿರೇರಾ (ಜನಸಂಪರ್ಕಾಧಿಕಾರಿ), ತೇಜಾಕ್ಷಿ ಸುವರ್ಣ, ಹಿಲ್ಡಾ ಉರ್ವಾ, ಜಸಿಂತಾ ಲೋಬೊ, ಶ್ರೀರಾಮ್ ರೈ, ಆಂಡ್ರಿಯಾ ಫೆರ್ನಾಂಡಿಸ್ ಹಾಗೂ ಉಜ್ವಲ್ ಡಿ’ಕುನ್ಹಾ ವಿವಿಧ ಹುದ್ದೆಗಳಿಗೆ ಅಧಿಕಾರ ಸ್ವೀಕರಿಸಿದರು.
ಕಾರ್ಯಕ್ರಮದಲ್ಲಿ ಮಾಜಿ ಜಿಲ್ಲಾ ಗವರ್ನರ್ ಕುಡ್ಪಿ ಅರವಿಂದ್ ಶೆಣೈ (PMJF), ಪ್ರಾದೇಶಿಕ ಅಧ್ಯಕ್ಷ ಜಯರಾಜ್ ಪ್ರಕಾಶ್ ಹಾಗೂ ವಲಯ ಅಧ್ಯಕ್ಷ ಗಣೇಶ್ ಸಾಲ್ಯಾನ್ ನೂತನ ಪದಾಧಿಕಾರಿಗಳನ್ನು ಅಭಿನಂದಿಸಿ, ಕ್ಲಬ್‌ನ ಸಮಾಜಮುಖಿ ಸೇವಾ ಕಾರ್ಯಗಳನ್ನು ಶ್ಲಾಘಿಸಿದರು.
ಈ ಸಂದರ್ಭದಲ್ಲಿ ಸುಮಾರು ₹2.50 ಲಕ್ಷ ಮೌಲ್ಯದ ವಿವಿಧ ಸೇವಾ ಯೋಜನೆಗಳಿಗೆ ಚಾಲನೆ ನೀಡಲಾಯಿತು. ಕಾರ್ಗಿಲ್ ವಿಜಯ ದಿವಸ್ ಅಂಗವಾಗಿ ಸುಬೇದಾರ್ ಭರತ್ ಕುಮಾರ್ ಅವರನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮದ ಆಯೋಜನೆಯಲ್ಲಿ ವಲಯ ಎನ್ವಾಯ್ ಲಾರೆನ್ಸ್ ಲೋಬೊ ಸಹಕರಿಸಿದರು. ಜನಸಂಪರ್ಕಾಧಿಕಾರಿ ವಿನ್ಸೆಂಟ್ ಪಿರೇರಾ ಕಾರ್ಯಕ್ರಮ ನಿರೂಪಿಸಿ, ಸುರೇಶ್ ಮೊಂತೇರೊ ವಂದಿಸಿದರು. ವಿವಿಧ ಲಯನ್ಸ್ ಕ್ಲಬ್‌ಗಳ ಪದಾಧಿಕಾರಿಗಳು ಹಾಗೂ ಸದಸ್ಯರು ಉಪಸ್ಥಿತರಿದ್ದು ನೂತನ ತಂಡಕ್ಕೆ ಶುಭ ಹಾರೈಸಿದರು. ಪ್ರತಿಭಾ ಮತ್ತು ತಂಡದವರಿಂದ ಸಂಗೀತ ಕಾರ್ಯಕ್ರಮ ನಡೆಯಿತು.
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


